ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಲಂಡಾಗ್ ಮಿಲೇನಿಯರ್ ಚಿತ್ರದಲ್ಲಿ ಹಿಂದುತ್ವಕ್ಕೆ ಧಕ್ಕೆ

By Staff
|
Google Oneindia Kannada News

ಪಣಜಿ, ಜ. 23 : ಸ್ಲಂ ಡಾಗ್ ಚಿತ್ರದ ಜೈ ಹಿಂದ್ ಎನ್ನುವ ಹಾಡಿಗೆ ಖ್ಯಾತ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಪಡೆದುಕೊಂಡಿದ್ದು ಹಳೆಯ ವಿಷಯ. ಈ ಚಿತ್ರ ಆಸ್ಕರ್ ಪ್ರಶಸ್ತಿಗೂ ಕೂಡ ನಾಮಕರಣಗೊಂಡಿರುವುದು ಭಾರತೀಯ ಸಿನಿ ಅಭಿಮಾನಿಗಳಿಗೆ ಭಾರಿ ಸಂತೋಷದ ಸಂಗತಿಯೇ ಆಗಿದೆ. ಆದರೆ, ಸ್ಲಂಡಾಗ್ ಚಿತ್ರದಲ್ಲಿ ಹಿಂದೂ ಸಮುದಾಯದ ಆರಾಧ್ಯ ದೈವ ಶ್ರೀರಾಮಚಂದ್ರನನ್ನು ಅವಹೇಳನ ಮಾಡಲಾಗಿದೆ. ಈ ಕಾರಣದಿಂದ ಸ್ಲಂಡಾಗ್ ಮಿಲೇನಿಯರ್ ಚಿತ್ರದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಗೋವಾದ ಹಿಂದೂ ಜಾಗರಣ ಸಮಿತಿ ಬೆದರಿಕೆ ಹಾಕಿದೆ.

ಸ್ಲಂಡಾಗ್ ಚಿತ್ರದಲ್ಲಿ ಹಿಂದೂಗಳು ಆರಾಧ್ಯದೈವನೆಂದು ಪೂಜಿಸುವ ಶ್ರೀರಾಮಚಂದ್ರನನ್ನು ಅವಹೇಳನ ಮಾಡಲಾಗಿದೆ. ಭಾರತದಲ್ಲಿದ್ದು ಹಿಂದೂಗಳ ಭಾವನೆಗಳನ್ನು ಧಕ್ಕೆ ಬರುವಂತಹ ಚಿತ್ರ ನಿರ್ಮಿಸಿರುವುದು ಖಂಡನೀಯ. ಚಿತ್ರ ಪ್ರದರ್ಶನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಗೋವಾ ಹಿಂದೂಜಾಗರಣ ಸಮಿತಿ ವಕ್ತಾರ ಜಯೇಶ್ ಥಾಲಿ ತಿಳಿಸಿದ್ದಾರೆ.

ಇಂದು ( ಜ.23) ದೇಶಾದ್ಯಂತ ಸ್ಲಂಡಾಗ್ ಮಿಲೇನಿಯರ್ ಚಿತ್ರ ಬಿಡುಗಡೆ ಕಂಡಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗುವ ಚಿತ್ರ ಪ್ರದರ್ಶನಕ್ಕೆ ಯಾವ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಗೋವಾ ಹಿಂದು ಜಾಗರಣ ಸಮಿತಿ ಸದಸ್ಯರು ಮುಂಬೈನಲ್ಲಿರುವ ಕೇಂದ್ರೀಯ ಚಲನಚಿತ್ರ ಆಕಾಡೆಮಿಗೆ ಭೇಟಿ ನೀಡಿ ಮನವಿ ಮಾಡಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಹತ್ತು ಆಸ್ಕರ್ ಪ್ರಶಸ್ತಿಗಳಿಗೆ ಸ್ಲಂಡಾಗ್ ನಾಮಕರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X