157802ನಿಧನಖ್ಯಾತ ಗಾಯಕ ರಾಜು ಅನಂತಸ್ವಾಮಿ ನಿಧನ/news/2009/01/17/singer-raju-ananthaswamy-passes-away.htmlಬೆಂಗಳೂರು, ಜ.17: ಖ್ಯಾತ ಸುಗಮ ಸಂಗೀತ ಗಾಯಕ, ದಿವಂಗತ ಮೈಸೂರು ಅನಂತಸ್ವಾಮಿ ಅವರ ಪುತ್ರ ರಾಜು ಅನಂತಸ್ವಾಮಿ(37) ಶನಿವಾರ ಬೆಳಗ್ಗೆ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಸುಗಮ ಸಂಗೀತದ ನಿರ್ದೇಶಕರಾಗಿ,ಸಂಯೋಜಕರಾಗಿ, 34119http://kannada.oneindia.com/img/2009/01/17-raju-ananthaswamy1.jpg157802ನಿಧನಸಾವಿರ ಚಿತ್ರಗಳ ಸರದಾರ ನಾಗೇಶ್ ಇನ್ನಿಲ್ಲ/movies/hero/2009/01/30-veteran-actor-nagesh-passes-away.htmlಚೆನ್ನೈ, ಜ.31: ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಪ್ರಮುಖ ಹಾಸ್ಯ ನಟ ತಾಯ್ ನಾಗೇಶ್(ಗುಂಡೂರಾವ್) ಶನಿವಾರ ನಿಧನರಾದರು. ನಾಗೇಶ್ ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಘನತೆ ನಾಗೇಶ್ ಅವರದು. ಅವರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.ಕನ್ನಡ ಬ್ರಾಹ್ಮಣ ಮಧ್ವ ಕುಟುಂಬದಲ್ಲಿ ಜನಿಸಿದ ನಾಗೇಶ್ ಚಿತ್ರರಂಗದೆಡೆಗೆ ಆಕರ್ಷಿತರಾಗಿ ಚಿಕ್ಕಂದಿನಲ್ಲೇ ಮನೆ 34396http://kannada.oneindia.com/img/2009/01/31-nagesh1.jpg157802ನಿಧನನಟ, ನಿರ್ದೇಶಕ ಫಿರೋಜ್ ಖಾನ್ ನಿಧನ/movies/bollywood/2009/04/27-legendary-actor-director-feroz-khan-dead.htmlಬೆಂಗಳೂರು, ಏ. 27: ಹೆಸರಾಂತ ಹಿಂದಿ ನಟ ಮತ್ತು ನಿರ್ದೇಶಕ ಫಿರೋಜ್ ಖಾನ್ ಬೆಂಗಳೂರಿನಲ್ಲಿರುವ ತನ್ನ ಫಾರ್ಮ್ ಹೌಸ್ ನಲ್ಲಿ ನಿನ್ನೆ(ಏ.26)ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಅವರು ಕಳೆದ ಒಂದು ವರ್ಷಗಳಿಂದ ಕ್ಯಾನ್ಸರ್ ಸಂಬಂಧ ಕಾಯಿಲೆಯಿಂದ ಬಳುತ್ತಿದ್ದರು.2007 ರಲ್ಲಿ ಅವರು ನಟಿಸಿದ್ದ 'ವೆಲ್ಕಮ್' ಚಿತ್ರ ಅವರ ಕೊನೆಯ ಚಿತ್ರವಾಗಿತ್ತು. ಅಲ್ಲಿಂದ ಬಣ್ಣದಲೋಕದಿಂದ ದೂರ ಸರಿದಿದ್ದರು. 36229http://kannada.oneindia.com/img/2009/04/27-feroz-khan1.jpg157802ನಿಧನವಯಲಾರ್ ರವಿಗೆ ಪತ್ನಿ ವಿಯೋಗ/news/2009/09/05/vayalar-ravis-wife-passes-away.htmlಚೆನ್ನೈ, ಸೆ.5:ಭಾರತದ ಸಾಗರೋತ್ತರ ವ್ಯವಹಾರಗಳ ಖಾತೆ ಸಚಿವ ವಯಲಾರ ರವಿ ಅವರ ಪತ್ನಿ ಮರ್ಸಿ ರವಿ ಅವರು ಶನಿವಾರ ಮುಂಜಾನೆ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮದ್ರಾಸ್ ಮೆಡಿಕಲ್ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರ್ಸಿ ರವಿ ಅವರು ಮೂತ್ರಜನಕಾಂಗದ ತೊಂದರೆಯಿಂದ ಬಳಲುತ್ತಿದ್ದರು. ಇಂದು ಮುಂಜಾನೆ 3 ಗಂಟೆಗೆ ಅವರ ಮೂತ್ರಜನಕಾಂಗ 39013http://kannada.oneindia.com/img/2009/09/05-vayalar-ravi-mercy-ravi1.jpg148175ಸುಗಮ ಸಂಗೀತಕಾಡುಕುದುರೆ ಖ್ಯಾತಿಯ ಸುಬ್ಬಣ್ಣನಿಗೆ ಗೌರವ/movies/music/2009/01/07-shivmoga-subbanna-to-preside-tumkur-sammelana.htmlಕರ್ನಾಟಕ ಸುಗಮ ಸಂಗೀತ ಪರಿಷತ್ತಿನ 7ನೇ ಕನ್ನಡ ಸಮ್ಮೇಳನದ ಅಧ್ಯಕ್ಷರನ್ನಾಗಿ ರಾಷ್ಟ್ರ ಪ್ರಶಸ್ತಿ ಖ್ಯಾತಿಯ ಶಿವಮೊಗ್ಗ ಸುಬ್ಬಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ತುಮಕೂರಿನಲ್ಲಿ ಫೆಬ್ರವರಿ 14 ಮತ್ತು 15ರಂದು ಸಮ್ಮೇಳನ ನಡೆಯಲಿದೆ. ಸಿದ್ಧಗಂಗಾ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಗಳು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ತಿಳಿಸಿದರು. ಡಾ.ಚಂದ್ರಶೇಖರ ಕಂಬಾರರ ''ಕಾಡು ಕುದುರೆ ಓಡಿ ಬಂದಿತ್ತಾ....ಕಾಡಿನಿಂದ ಚೆಂಗನೆ 33930http://kannada.oneindia.com/img/2009/01/07-shivmoga-subbanna1.jpg148175ಸುಗಮ ಸಂಗೀತಖ್ಯಾತ ಗಾಯಕ ರಾಜು ಅನಂತಸ್ವಾಮಿ ನಿಧನ/news/2009/01/17/singer-raju-ananthaswamy-passes-away.htmlಬೆಂಗಳೂರು, ಜ.17: ಖ್ಯಾತ ಸುಗಮ ಸಂಗೀತ ಗಾಯಕ, ದಿವಂಗತ ಮೈಸೂರು ಅನಂತಸ್ವಾಮಿ ಅವರ ಪುತ್ರ ರಾಜು ಅನಂತಸ್ವಾಮಿ(37) ಶನಿವಾರ ಬೆಳಗ್ಗೆ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಸುಗಮ ಸಂಗೀತದ ನಿರ್ದೇಶಕರಾಗಿ,ಸಂಯೋಜಕರಾಗಿ, 34119http://kannada.oneindia.com/img/2009/01/17-raju-ananthaswamy1.jpg148175ಸುಗಮ ಸಂಗೀತಗಾಯಕ ರಾಜು ನೆನಪಿನಲ್ಲಿ ಸಂಗೀತ ಸಂಜೆ/news/2009/03/10/tribute-to-raju-anathaswamy-hampingar-library.htmlಬೆಂಗಳೂರು, ಮಾ. 10: ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಓದಿನರಮನೆಯಲ್ಲಿ ತಿಂಗಳ ಒನಪು-33ನೇ ಮಾಲಿಕೆಯಲ್ಲಿ ರಾಜು ಅನಂತಸ್ವಾಮಿ ಸ್ಮರಣೆಗಾಗಿ ಮಾ.11ರಂದು ಸುಗಮ ಸಂಗೀತ ಏರ್ಪಡಿಸಿದೆ.ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮ ವನ್ನು ಪ್ರತಿ ತಿಂಗಳ 11 ರಂದು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಈವರೆಗೆ 33 ಕಂತುಗಳನ್ನುಪೂರೈಸಿದ್ದು, ಪ್ರಸ್ತುತ 34ನೇ ಸರಣಿ ಕಾರ್ಯಕ್ರಮ ನಡೆಸುತ್ತಿದೆ. 35117http://kannada.oneindia.com/img/2009/03/10-raju-ananthaswamy1.jpg148175ಸುಗಮ ಸಂಗೀತಸಿಡ್ನಿ ಕನ್ನಡಿಗರಿಗೆ ಸಂಗೀತದೌತಣ ಬಡಿಸಿದ ಅಶ್ವಥ್/nri/article/2009/0324-music-concert-by-c-ashwath-in-sydney.html* ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ ಕನ್ನಡ ಕವಿತೆಗಳಲ್ಲಿ, ಹಾಡುಗಳಲ್ಲಿ ಹರಿದಿರುವ ಭಾವಧಾರೆ ಸೋಜಿಗ ತರುವಂತದ್ದು. ಈ ಧಾರೆಯನ್ನು ಸಂಗೀತವಾಗಿ ಎರಕಹೊಯ್ಯುವುದು ಕನ್ನಡಕ್ಕೆ ಅನನ್ಯವಾದ ಪದ್ಧತಿ. ಇದಕ್ಕೆಂದೇ ಟೊಂಕ ಕಟ್ಟಿ ನಿಂತಿದ್ದಾರೆ ಸಿ ಅಶ್ವಥ್. ಇದೇ ಮಾರ್ಚ್ ಹದಿನಾಲ್ಕರಂದು ಸಿಡ್ನಿಯಲ್ಲಿ ಜರುಗಿದ ಅವರ ಕಾರ್ಯಕ್ರಮದಲ್ಲಿ ಕುಳಿತವರಿಗೆ ಕುಳಿತಲ್ಲೆ ಹತ್ತಾರು ಭಾವನೆಗಳು ಕೈಬೀಸಿ, ಮೈಮುಟ್ಟಿ, ಅಲುಗಿಸಿದ ಅನುಭವ. ಅವರ ಜತೆ 35475http://kannada.oneindia.com/img/2009/03/24-ashwath-nathan1.jpg148175ಸುಗಮ ಸಂಗೀತಸಿಡ್ನಿಯಲ್ಲಿ ಸಂಗೀತ ನಿರ್ದೇಶಕ ಸಿ. ಅಶ್ವಥ್/nri/article/2009/0324-c-ashwath-interview-by-sydney-srinivas.html* ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ ವಾರವಿಡೀ ಸಿಡ್ನಿ, ಮೆಲ್ಬೋರ್ನ್‌ಗಳಲ್ಲಿ ಸಂಗೀತ ಮತ್ತಿತರ ಕಾರ್ಯಕ್ರಮಗಳು ಇದ್ದದ್ದರಿಂದ ಖ್ಯಾತ ಸಂಗೀತ ನಿರ್ದೇಶಕ, ಹಾಡುಗಾರ ಸಿ. ಅಶ್ವಥ್ ಅವರ ಜೊತೆ ಕುಳಿತು ನಾಲ್ಕು ಮಾತುಗಳನ್ನಾಡುವ ಅವಕಾಶ ಸಿಕ್ಕಿರಲೇ ಇಲ್ಲ. ಕೊನೆಗೂ ಸದವಕಾಶ ಸಿಕ್ಕಿದ್ದು ಅವರೊಡನೆ ಸಿಡ್ನಿಯ ಪ್ರೇಕ್ಷಣೀಯ ಬೋಂಡಾಯ್ ಬೀಚ್ ಮತ್ತು ವಾಟ್ಸನ್ಸ್ ಬೇ ನೋಡಲು ಡ್ರೈವ್ ಹೋದಾಗ. ಪ್ರಾಯಶಃ ವಿಪರೀತ 35477http://kannada.oneindia.com/img/2009/03/24-ashwath-in-sydney1.jpgnews"> ಖ್ಯಾತ ಗಾಯಕ ರಾಜು ಅನಂತಸ್ವಾಮಿ ನಿಧನ | Singer Raju Ananthaswamy passes away - ಖ್ಯಾತ ಗಾಯಕ ರಾಜು ಅನಂತಸ್ವಾಮಿ ನಿಧನ - Kannada Oneindia

ಖ್ಯಾತ ಗಾಯಕ ರಾಜು ಅನಂತಸ್ವಾಮಿ ನಿಧನ

Raju Ananthaswamy passes away
ಬೆಂಗಳೂರು, ಜ.17: ಖ್ಯಾತ ಸುಗಮ ಸಂಗೀತ ಗಾಯಕ, ದಿವಂಗತ ಮೈಸೂರು ಅನಂತಸ್ವಾಮಿ ಅವರ ಪುತ್ರ ರಾಜು ಅನಂತಸ್ವಾಮಿ(37) ಶನಿವಾರ ಬೆಳಗ್ಗೆ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಸುಗಮ ಸಂಗೀತದ ನಿರ್ದೇಶಕರಾಗಿ,ಸಂಯೋಜಕರಾಗಿ, ಗಾಯಕರಾಗಿ ಅವರ ತಂದೆ ಹಾಕಿಕೊಟ್ಟಿದ್ದ ಪರಂಪರೆಯನ್ನು ರಾಜು ಮುಂದುವರಿಸಿಕೊಂಡು ಬಂದಿದ್ದರು. ಸುಗಮ ಸಂಗೀತ ಕ್ಷೇತ್ರವನ್ನು ಕರ್ನಾಟಕದಲ್ಲಿ 15 ವರ್ಷಗಳಿಗೂ ಅಧಿಕ ಕಾಲ ಆಳಿದ ಘನತೆ ರಾಜು ಅವರಿಗೆ ಸಲ್ಲುತ್ತದೆ. ಆಕಾಶವಾಣಿ,ದೂರದರ್ಶನ, ಉದಯ ಟಿವಿ, ಈ ಟಿವಿ ಕನ್ನಡದಲ್ಲಿ ಅವರ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ಪ್ರಸಾರವಾಗುತ್ತಿದ್ದವು.

ವಿಪರೀತ ಮದ್ಯ ವ್ಯಸನಿಯಾಗಿದ್ದ ರಾಜು ಅನಂತಸ್ವಾಮಿ ಎರಡು ಬಾರಿ ಸಾವಿನ ಬಾಗಿಲನ್ನು ತಟ್ಟಿ ಬಂದಿದ್ದರು. ಕುಡಿತದ ಚಟದಿಂದಾಗಿ ಹಲವಾರು ಸಲ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಇತ್ತೀಚೆಗೆ ಕುಡಿತವನ್ನು ತ್ಯಜಿಸಿದ್ದರು. ಹಲವು ಚಿತ್ರಗಳಲ್ಲಿ ಹಾಸ್ಯ ನಟರಾಗಿಗೂ ರಾಜು ಅನಂತಸ್ವಾಮಿ ನಟಿಸಿದ್ದರು. ಪುನೀತ್ ರಾಜ್ ಕುಮಾರ್ ಅವರ 'ಅಭಿ' ಚಿತ್ರದಲ್ಲಿನ ನಟನೆಗಾಗಿ ಉತ್ತಮ ಹಾಸ್ಯ ನಟ ಪ್ರಶಸ್ತಿಯನ್ನು ಅವರು ಪಡೆದಿದ್ದರು.ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೃತ ಧಾರೆ' ಮತ್ತು ಜಾಕ್ ಪಾಟ್ ಚಿತ್ರಗಳಲ್ಲಿ ನಟಿಸಿದ್ದರು. ಅನಂತ ನಮನ, ಹೂವು, ದೀಪೋತ್ಸವ, ಹರಿ ನಿನ್ನ ಮುರಳಿ ಮುಂತಾದ ಆಲ್ಬಂಗಳನ್ನು ರಾಜು ಅನಂತಸ್ವಾಮಿ ತಂದಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+