For Daily Alerts
ಮಂಗಳೂರು-ದುಬೈ ರಾತ್ರಿ ವಿಮಾನ ಸಂಚಾರ
ಮಂಗಳೂರು, ಜ. 13 : ಏರ್ಇಂಡಿಯಾ ಮಂಗಳೂರು ಮತ್ತು ದುಬೈ ನಡುವೆ ರಾತ್ರಿ ವಿಮಾನ ಸಂಚಾರ ವ್ಯವಸ್ಥೆ ನಿನ್ನೆಯಿಂದ ಆರಂಭಿಸಿದೆ. ಇದರಿಂದ ಈ ಎರಡೂ ನಗರದೊಳಗಿನ ವಿಮಾನ ಹಾರಾಟ ಸಂಖ್ಯೆ 7 ರಿಂದ 10ಕ್ಕೆ ಏರಿದಂತಾಯಿತು.
186 ಪ್ರಯಾಣಿಕರಿದ್ದ ವಿಮಾನ ಸೋಮವಾರ ರಾತ್ರಿ 9.30ಕ್ಕೆ ಇಲ್ಲಿಂದ ದುಬೈಗೆ ಪ್ರಯಾಣ ಬೆಳೆಸಿತು. ಈ ಎರಡೂ ನಗರದ ಹಗಲು ವಿಮಾನ ಸಂಚಾರವನ್ನು ಕಡಿಮೆ ಮಾಡಲಾಗಿದ್ದು, ವಾರದ ಮೂರೂ ದಿನ ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಸಂಚರಿಸಲಿದೆ. ಇನ್ನು ಮುಂದೆ ಪ್ರತಿದಿನ ಹಾರಲಿರುವ ವಿಮಾನ ಮಂಗಳೂರಿನಿಂದ ರಾತ್ರಿ 9.30ಕ್ಕೆ ಹೊರತು ಸ್ಥಳೀಯ ಸಮಯ 23.40ಕ್ಕೆ ದುಬೈ ಸೇರಲಿದೆ. ಹಾಗೆ ದುಬೈನಿಂದ ರಾತ್ರಿ 1.35ಕ್ಕೆ ಹೊರತು ಬೆಳಿಗ್ಗೆ 6.30ಕ್ಕೆ ಮಂಗಳೂರನ್ನು ತಲುಪಲಿದೆ.
(ದಟ್ಸ್ ಕನ್ನಡ ವಾರ್ತೆ)