27813ಮುಂಬೈ ಸ್ಫೋಟ 2008ಹುತಾತ್ಮನ ಪತ್ನಿಯಾಗಿ ಹೆಮ್ಮೆ: ಕವಿತಾ ಕರ್ಕರೆ/news/2009/01/05/initially-thought-he-was-wounded-kavita-karkare.htmlಮುಂಬೈ, ಜ. 5 : ಗಂಡನನ್ನು ಕಳೆದುಕೊಂಡೆನಲ್ಲ ಎಂಬ ನೋವಿದೆಯಾದರೂ ಆತನ ಬಗ್ಗೆ ನನಗೆ ಅಪಾರ ಹೆಮ್ಮೆ ಹಾಗೂ ಗೌರವವಿದೆ. ದೇಶದ ಸಾರ್ವಭೌಮತೆಗಾಗಿ ನಡೆದ ಹೋರಾಟದಲ್ಲಿ ಪ್ರಾಣ ಕಳೆದುಕೊಳ್ಳುವ ಅವಕಾಶ ಎಲ್ಲರಿಗೂ ಲಭಿಸುವುದಿಲ್ಲ, ನನ್ನ ಗಂಡ ಹೇಮಂತ್ ಕರ್ಕರೆಗೆ ಅಂತಹ ಸದಾವಕಾಶ ಸಿಕ್ಕಿರುವುಕ್ಕೆ ಹೆಮ್ಮೆ ಪಡುತ್ತೇನೆ. ಇದು ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಪತ್ನಿ ಕವಿತಾ 33879http://kannada.oneindia.com/img/2009/01/05-kavitha-karkare1e.jpg27813ಮುಂಬೈ ಸ್ಫೋಟ 2008ಬೆಂಗಳೂರಿಗೆ ಎನ್ಎಸ್ ಜಿ ಘಟಕ ಮಂಜೂರು?/news/2009/01/06/will-centre-set-up-nsg-unit-in-bengaluru.htmlನವದೆಹಲಿ, ಜ. 6 : ಸಾಫ್ಟವೇರ್ ತಂತ್ರಜ್ಞರ ತಾಣವಾಗಿರುವ ಬೆಂಗಳೂರಿಗೆ ರಾಷ್ಟ್ರೀಯ ತನಿಖಾ ಘಟಕ (ಎನ್ಎಸ್ ಜಿ) ಸ್ಥಾಪಿಸಬೇಕು ಎನ್ನುವುದು ಎಲ್ಲರ ಅನಿಸಿಕೆ ಹಾಗೂ ಒತ್ತಾಯವಾಗಿದೆ. ತಾಂತ್ರಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುವ ಬೆಂಗಳೂರಿನ ರಕ್ಷಣೆಗೆ ಎನ್ಎಸ್ ಜಿ ಬೇಕೆಬೇಕು ಎಂದು ಕರ್ನಾಟಕ ಸರ್ಕಾರ ಹಾಗೂ ದೇಶದ ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರ ಒಕ್ಕೊರಲಿನ ಆಗ್ರಹವೂ ಕೇಂದ್ರ 33913http://kannada.oneindia.com/img/2009/01/06-cm-meets-pm1.jpg27813ಮುಂಬೈ ಸ್ಫೋಟ 2008ಕಸಬ್ ಪರ ವಕೀಲರಾಗಿ ಅಂಜಲಿ ವಾಗ್ಮಾರೆ ನೇಮಕ/news/2009/03/30/lawyer-appointed-for-kasab.htmlಮುಂಬೈ, ಮಾ.30: ಮುಂಬೈ ಸ್ಫೋಟದ ಪ್ರಮುಖ ಆರೋಪಿ ಅಜ್ಮಲ್ ಅಮೀರ್ ಕಸಬ್ ನ ಏಪ್ರಿಲ್ 6ರಿಂದ ವಿಚಾರಣೆಗೆ ಒಳಪಡಿಸಲಾಗುತ್ತದೆ. ಮುಂಬೈನ ಆರ್ಥರ್ ರಸ್ತೆಯಲ್ಲಿನ ವಿಶೇಷ ನ್ಯಾಯಾಲದಲ್ಲಿ ಆತನ ವಿಚಾರಣೆ ನಡೆಯಲಿದೆ.ಆತನ ಪರ ವಕೀಲರನ್ನು ನೇಮಿಸಲು ಪಾಕಿಸ್ತಾನ ನಿರಾಕರಿಸಿದ ಕಾರಣ ವಿಶೇಷ ಕೋರ್ಟ್ ನ ವಕೀಲರಾಗಿ ತಹಿಲ್ಯಾನಿ ಅಂಜಲಿ ವಾಗ್ಮಾರೆ ಎಂಬ ಸರ್ಕಾರಿ ವಕೀಲರನ್ನು ಕಸಬ್ ಪರವಾಗಿ ವಾದಿಸಲು 35595http://kannada.oneindia.com/img/2009/03/30-kasab1.jpg27813ಮುಂಬೈ ಸ್ಫೋಟ 2008ಉಗ್ರ ಕಸಬ್ ಪರ ಕಾನೂನು ಹೋರಾಟಕ್ಕೆ ಅಂಜಲಿ/news/2009/04/01/i-will-represent-kasab-anjali-waghmare.htmlಮುಂಬೈ, ಏ. 1 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸಲು ಮುಂಬೈ ಮೂಲದ ವಕೀಲೆ ಅಂಜಲಿ ವಾಗ್ಮೋರೆ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯ ನೇಮಿಸಿದೆ. ದೇಶದ ಹಿತಾಸಕ್ತಿ ಹಾಗೂ ನ್ಯಾಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಪ್ರಕರಣದ ಪರವಾಗಿ ವಕಾಲತ್ತು ನಡೆಸಲು ಒಪ್ಪಿಕೊಂಡಿರುವೆ ಎಂದು ಅಂಜಲಿ ಸ್ಪಷ್ಟಪಡಿಸಿದ್ದಾರೆ. ಕಸಬ್ 35657http://kannada.oneindia.com/img/2009/04/01-anjali-waghmare1.jpg27813ಮುಂಬೈ ಸ್ಫೋಟ 2008ಮುಂಬೈ ಸ್ಫೋಟ : ಕಸಬ್ ವಿಚಾರಣೆ ಇಂದು /news/2009/04/15/mumbai-terror-attacks-kasavs-mom-to-visit-india.htmlಮುಂಬೈ, ಏ. 15 : ಕಳೆದ ವರ್ಷ ನವೆಂಬರ್ 26ರಂದು ನಡೆದ ಮುಂಬೈ ಹತ್ಯಾಕಾಂಡದಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ವಿಚಾರಣೆ ಇಂದಿನಿಂದ ಪ್ರಾರಂಭವಾಗಲಿದೆ. ಭಾರೀ ಬಿಗಿ ಭದ್ರತೆಯಲ್ಲಿ ಇಂದು ಆತನನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಅರ್ಥರ್ ಜೈಲಿನಿಂದ ಕಸಬ್ ನನ್ನು ನ್ಯಾಯಾಲಯಕ್ಕೆ ಕರೆತರುವಾಗ ನ್ಯಾಯಾಲಯದ ಸುತ್ತ ಅಭೂತಪೂರ್ವ ಭದ್ರತೆ ಒದಗಿಸಲಾಗಿತ್ತು. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚಿನ 35964http://kannada.oneindia.com/img/2009/04/15-kasab2.jpg27819mumbai terror attack 2008ಉಗ್ರ ಹಫೀಜ್ ವಿರುದ್ಧದ ಪ್ರಕರಣಗಳ ವಜಾ!/news/2009/10/12/pak-court-dismisses-case-against-hafiz-saeed.htmlಲಾಹೋರ್, ಅ. 12 : ಕಳೆದ ವರ್ಷ ನಡೆದ ಮುಂಬೈ ಭಯೋತ್ಪಾದನೆಯ ಪ್ರಮುಖ ರೂವಾರಿ ಜಮಾತೆ ಉದ್ ದವಾ ಎಂಬ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಅತನ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಲಾಹೋರ್ ಹೈಕೋರ್ಟ್ ವಜಾಗೊಳಿಸಿದೆ. ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕಾನೂನಿನಡಿಯಲ್ಲಿ ಈತನಿಗೆ ಶಿಕ್ಷೆ ನೀಡುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ 39647http://kannada.oneindia.com/img/2009/10/12-hafeez1e.jpg27819mumbai terror attack 2008ಹೆಡ್ಲೇ ವಿರುದ್ಧ ಎನ್ಐಎ ದಾಖಲು, ಚಿದು/news/2009/11/12/india-registers-case-against-let-suspect-headley.htmlನವದೆಹಲಿ, ನ. 12 : ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಡೆವಿಡ್ ಕೋಲಮನ್ ಹೆಡ್ಲೇ ವಿರುದ್ಧ ನ್ಯಾಷನಲ್ ಇನ್ ವೆಸ್ಟಿಗೇಟಿವ್ ಏಜನ್ಸಿ (ಎನ್ಐಎ) ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಹೇಳಿದರು. ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಷ್ಕರ್ ಇ ತೊಯ್ಬಾ ಸಂಘಟನೆಯೊಂದಿಗೆ ಸಂಬಂಧ 40192http://kannada.oneindia.com/img/2009/11/12-p-chidambaram2.jpg27819mumbai terror attack 2008ಉಗ್ರ ಕಸಬ್ ನನ್ನು ಗಲ್ಲಿಗೇರಿಸಿ : ಕವಿತಾ/news/2009/11/23/kavita-karkare-urges-sonia-to-hang-ajmal-kasab.htmlನವದೆಹಲಿ, ನ. 23 : ಕಳೆದ ವರ್ಷ ನಡೆದ ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್ ನನ್ನು ಗಲ್ಲಿಗೇರಿಸುವಂತೆ ಮುಂಬೈ ಭಯೋತ್ಪಾದನೆ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಅವರ ಪತ್ನಿ ಕವಿತಾ ಕರ್ಕರೆ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ. ನವೆಂಬರ್ 26ಕ್ಕೆ ಮುಂಬೈ ಭಯೋತ್ಪಾದನೆಗೆ ಒಂದು 40372http://kannada.oneindia.com/img/2009/11/23-kavita-karkare2.jpg27819mumbai terror attack 2008ಭಾರತದಲ್ಲಿ ಪಾಕಿಸ್ತಾನದ ಬಿಳಿ ಆನೆ/news/2009/11/26/cost-of-keeping-kasab-alive-rs-31-crore-counting.htmlಮುಂಬೈ, ನ. 26 : ನವೆಂಬರ್ 26, 2008 ಭಾರತದ ಇತಿಹಾಸದ ಕರಾಳ ದಿನ. ಪಾಕಿಸ್ತಾನ ಮೂಲದ ಉಗ್ರರು ಮುಂಬೈ ಬಂದಿಳಿದ ನಡೆಸಿದ ಭಯೋತ್ಪಾದನಾ ಕೃತ್ಯಕ್ಕೆ 180ಕ್ಕೂ ಹೆಚ್ಚೂ ಮಂದಿ ಸಾವನ್ನಪ್ಪಿದರು. ಈ ಕೃತ್ಯದಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಮುಂಬೈನ ಅರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಆರೋಗ್ಯದಿಂದ ಬೇಕು, ಬೇಡವಾಗಿದ್ದನ್ನು ತಿಂದುಂಡು ದಷ್ಟಪುಷ್ಟವಾಗಿದ್ದಾನೆ. ಈ 40424http://kannada.oneindia.com/img/2009/11/26-kasab2.jpg27819mumbai terror attack 2008ಕಸಬ್ ನನ್ನು ನೇಣಿಗೇರಿಸಲು ಒತ್ತಾಯ/news/2009/11/26/prayer-prevails-over-anger-on-26-11-anniversary.htmlಮುಂಬೈ, ನ. 26 : ಕಳೆದ ವರ್ಷ ಮುಂಬೈನಲ್ಲಿ ನಡೆದ 26/11 ದಾಳಿಗೆ ಇಂದಿಗೆ ಒಂದು ವರ್ಷ. ಈ ದಾಳಿಯಲ್ಲಿ 160 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಒಂದನೇ ವರ್ಷದ ವರ್ಷಾಚರಣೆ ಹಿನ್ನೆಲೆಯಲ್ಲಿ ಉಗ್ರರ ದಾಳಿಗೆ ಒಳಗಾಗಿದ್ದ ತಾಜ್ ಹೋಟೆಲ್, ಟ್ರೈಡೆಂಟ್ ಹೋಟೆಲ್ ಮತ್ತು ಗೇಟ್ ವೇ ಇಂಡಿಯಾದ ಮುಂಭಾಗದಲ್ಲಿ ಸಾವಿರಾರು ಮಂದಿ ವೀರ ಯೋಧರ ಆತ್ಮಕ್ಕೆ 40429http://kannada.oneindia.com/img/2009/11/26-mumbai-lamp1.jpgnews"> ಹುತಾತ್ಮನ ಪತ್ನಿಯಾಗಿ ಹೆಮ್ಮೆ: ಕವಿತಾ ಕರ್ಕರೆ | Initially I thought he was just wounded: Kavita Karkare - ಹುತಾತ್ಮನ ಪತ್ನಿಯಾಗಿ ಹೆಮ್ಮೆ: ಕವಿತಾ ಕರ್ಕರೆ - Kannada Oneindia

ಹುತಾತ್ಮನ ಪತ್ನಿಯಾಗಿ ಹೆಮ್ಮೆ: ಕವಿತಾ ಕರ್ಕರೆ

kavita karkare
ಮುಂಬೈ, ಜ. 5 : ಗಂಡನನ್ನು ಕಳೆದುಕೊಂಡೆನಲ್ಲ ಎಂಬ ನೋವಿದೆಯಾದರೂ ಆತನ ಬಗ್ಗೆ ನನಗೆ ಅಪಾರ ಹೆಮ್ಮೆ ಹಾಗೂ ಗೌರವವಿದೆ. ದೇಶದ ಸಾರ್ವಭೌಮತೆಗಾಗಿ ನಡೆದ ಹೋರಾಟದಲ್ಲಿ ಪ್ರಾಣ ಕಳೆದುಕೊಳ್ಳುವ ಅವಕಾಶ ಎಲ್ಲರಿಗೂ ಲಭಿಸುವುದಿಲ್ಲ, ನನ್ನ ಗಂಡ ಹೇಮಂತ್ ಕರ್ಕರೆಗೆ ಅಂತಹ ಸದಾವಕಾಶ ಸಿಕ್ಕಿರುವುಕ್ಕೆ ಹೆಮ್ಮೆ ಪಡುತ್ತೇನೆ. ಇದು ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಪತ್ನಿ ಕವಿತಾ ಕರ್ಕರೆ ಹೇಳುವ ಮಾತಿದು.

ಮುಂಬೈ ಭಯೋತ್ಪಾದನೆ ನಂತರ ಪ್ರಥಮ ಬಾರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ನವೆಂಬರ್ 26 ದೇಶದ ಮೇಲೆ ಉಗ್ರರು ಅಟ್ಟಹಾಸ ಮೆರೆದ ದಿನ. ಅದು ನನ್ನ ಪಾಲಿನ ಕರಾಳ ದಿನವೂ ಹೌದು. ನನ್ನ ಗಂಡ ಧೀರ ಅಧಿಕಾರಿ ಹೇಮಂತ್ ನನ್ನು ಕಳೆದುಕೊಂಡ ದಿನ ಎನ್ನಲಿಕ್ಕೆ ಮನಸ್ಸು ಹಾತೊರೆಯುತ್ತದೆ. ಆದರೆ, ಆತ ಮಾಡಿರುವ ಸಾಧನೆ ನೆನಪಿಸಿಕೊಂಡರೆ ಎಲ್ಲವೂ ಮರೆಯಾಗುತ್ತದೆ ಎಂದು ಕವಿತಾ ವಿವರಿಸಿದರು.

ನವೆಂಬರ್ 26 ರಂದು ನಡೆದ ಉಗ್ರರೊಂದಿಗೆ ಕಾಳಗದಲ್ಲಿ ಹೇಮಂತ್ ಗೆ ಬರೀ ಗಾಯವಾಗಿರಬಹುದು ಎಂದುಕೊಂಡಿದ್ದೆ. ವಿಷಯ ತಿಳಿದ ತಕ್ಷಣ ಆಸ್ಪತ್ರೆಯತ್ತ ದಾಪುಗಾಲಿಟ್ಟೆ, ಅದರೆ, ಹೇಮಂತ್ ನ ಎದೆಗೆ ಮೂರು ಗುಂಡು ಸೇರಿಕೊಂಡು ತೀವ್ರವಾಗಿ ಗಾಯಗೊಂಡ ಅವರು ಕೊನೆಯುಸಿರೆಳೆದಿದ್ದರು. ಆಗ ನನ್ನ ಕರುಳು ಕಿತ್ತು ಬಂದಿತು. ಮೂವರು ಮಕ್ಕಳು ಸೇರಿ ನನ್ನನ್ನು ಕೂಡ ನಡುನೀರಿನಲ್ಲಿ ಕೈಬಿಟ್ಟು ಹೋದನಲ್ಲ ಎಂದು ಕುಸಿದು ಕುಳಿತೆ. ಹಿರಿಯ ಮಗಳನ್ನು ಮದುವೆ ಮಾಡಿಕೊಟ್ಟಾಗಿದೆ. ಉಳಿದ ಇಬ್ಬರು ಮಕ್ಕಳ ಮುಂದಿನ ಜೀವನ ಹೇಗೆ ಎನ್ನುವುದೆ ನನಗೆ ಏಕೈಕ ಚಿಂತೆಯಾಗಿತ್ತು ಎಂದು ಹೇಳಿದರು.

ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯವನ್ನು ಬೇಧಿಸಿದ ಹೇಮಂತ್ ಕೆಲ ರಾಜಕೀಯ ನಾಯಕರಿಂದ ಭಾರಿ ಟೀಕೆಗೆ ಒಳಗಾಗಿದ್ದರು. ಆದರೆ ಹೇಮಂತ್ ಎಂದಿಗೂ ತನ್ನ ಸಮಸ್ಥಿತಿಯನ್ನು ಕಳೆದುಕೊಂಡವರಲ್ಲ. ದೇವರ ಮೇಲೆ ಅಪಾರ ಭಕ್ತ ಹಾಗೂ ಪ್ರೀತಿ ಹೊಂದಿದ್ದ ಕರ್ಕರೆ, ಎಲ್ಲವನ್ನೂ ದೇವರೇ ನೋಡಿಕೊಳ್ಳತ್ತಾನೆ ಎಂದು ಹೇಳುತ್ತಿದ್ದರು.

ಮಾಲೇಗಾಂವ್ ಸ್ಫೋಟ ಘಟನೆಯಲ್ಲಿ ಕೆಲ ಹಿಂದೂ ಧಾರ್ಮಿಕ ಮುಖಂಡರು ಇರುವುದು ಪ್ರಕರಣದಿಂದ ತಿಳಿಯಿತು. ಇದನ್ನು ಹೊರಗೆಡವುತ್ತಿದ್ದಂತೆಯೇ ಕಲ ಹಿಂದೂ ಸಂಘಟನೆಗಳು ಅವರ ವಿರುದ್ಧ ಅಪಪ್ರಚಾರ ಮಾಡಿದರು. ಆಗ ಅವರು ಸ್ವಲ್ಪ ಧೃತಿಗೆಟ್ಟಿದ್ದರು. ಆಗ ನಾನೇ ಮುಂದೆ ನಿಂತು ಅವರನ್ನು ಹುರುದುಂಬಿಸಿದೆ. ಅವರ ಹತ್ತಿರ ಸಾಕ್ಷಿಗಳಿದ್ದವು, ತನಿಖೆಗೆ ಸರ್ಕಾರ ಅಗತ್ಯ ನೆರವು ನೀಡಿತು. ಈ ಎಲ್ಲ ಕಾರಣಗಳಿಂದ ತನಿಖೆ ನಿರಾತಂಕವಾಗಿ ಮುಗಿಸಿ ಆರೋಪಿಗಳನ್ನು ಬಂಧಿಸಲು ಹೇಮಂತ್ ಕರ್ಕರೆ ಯಶಸ್ವಿಯಾದರು ಎಂದು ಕವಿತಾ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+