ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷಅನಿಲ ಸಿಲಿಂಡರ್ ಲಾರಿ ಮುಷ್ಕರ

By Staff
|
Google Oneindia Kannada News

ಬೆಂಗಳೂರು, ಜ.1: ಅನಿಲ ಸಾಗಣೆ ಟ್ಯಾಂಕರ್ ಗಳ ಅನಿರ್ದಿಷ್ಟಾವಧಿ ಮುಷ್ಕರದ ಬಿಸಿ ನಿಧಾನವಾಗಿ ಸಾರ್ವಜನಿಕರಿಗೆ ತಟ್ಟಲು ಪ್ರಾರಂಭಿಸಿದೆ. ಗೃಹ ಬಳಕೆ ಅನಿಲ ಸಿಲಿಂಡರ್ ಗಳ ಸಾಗಣೆ ಶುಲ್ಕ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘಟನೆಗಳು ಬುಧವಾರ ಮಧ್ಯರಾತ್ರಿಯಿಂದ ಮುಷ್ಕರ ಹೂಡಿವೆ.

ಇದರ ಪರಿಣಾಮ 3500 ಅನಿಲ ಸಾಗಣೆ ಟ್ಯಾಂಕರ್ ಗಳ ಸಂಚಾರ ಇದ್ದಕ್ಕಿದ್ದಂತೆ ನಿಂತು ಹೋಗಿ ಅಡುಗೆ ಅನಿಲ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅನಿಲ ಟ್ಯಾಂಕರ್ ಗಳ ಮುಷ್ಕರವನ್ನು ಮುಂದಿಟ್ಟುಕೊಂಡು ಎಲ್ ಪಿಜಿ ವಿತರಕರು ಸಾರ್ವಜನಿಕರಿಗೆ ಮತ್ತಷ್ಟು ತೊಂದರೆ ಕೊಡುವ ಸಾಧ್ಯತೆಗಳಿವೆ. ಆದರೆ ನಾಗರಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ ಎಂದು ಸರ್ಕಾರ ಭರವಸೆ ನೀಡಿದೆ.

ಸರ್ಕಾರ ಅನಿಲ ಸಿಲಿಂಡರ್ ಸಾಗಾಣಿಕೆಗೆ ಪ್ರತಿ ಕಿ.ಮೀ ಗೆ 1.60 ರು. ನೀಡುತ್ತಿದೆ. ಪ್ರತಿ ಕಿ.ಮೀಗೆ 2.95 ರೂಪಾಯಿ ನೀಡುವಂತೆ ಮಾಡಿದ್ದ ಮನವಿಯನ್ನು ಸಂಸ್ಥೆಗಳು ನಿರಾಕರಿಸಿವೆ. ಹಾಗಾಗಿ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X