ಯಡಿಯೂರಪ್ಪ ಮೈಸೂರಿನಲ್ಲಿ ವರ್ಷಾಚರಣೆ
ಮೈಸೂರು, ಡಿ. 31 : ಉಪಚುನಾವಣೆಯಲ್ಲಿ ಜಯ ಸಾಧಿಸಿ ಬೀಗುತ್ತಿರುವ ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಹೊಸ ವರ್ಷವನ್ನು ಅರಮನೆಗಳ ನಗರಿ ಮೈಸೂರಿನ ರಿಸಾರ್ಟ್ ವೊಂದರಲ್ಲಿ ಆಚರಿಸಲು ಮುಂದಾಗಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪಾಂಡವಪುರದಲ್ಲಿ ಏರ್ಪಡಿಸಲಾಗಿರುವ ಸುತ್ತೂರಿನ ಮಠದ ಕಾರ್ಯಕ್ರಮವನ್ನು ಮುಗಿಸಿಕೊಂಡು ಯಡಿಯೂರಪ್ಪ ಮೈಸೂರಿಗೆ ತೆರಳಿ ನೂತನ ವರ್ಷವನ್ನು ಚಾಮುಂಡೇಶ್ವರಿ ನೆಲೆದಲ್ಲಿ ಆಚರಿಸಲು ನಿರ್ಧರಿಸಿದ್ದಾರೆ.
ಮೈಸೂರಿನ ವಿಂಡ್ ಪ್ಲವರ್ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡುವ ಯಡಿಯೂರಪ್ಪ, ಗುರುವಾರ ಬೆಳಗ್ಗೆ ತಾಯಿ ಚಾಮುಂಡೇಶ್ವರಿಗೆ ಪೂಜೆ ಕೈಂಕರ್ಯಗಳನ್ನು ನೆರವೇರಿಸುವರು. ಪೂಜೆಯ ನಂತರ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications