ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶುಪತಿನಾಥ ಆಲಯದಲ್ಲಿ ಕರ್ನಾಟಕ ಅರ್ಚಕರ ವಜಾ

By *ಅರಕೇಶ್ ಮೋಹನ್, ದೇವ್ ಪಟನ್
|
Google Oneindia Kannada News

Pashupathinath Temple in Nepal
ಕಾಠ್ಮಂಡು, ಡಿ 31: ಇತಿಹಾಸ ಪ್ರಸಿದ್ದ ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಅರ್ಚಕರಾಗಿದ್ದ ಕರ್ನಾಟಕ ಮೂಲದ ಬ್ರಾಹ್ಮಣರನ್ನು ವಜಾಗೊಳಿಸಿ ನೇಪಾಳ ಸರಕಾರ ಆದೇಶ ಹೊರಡಿಸಿದೆ.

ಸರಕಾರದ ಈ ವಿವಾದಾತ್ಮಕ ತಿರ್ಮಾನಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ಸರಕಾರ ದೇವಾಲಯದ ಸಂಪ್ರದಾಯಕ್ಕೆ ಅಡ್ಡಿಮಾಡುತ್ತಿದ್ದು ತಕ್ಷಣವೇ ಈ ತೀರ್ಮಾನವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ನೇಪಾಳದ 100ಕ್ಕೂ ಹೆಚ್ಚು ರಾಜ ಭಂಡಾರಿಗಳು ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.

ನೇಪಾಳದ ಸಂಸತ್ತಿನಲ್ಲೂ ಈ ಬಗ್ಗೆ ಚರ್ಚೆ ನಡೆದಿದ್ದು ಪ್ರಮುಖ ಪ್ರತಿಪಕ್ಷ ನೇಪಾಳ ಕಾಂಗ್ರೆಸ್ ಸರಕಾರದ ತೀರ್ಮಾನಕ್ಕೆ ಅತೃಪ್ತಿ ವ್ಯಕ್ತ ಪಡಿಸಿದ್ದು ಸಚಿವ ಸಂಪುಟದ ಅನುಮತಿ ಪಡೆದುಕೊಳ್ಳಬೇಕಾಗಿತ್ತು ಎಂದು ಅಸಮಧಾನ ವ್ಯಕ್ತ ಪಡಿಸಿದೆ. ದೇವಾಲಯದ ಮಖ್ಯ ಅರ್ಚಕರಾದ ಮಹಾಬಲೇಶ್ವಭಟ್ ಮಾತ್ರ ನೇಪಾಳದ ರಾಜನಿಗೆ ಈ ಎಲ್ಲ ಸಮಸ್ಯೆಗಳಿಗೆ ಉತ್ತರ ಹೇಳಬಲ್ಲವರಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X