ಕಾಂಗ್ರೆಸ್ ಕಿವಿಗೆ ಕಮಲದ ಹೂವು
ಬೆಂಗಳೂರು, ಡಿ. 30: ಕಾಂಗ್ರೆಸ್ ಪಕ್ಷ ಈ ಉಪಚುನಾವಣೆಯಲ್ಲಿ ಖಾತೆಯನ್ನೇ ತೆರೆಯುವುದಿಲ್ಲ ಎಂಬ ನಿರೀಕ್ಷೆಗಳು ಇನ್ನೇನು ನಿಜವಾಗುತ್ತಿದೆ. ಛಿದ್ರ ಛಿದ್ರವಾಗಿರುವ ಕಾಂಗ್ರೆಸ್ ಮನೆಯಿಂದ ಇದಕ್ಕಿಂತ ಹೆಚ್ಚಿನ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಮತಗಳಿಸುತ್ತಿರುವ ಪರಿ ಗಮನಿಸಿದರೆ ಕಳೆದ ವಿಧಾನ ಸಭಾ ಚುನಾವಣೆಗಳ ಪುನಾರವರ್ತನೆ ಆಗುತ್ತಿದೆ.
ಖರ್ಗೆ ಇದ್ದರೂ ನೂ ಅಷ್ಟೆನೇ, ದೇಶಪಾಂಡೆ ಮತ್ತು ಡಿಕೆಶಿ ಬಂದರೂನೂ ಅಷ್ಟೇನೆ ಎಂದು ಕಾಂಗ್ರೆಸ್ ವಲಯಗಳಿಂದ ಪ್ರತಿಕ್ರಿಯೆ ಕೇಳಿಬರುತ್ತಿವೆ. ಕಡೆಯ ಪಕ್ಷ ಔಷಧಿಗೂ ಒಂದು ಸ್ಥಾನ ಗೆಲ್ಲಲಾರದ ಕಾಂಗ್ರೆಸ್ಸ್ ನಿಜಕ್ಕೂ ಈ ನಾಡಿನಲ್ಲಿ ಬಿಜೆಪಿಯ ಮಿತ್ರ ಎಂದು ಪರಿಗಣಿತವಾಗುತ್ತಿದೆ. ಮಧುಗಿರಿ, ಮದ್ದೂರಿನಲ್ಲಿ ಮತಎಣಿಕೆ ಪ್ರಗತಿಯಲ್ಲಿದ್ದು ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಸೂಚನೆಗಳು ಗೋಚರಿಸುತ್ತಿಲ್ಲ.
(ದಟ್ಸ್ ಕನ್ನಡ ವಾರ್ತೆ)
ಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು
ಸಿದ್ದುಗೆ ರಾಜಕೀಯ ಭವಿಷ್ಯವಿಲ್ಲ: ದೇಶಪಾಂಡೆ
ಸಿದ್ದು ಕೈ ಕೊಟ್ಟರೆ ನಷ್ಟವಿಲ್ಲ: ಡಿಕೆ ಶಿವಕುಮಾರ್











Click it and Unblock the Notifications