ಜ.1ರಿಂದ ಕಿಂಗ್ ಫಿಶರ್ ವಿಮಾನ ದರ ಅಗ್ಗ: ಮಲ್ಯ

ಬೆಂಗಳೂರು, ಡಿ. 29 : ಆರ್ಥಿಕ ಬಿಕ್ಕಟ್ಟಿನಿಂದ ವೈಮಾನಿಕ ಉದ್ಯಮ ಸೇರಿದಂತೆ ಜಾಗತಿಕ ಮಾರುಕಟ್ಟೆಯ ಅನೇಕ ಕಂಪನಿಗಳು ಭೀಕರ ಪರಿಸ್ಥಿತಿ ಎದುರಿಸಿದ ಬೆನ್ನಲ್ಲೇ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆ ತನ್ನ ಸಂಸ್ಥೆಯ ವಿಮಾನ ದರಗಳನ್ನು ಜನಸಾಮಾನ್ಯರ ಕೈಗೆಟಕುವ ನಿಟ್ಟಿನಲ್ಲಿ ಇನ್ನಷ್ಟು ಕಡಿತಗೊಳಿಸಲು ನಿರ್ಧರಿಸಿದೆ.

ಕಿಂಗ್ ಫಿಶರ್ ಚೇರಮನ್ ವಿಜಯ ಮಲ್ಯ ಈ ವಿಷಯವನ್ನು ಸೋಮವಾರ ಸ್ಪಷ್ಪಪಡಿಸಿದರು. 2009ರ ಹೊಸವರ್ಷಕ್ಕೆ ಸಂಸ್ಥೆಯಿಂದ ನೂತನ ಉಡುಗೊರೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಆದರೆ ಪ್ರಯಾಣದರದಲ್ಲಿ ಎಷ್ಟು ಕಡಿತಗೊಳಿಸಲಾಗುವುದು ಎನ್ನುವುದನ್ನು ವಿಜಯ ಮಲ್ಯ ಗುಪ್ತವಾಗಿರಿಸಿದ್ದಾರೆ. ನೂತನ ವರ್ಷದ ದಿನದಂದೆ ಹೊಸ ದರಗಳು ಎಲ್ಲರಿಗೂ ತಿಳಿಯಲಿದೆ ಎಂದು ಕುತೂಹಲಕ್ಕೆ ತಳ್ಳಿದ್ದಾರೆ. ಸದ್ಯ ವಾಯುಯಾನ ಇಂಧನದ (air turbine fuel) ದರದಲ್ಲಿ ಗಮನಾರ್ಹ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣ ದರವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮಲ್ಯ ಸ್ಪಷ್ಟಪಡಿಸಿದ್ದಾರೆ.

ವಾಯುಯಾನ ಇಂಧನವನ್ನು (atf) ಡಿಕ್ಲರ್ಡ್ ಗೂಡ್ಸ್ ಕೆಟಗರಿಗೆ ಪರಿವರ್ತನೆ ಮಾಡಿ ಎಂದು ಕಿಂಗ್ ಫಿಶರ್ ಹಾಗೂ ಜೆಟ್ ಏರ್ ವೇಸ್ ಸಂಸ್ಥೆಗಳು ಸರ್ಕಾರಕ್ಕೆ ಅನೇಕ ಭಾರಿ ಸರ್ಕಾರಕ್ಕೆ ಒತ್ತಾಯಿಸಿದ್ದವು. ವಾಯುಯಾನ ಇಂಧನವನ್ನು ಡಿಕ್ಲರ್ಡ್ ಗೂಡ್ಸ್ ಕೆಟಗರಿಗೆ ಸೇರಿಸುವುದರಿಂದ ಏರ್ ಲೈನ್ಸ್ ಸಂಸ್ಥೆಗಳ ವಾಯುಯಾನ ಇಂದನಕ್ಕೆ ಶೇ, 4 ರಷ್ಟು ಏಕರೂಪದ ತೆರಿಗೆ ಬೀಳಲಿದೆ. ಇದು ವೈಮಾನಿಕ ಸಂಸ್ಥೆಗಳಿಗೆ ಅನುಕೂಲಕರವಾಗಲಿವೆ ಎಂದು ಖಾಸಗಿ ವಿಮಾನಯಾನ ಕಂಪನಿಗಳು ಒತ್ತಾಯಿಸಿದ್ದವು. ಈ ವಿಷಯ ಅನೇಕ ಭಾರಿ ಸಂಸತ್ತಿನಲ್ಲಿ ಚರ್ಚೆಯಾಗಿದ್ದು, ಪರ ವಿರೋಧಗಳು ಕೇಳಿ ಬಂದಿದ್ದವು.

(ದಟ್ಸ್ ಕನ್ನಡ ವಾರ್ತೆ)
ದೇಶಿ ಪ್ರಯಾಣಿಕರಿಗೆ ಅಭಿವೃದ್ಧಿ ಶುಲ್ಕದ ಹೊರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+