ಕನ್ನಡಪ್ರಭ ಅಂಕಣಕಾರ ಕೆಪಿ ರಾವ್ ಅಸ್ತಂಗತ
ಬೆಂಗಳೂರು, ಡಿ.29: ಸತತವಾಗಿ 35 ಕ್ಕೂ ಹೆಚ್ಚು ಕಾಲ ಕನ್ನಡಪ್ರಭ ದೈನಿಕದಲ್ಲಿ 'ನೀವು ಮತ್ತು ಕಾನೂನು' ಅಂಕಣ ಬರೆದ ಹಿರಿಯ ನ್ಯಾಯವಾದಿ ಕೆಪಿ ರಾವ್(82) ಭಾನುವಾರ ನಿಧನರಾದರು.
ಒಂದು ವಾರದ ಹಿಂದೆ ಮೆದುಳು ಸ್ರಾವದಿಂದ (ಬ್ರೇನ್ ಹೆಮರೇಜ್) ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಬೆಂಗಳೂರು ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕೆಪಿ ರಾವ್ ಅವರಿಗೆ ಪತ್ನಿ ಹಾಗೂ ಒಬ್ಬ ಪುತ್ರಿ ಇದ್ದಾರೆ.
ಇವರು 2007 ನೇ ಸಾಲಿನಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದರು. ಕನ್ನಡಪ್ರಭದಲ್ಲಿ ಕಾನೂನು ಸಂಬಂಧಿಸಿದ ಸಮಸ್ಯೆಗಳಿಗೆ ಕ್ಲುಪ್ತವಾಗಿ ಪರಿಹಾರ ಸೂಚಿಸಿ, ಜನಪ್ರಿಯರಾಗಿದ್ದರು. ಮೃತರ ಅಂತ್ಯಕ್ರಿಯೆಯನ್ನು ಭಾನುವಾರಸಂಜೆ ನೆರವೇರಿಸಲಾಯಿತು.
(ಸುದ್ದಿ ಮೂಲ: ಕನ್ನಡಪ್ರಭ)












Click it and Unblock the Notifications