ಕುವೆಂಪು ವಿವಿ :ಸಂಶೋಧನೆಗೆ ಆಹ್ವಾನ

ಶಿವಮೊಗ್ಗ, ಡಿ. 25 : ಕುವೆಂಪು ವಿವಿಯ ಸ್ನಾತಕೋತ್ತರ ಔದ್ಯೋಗಿಕ ರಸಾಯನಶಾಸ್ತ್ರ ಆಧ್ಯಯನ ವಿಭಾಗವು Naval Research Board New Delhi ಅನುದಾನ ಯೋಜನೆಯಡಿ ಸಂಶೋಧನೆ ಕೈಗೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

2 ವರ್ಷ ಅವಧಿಯ ಎಂ ಎಸ್ಸಿ ಪದವಿಯನ್ನು ಔದ್ಯೋಗಿಕ ರಸಾಯನ ಶಾಸ್ತ್ರ, ರಸಾಯನ ಶಾಸ್ತ್ರ ಅಥವಾ ಪಾಲಿಮಾರ್ ಕೆಮಿಸ್ಟ್ರಿ ವಿಷಯದಲ್ಲಿ ಶೇ. 55 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ರೂ. 10,000 ಶಿಷ್ಯವೇತನ ನೀಡಲಾಗುವುದು. ದೃಢೀಕೃತ ನಕಲು ಅಂಕಪಟ್ಟಿಗಳೊಂದಿಗೆ ಜನವರಿ 5 ರೊಳಗೆ ಡಾ. ಬಿ. ಈ. ಕುಮಾರಸ್ವಾಮಿ,ಔದ್ಯೋಗಿಕ ರಸಾಯನಶಾಸ್ತ್ರ ಅಧ್ಯಯನ ವಿಭಾಗ,ಕುವೆಂಪು ವಿವಿ ಶಂಕರಘಟ್ಟ -577451ಇಲ್ಲಿಗೆ ಅರ್ಜಿ ಸಲ್ಲಿಸಬಹುದು.

ವಿಶ್ವವಿದ್ಯಾನಿಲಯದ ಇತರ ಕೋರ್ಸುಗಳು ಮತ್ತು ಶೈಕ್ಷಣಿಕ ಚಟುವಚಿಕೆಗಳ ಬಗೆಗೆ ಮಾಹಿತಿಗೆ ಶಂಕರಘಟ್ಟಕ್ಕೆ ಹೋಗಿ : http://www.kuvempu.ac.in/

*****
ಕೃಷಿ ಸಚಿವರಾದ ಎಸ್. ಎ. ರವೀಂದ್ರನಾಥ ಅವರು ಡಿ. 26 ಶುಕ್ರವಾರ ಶಿವಮೊಗ್ಗೆಗೆ ಆಗಮಿಸುತ್ತಾರೆ. ಅಂದು ಬೆಳಗ್ಗೆ 11.15 ಗಂಟೆಗೆ ಶಿವಮೊಗ್ಗದ ಭದ್ರಾ ಕಾಡಾ ಕಚೇರಿಯಲ್ಲಿ ಏರ್ಪಡಿಸಿರುವ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಸಂಜೆ 4.30ಗಂಟೆಗೆ ದಾವಣಗೆರೆ ಜಿಲ್ಲೆಯ ಶರಮಗೊಂಡನಹಳ್ಳಿಗೆ ತೆರಳುವರು ಎಂದು ಕರ್ನಾಟಕ ಸರಕಾರದ ವಾರ್ತಾ ಇಲಾಖೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+