ಸಿಟಿ ಗ್ರೂಪ್ ನ ಸಿಟಿಎಸ್ ವಿಪ್ರೊ ವಶ
ಬೆಂಗಳೂರು, ಡಿ. 24 : ಮಾಹಿತಿ ತಂತ್ರಜ್ಞಾನದ ಪ್ರಮುಖ ಕಂಪನಿಯಾಗಿರುವ ವಿಪ್ರೊ ಹಣಕಾಸು ಸೇವಾನಿರತ ಸಿಟಿ ಸಮೂಹದ ಸಿಟಿ ಟೆಕ್ನಾಲಜಿ ಸರ್ವೀಸ್ (ಸಿಟಿಎಸ್) ಲಿಮಿಟೆಡ್ ನ ಭಾರತದಲ್ಲಿನ ವಿಭಾಗವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಾಗಿರುವ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆರು ವರ್ಷಗಳ ಮಟ್ಟಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿಪ್ರೊ ನಿರ್ದೇಶಕ ಮಂಡಳಿ ಸದಸ್ಯ ಗಿರೀಶ್ ಪರಾಂಜಪೆ ಹೇಳಿದರು.
ಮಂಗವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 127 ದಶಲಕ್ಷ ಡಾಲರ್ ವ್ಯವಹಾರಕ್ಕೆ ಒಪ್ಪಂದವಾಗಿದ್ದು, ಮುಂದಿನ ದಿನಗಳಲ್ಲಿ ಸಿಟಿ ಸಮೂಹದ ಹಣಕಾಸು ಸೇವಾ ವಿಭಾಗದ ಕಾರ್ಯಗಳಿಗೆ ತಂತ್ರಜ್ಞಾನ ದಕ್ಷತೆ ಒದಗಿಸಲು ವಿಪ್ರೊ ಬದ್ಧತೆಯಿಂದ ಕಾರ್ಯನಿರ್ವಹಿಸಲಿದೆ ಎಂದರು.
ಸಿಟಿ ಗ್ರೂಪ್ ನ ಸಿಟಿಎಸ್ ವಿಶ್ವದ 32 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿ ಮುಂಬೈ ಹಾಗೂ ಚೆನ್ನೈನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಸ್ವಾಧೀನದ ನಂತರವೂ ಭಾರತದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಟಿಎಸ್ ಉದ್ಯೋಗಿಗಳು ತಥಾಪ್ರಕಾರ ಮುಂದುವರಿಯಲಿದ್ದಾರೆ ಎಂದು ಪರಾಂಪಜೆ ಸ್ಪಷ್ಟಪಡಿಸಿದ್ದಾರೆ. ಸದ್ಯ ಸಿಟಿ ಸಮೂಹದಲ್ಲಿ 1650 ಉದ್ಯೋಗಿಗಳಿದ್ದಾರೆ.
(ಏಜೆನ್ಸೀಸ್)
ಸತ್ಯಂಗೆ ವಿಶ್ವಬ್ಯಾಂಕ್ ಎಂಟು ವರ್ಷ ನಿರ್ಬಂಧ











Click it and Unblock the Notifications