ಬಿಎಸ್‌ವೈಗೆ ಡಾಕ್ಟರೇಟ್ : ಕ್ರೈಸ್ತರ ವಿರೋಧ

Dr. BS Yeddyurappa
ಬೆಂಗಳೂರು, ಡಿ. 20 : ''ಕರ್ನಾಟಕದಲ್ಲಿ ನಡೆದ ಚರ್ಚ್‌ಗಳ ಮೇಲಿನ ದಾಳಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರೋಕ್ಷವಾಗಿ ಕುಮ್ಮುಕ್ಕು ನೀಡಿದ್ದಾರೆ ಹಾಗೂ ದಾಳಿಯನ್ನು ತಡೆಯಲು ಅವರು ವಿಫಲರಾಗಿದ್ದಾರೆ. ಅವರು ಕ್ರಿಶ್ಚಿಯನ್ ವಿರೋಧಿ ಆಗಿರುವುದರಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಬಾರದು'' ಎಂದು ಅಮೆರಿಕದ ಮಿಚಿಗನ್ ಸ್ಯಾಜಿನಾವ್ ವಿಶ್ವವಿದ್ಯಾಲಯಕ್ಕೆ ಸಾವಿರಾರು ಇ ಮೇಲ್ ಗಳು ಬಂದಿರುವುದನ್ನು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ಬಹಿರಂಗಪಡಿಸಿದ್ದಾರೆ.

ಆದರೆ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ಸೇರಿ ಇಂತಹ ಇ-ಮೇಲ್ ಸಂದೇಶಗಳಿಗೆ ಕಿವಿಗೊಡದೆ ಹಾಗೂ ಅಂಜದೆ ಯಡಿಯೂರಪ್ಪಗೆ ಡಾಕ್ಟರೇಟ್ ನಿಡುವ ತಿರ್ಮಾನಕ್ಕೆ ಬಂದಿತ್ತು. ಇದುವರೆಗೆ ಯಾವ ಅರ್ಥಶಾಸ್ತ್ರಜ್ಞರು ಮಾಡದ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು ಸೇರಿದಂತೆ ಅರ್ಥ ಸಚಿವರಾಗಿ ಹಲವು ಅಭಿವೃದ್ಧಿ ಕೆಲಸಗಳನ್ನು ರೂಪಿಸಿದ್ದಾರೆ. ಇದನೆಲ್ಲಾ ಗಮನಿಸಿ ವಿಶ್ವವಿದ್ಯಾಲಯ ಅವರಿಗೆ ಈ ಗೌರವ ನೀಡಿದೆ ಎಂದು ರಾಮಚಂದ್ರ ಗೌಡ ತಿಳಿಸಿದರು.

(ದಟ್ಸ್ ಕನ್ನಡವಾರ್ತೆ)

ಪೂರಕ ಓದಿಗೆ
ನೂರೆಂಟುಮಾತು : ಗೌರವ ಡಾಕ್ಟರೇಟ್ ಪದವಿಯಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+