ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವಸಹಿತ ಚಂದ್ರಯಾನ, ಇಸ್ರೋ ರಷ್ಯಾ ಒಪ್ಪಂದ

By Staff
|
Google Oneindia Kannada News

ಬೆಂಗಳೂರು, ಡಿ. 13 : ಮಾನವಸಹಿತ ಚಂದ್ರಯಾನದ ಭಾರತದ ಕನಸಿಗೆ ರಷ್ಯಾದ ಬಾಹ್ಯಾಕಾಶ ಸಂಸ್ಥೆ ಇಂಬು ನೀಡಿದೆ. ಮುಂಬರುವ ಮಾನವಸಹಿತ ಚಂದ್ರಯಾನಕ್ಕಾಗಿ ಪ್ರಮುಖ ಸಲಕರಣೆಗಳನ್ನು ಹಂಚಿಕೊಳ್ಳುವ ಒಪ್ಪಂದಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತ ರಷ್ಯಾದ ಬಾಹ್ಯಾಕಾಶ ಸಂಸ್ಥೆ ಅಂಕಿತ ಹಾಕಿದವು.

ಒಪ್ಪಂದದಂತೆ ಎರಡೂ ಸಂಸ್ಥೆಗಳು ಮಾನವಸಹಿತ ಚಂದ್ರಯಾನಕ್ಕಾಗಿ ಒಟ್ಟಾಗಿ ವ್ಯೋಮನೌಕೆಯನ್ನು ತಯಾರಿಸಲಿವೆ ಎಂದು ಇಸ್ರೋದ ವಕ್ತಾರ ಎಸ್ ಸತೀಶ್ ಹೇಳಿದರು.

ಈ ಒಪ್ಪಂದದ ಪ್ರಕಾರ, ಇಸ್ರೋ ಚಂದ್ರಯಾನವನ್ನು ಕೈಗೊಳ್ಳುವ ಮೊದಲೇ ಭಾರತೀಯ ಗಗನಯಾತ್ರಿ ರಷ್ಯಾದ ಬಾಹ್ಯಾಕಾಶ ನೌಕೆಯಲ್ಲಿ ಚಂದ್ರನತ್ತ ಪಯಣ ಬೆಳಸಲಿದ್ದಾರೆ ಎಂದು ಸತೀಶ್ ಅವರು ವಿವರಿಸಿದರು. ಇಸ್ರೋ 2014 ಅಥವಾ 2015ರಲ್ಲಿ ಚಂದ್ರಯಾನ ಕೈಗೊಳ್ಳುವ ಉದ್ದೇಶ ಹೊಂದಿದೆ.

ಅಕ್ಟೋಬರ್ 22ರಂದು ಪಿಎಸ್ಎಲ್ ವಿ - ಸಿ11 ಮುಖಾಂತರ ಚಂದ್ರಯಾನ 1ನ್ನು ಚಂದ್ರನತ್ತ ಉಡಾಯಿಸಿದ ನಂತರ ವಿಶ್ವದ ಗಮನವನ್ನು ಸೆಳೆದಿದೆ. ಯುರೋಪ್ ನ ಸಂಸ್ಥೆಗಾಗಿ ಡಬ್ಯೂ2ಎಮ್ ಉಪಗ್ರಹವನ್ನೂ ಇಸ್ರೋ ತಯಾರಿಸಿದ್ದು, ಡಿಸೆಂಬರ್ 20ರಂದು ಫ್ರೆಂಚ್ ಗಯಾನಾದಿಂದ ಉಡಾಯಿಸಲಿದೆ. 2012ರಲ್ಲಿ ಸೂರ್ಯನ ಅಧ್ಯಯನಕ್ಕಾಗಿ 'ಆದಿತ್ಯ' ಉಪಗ್ರಹವನ್ನು ಉಡಾಯಿಸುವ ಉದ್ದೇಶವನ್ನೂ ಇಸ್ರೋ ಹೊಂದಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X