ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ,ರಾಜಸ್ತಾನ ಕೈತಪ್ಪಿದ್ದು ಭಾರಿ ನೋವು

By Staff
|
Google Oneindia Kannada News

ನವದೆಹಲಿ, ಡಿ. 10 : ದೆಹಲಿ ಮತ್ತು ರಾಜಸ್ತಾನದಲ್ಲಿ ಪಕ್ಷ ಸೋತಿರುವುದಕ್ಕೆ ಸ್ವಲ್ಪ ಮಟ್ಟಿಗಿನ ಹಿನ್ನೆಡೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿ ಆನಂತ್ ಕುಮಾರ್ ಒಪ್ಪಿಕೊಂಡರು. ಪಕ್ಷ ಸಂಘಟನೆ ಕೊರತೆಯೇ ಈ ಚುನಾವಣೆಯಲ್ಲಿ ಅತೀ ವಿಶ್ವಾಸವಿರಿಸಿಕೊಂಡಿದ್ದ ಎರಡು ರಾಜ್ಯಗಳಾದ ದೆಹಲಿ ಮತ್ತು ರಾಜಸ್ತಾನ ರಾಜ್ಯ ಬಿಜೆಪಿ ಕೈತಪ್ಪಿತು ಎಂದು ಅವರು ವಿಶ್ಲೇಶಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಎಲ್ಲಿ ಎಡವಿತು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಂಡರು. ಮಿನಿ ಮಹಾಸಮರ ಎಂದೇ ಭಾವಿಸಲಾಗಿದ್ದ ಐದು ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮುಖಭಂಗವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳದ ಅನಂತ್ ಕುಮಾರ್, ಕೊಂಚ ಮಟ್ಟಿಗಿನ ಹಿನ್ನೆಡೆಯಂತೂ ಆಗಿದೆ ಎನ್ನುತ್ತಾರೆ. ಮಧ್ಯಪ್ರದೇಶದಲ್ಲಿ ಆಗದಿರುವಂತ ಪಕ್ಷ ಸಂಘಟನೆ ರಾಜಸ್ತಾನದಲ್ಲಿಯೂ ಆಗಬೇಕಿತ್ತು. ಜತೆಗೆ ದೆಹಲಿ ಕೂಡಾ ಇದಕ್ಕೆ ಹೊರತಲ್ಲ ಎಂದರು.

ಮಧ್ಯೆಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಮತ್ತೆ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದೆ 230 ಶಾಸಕ ಸ್ಥಾನವನ್ನು ಹೊಂದಿರುವ ವಿಧಾನಸಭೆಯಲ್ಲಿ 142 ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕ ವಿಜಯಕುಮಾರ್ ಮಲ್ಹೋತ್ರಾ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರೂ ಪಕ್ಷಕ್ಕೆ ಅಲ್ಲಿ ಮನ್ನಣೆ ಸಿಗಲಿಲ್ಲ. ಅಲ್ಲಿ ಸಂಘಟನೆ ಕೊರತೆ ಇದೆ ಜತೆಗೆ ಈ ಚುನಾವಣೆಯಲ್ಲಿ ಶೇ. 56 ರಷ್ಟು ಮಾತ್ರ ಮತದಾನವಾಗಿರುವುದು ಬಿಜೆಪಿಗೆ ಭಾರಿ ಪೆಟ್ಟು ಬಿದ್ದಿದೆ ಎಂದು ಸಮರ್ಥಿಸಿಕೊಂಡರು.

ರಾಜಸ್ತಾನದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟಬಹುಮತ ಸಿಕ್ಕಿಲ್ಲ. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆಯ್ಕೆಯಾಗಿದ್ದರೆ, ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನೆಡೆಯಾಗಿದೆ. ಪಕ್ಷ ಸಂಘಟನೆ ಕೊರತೆ ಅಲ್ಲಿ ಕೂಡಾ ಪ್ರಮುಖ ಕಾರಣವಾಗಿದೆ. ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೇ ಸಿಂಧಿಯಾ ಉತ್ತಮ ಆಡಳಿತ ನೀಡಿದರೂ ಮತದಾರರು ಕೈಹಿಡಿಯಲಿಲ್ಲ ಜತೆಗೆ ರಾಜಸ್ತಾನದಲ್ಲಿ ಎರಡು ಅವಧಿಗೆ ಯಾವ ಸರ್ಕಾರವು ಅಧಿಕಾರ ನಡೆಸಿದ ಉದಾಹರಣೆ ಇಲ್ಲ. ಅಲ್ಲಿಯ ಜನತೆ ಐದು ವರ್ಷಕ್ಕೊಂದು ನೂತನ ಸರ್ಕಾರಕ್ಕಾಗಿ, ಮುಖ್ಯಮಂತ್ರಿಗಾಗಿ ಕಾಯುತ್ತಿರುತ್ತಾರೆ ಎಂದು ಅನಂತ್ ಕುಮಾರ್ ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆ ಮೇಲೆ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಯಾವುದೇ ಫಲಿತಾಂಶ ಬೀರುವುದಿಲ್ಲ ಎಂದು ಅನಂತ್ ಕುಮಾರ್, ವಿಧಾನಸಭೆ ಚುನಾವಣೆಯೇ ಬೇರೆ, ಲೋಕಸಭೆ ಚುನಾವಣೆಯೇ ಬೇರೆ ಎಂದರು. ಉಗ್ರರ ಮೇಲಿನ ಮೃದುಧೋರಣೆಯಿಂದ ಸಾಕಷ್ಟು ನೋವು ಅನುಭವಿಸುತ್ತಿರುವ ಮತದಾರರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಬಿಜೆಪಿ ಜತೆ ಸಿದ್ದು ಗೌಪ್ಯ ಹೊಂದಾಣಿಕೆ: ಎಚ್ ಡಿಕೆ
2009ರ ಏಪ್ರಿಲ್-ಮೇ ನಲ್ಲಿ ಲೋಕಸಭೆ ಚುನಾವಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X