ಕೊಚ್ಚಿ ಸಮಾವೇಶ, ಸೋನಿಯಾಗೆ ಜೀವ ಬೆದರಿಕೆ
ಕೊಲಂ, ಡಿ. 8 : ಜಿ 16 ರಂದು ಕೊಚ್ಚಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜೀವ ಭಯ ಕೆರೆ ಬಂದಿದೆಯೇ ? ಹೌದು ಎನ್ನುತ್ತದೆ ಕೋಲಂ ಜಿಲ್ಲಾ ಪೊಲೀಸ್ ಇಲಾಖೆ.
ಕಳೆದ ಭಾನುವಾರ ಕೊಲಂ ಜಿಲ್ಲಾಧಿಕಾರಿ ಕಚೇರಿಗೆ ಇಂತದ್ದೊಂದು ಬೆದರಿಕೆ ಕರೆ ಬಂದಿದೆ. ಈ ಕೇಂದ್ರ ಗುಪ್ತಚರ ಇಲಾಖೆಯ ಕೋಲಂ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿತ್ತು. ಮಸ್ಕತ್ ನಿಂದ ಈ ಬೆದರಿಕೆಯ ಕೆರೆ ಬಂದಿರುವುದು ಗೊತ್ತಾಗಿದೆ. 10 ಮಂದಿ ಇರುವ ಭಯೋತ್ಪಾದಕರ ಗುಂಪೊಂದು ಈ ಕೃತ್ಯ ಎಸಗಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಸ್ಪಷ್ಟಪಡಿಸಿದೆ.
ಡಿ. 14 ರಿಂದ 16ರ ವರೆಗೆ ಕೇರಳ ಪ್ರದೇಶ ಕಾಂಗ್ರೆಸ್ ಕೊಚ್ಚಿಯಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಏರ್ಪಡಿಸಿದೆ. ಕಳದ ತಿಂಗಳ ಹಿಂದೆಯೇ ಇಂತಹ ಬೆದರಿಕೆ ಕರೆ ಬಂದಿತ್ತು. ಆದರ ನಂತರ ಇದೀಗ ಮತ್ತೊಂದು ಕರೆ ಬಂದಿದ್ದರಿಂದ ವ್ಯಾಪಕ ಕಟ್ಟೆಚ್ಚರ ವಹಿಸಿಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications