ಮೂರು ರಾಜ್ಯಗಳು ಕೈ ವಶ, ಎರಡು ಕಮಲಕ್ಕೆ ?

ನವದೆಹಲಿ, ಡಿ. 8 : ರಾಜಸ್ತಾನ, ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರುವುದು ಖಚಿತವಾಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಛಿದ್ರಗೊಂಡಿದ್ದು, ಬಿಜೆಪಿ ಮತ್ತೆ ತನ್ನ ಪಾರುರತ್ಯವನ್ನು ಮುಂದುವೆರೆಸಿದೆ. ದೆಹಲಿ ಮತ್ತು ಛತ್ತೀಸ್ ಗಢದಲ್ಲಿ ಸಮಬಲದ ಹೋರಾಟ ನಡೆದಿದ್ದು, ದೆಹಲಿ ಮತ್ತೊಮ್ಮೆ ಕೈ ವಶವಾದರೆ ಅಚ್ಚರಿಯಿಲ್ಲ.

ಮುಖ್ಯಮಂತ್ರಿ ಶೀಲ್ ದಿಕ್ಷೀತ್ ಹಾಗಬ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ವಿಜಯಕುಮರ್ ಮಲ್ಹೋತ್ರಾ ಮುನ್ನೆಡೆ ಕಾಯ್ದುಕೊಂಡಿದ್ದಾರೆ. ಒಟ್ಟ 69 ಕ್ಷೇತ್ರದಲ್ಲಿ 36 ಕಾಂಗ್ರೆಸ್ ಹಾಗೂ 27 ಬಿಜೆಪಿ ಅಭ್ಯರ್ಥಿಗಳು ಮುನ್ನೆಡೆ ಸಾಧಿಸಿದ್ದಾರೆ.

ರಾಜಸ್ತಾನದಲ್ಲಿ 110 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನೆಡೆ ಸಾಧಿಸಿ ಗೆಲುವಿನ ನಗೆ ಬೀರುವ ಎಲ್ಲ ಸಾಧ್ಯತೆಗಳಿವೆ. ಮಾಯಾವತಿಯ ಅವರ ಬಹುಜನ ಸಮಾಜ ಪಕ್ಷ 6 ಕ್ಷೇತ್ರಗಳಲ್ಲಿ ಮುಂದಿದೆ. ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಅಶೋಕ್ ಗೆಹಲೋಟ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಾಜಸ್ತಾನದ ಸ್ಪೀಕರ್ ಸೋಲಿನ ಭೀತಿ ಎದುರಿಸುತ್ತಿದ್ದಾರೆ.

ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲಿ 126 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನೆಡೆ ಸಾಧಿಸಿದ್ದು, ನಿಚ್ಚಳ ಬಹುಮತದತ್ತ ಸಾಗಿದೆ. ಕಾಂಗ್ರೆಸ್ ಮತ್ತೊಮ್ಮೆ ಧೂಳಿಪಟವಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮುನ್ನೆಡೆ ಸಾಧಿಸಿದ್ದಾರೆ. ಉಮಾಭಾರತಿ ಸೋಲುವ ಸಾಧ್ಯತೆಗಳಿವೆ. ಉಮಭಾರತಿ ಅವರ ಭಾರತೀಯ ಜನಶಕ್ತಿ ಸಂಘ ಸ್ಪರ್ಧಿಸಿದ್ದ 216 ಕ್ಷೇತ್ರಗಳಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಳ್ಳುವ ಸಾಧ್ಯತೆಗಳಿವೆ.

90 ಕ್ಷೇತ್ರಗಳ ಛತ್ತೀಸ್ ಗಢದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಸಮಬಲದಲ್ಲಿ ಮುನ್ನೆಡೆದಿವೆ. ಇತ್ತೀಚಿನ ವರದಿಗಳ ಪ್ರಕಾರ ಕಾಂಗ್ರೆಸ್ 41 ಮತ್ತು ಬಿಜೆಪಿ 41 ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸಿದ್ದವು. ಬಿಎಸ್ ಪಿ 2 ಮತ್ತು ಸಿಪಿಐಎಂ 1 ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸಿವೆ.ಅಜಿತ್ ಜೋಗಿ ಜಯ ಗಳಿಸಿದ್ದು, ಮುಖ್ಯಮಂತ್ರಿ ರಮಣ್ ಸಿಂಗ್, ಅಜಿತ್ ಜೋಗಿ ಪತ್ನಿ ರೇಣು ಜೋಗಿ, ಗೃಹ ಸಚಿವ ರಾಮ್ ವಿಚಾರ್ ನೇತಂ, ಸ್ವೀಕರ್ ಪ್ರೇಮ್ ಪ್ರಕಾಶ್ ಜಾ ಮುನ್ನೆಡೆ ಕಾಯ್ದುಕೊಂಡಿದ್ದಾರೆ. ಹಾಗೂ ಛತ್ತೀಸ್ ಗಢದ ಬಿಜೆಪಿ ರಾಜ್ಯಾಧ್ಯಕ್ಷ ವಿಷ್ಣು ದೇವ್ ಸಾಹ್ನಿ ಸೋಲಿನ ಭೀತಿಯಲ್ಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ರಾಜಸ್ತಾನದಲ್ಲಿ ಕಮಲ ಧೂಳಿಪಟ, ಕೈ ಮೇಲುಗೈ
ಮಿಜೋರಾಂ ಕಾಂಗ್ರೆಸ್ ನ ಹವ್ಲಾ ಜಯಭೇರಿ
2009ರ ಏಪ್ರಿಲ್-ಮೇ ನಲ್ಲಿ ಲೋಕಸಭೆ ಚುನಾವಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+