ಠುಸ್ಸೆ೦ದ ಫೈರ್ ಬ್ರ್ಯಾಂಡ್ ಉಮಾಭಾರತಿ
ಭೂಪಾಲ್, ಡಿ.8 : ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಭಾರತೀಯ ಜನಶಕ್ತಿ ಪಕ್ಷದ ಸಂಸ್ಥಾಪಕಿ ಉಮಾಭಾರತಿ ಮಧ್ಯಪ್ರದೇಶದ ತಿಲಂಗಢ ಕ್ಷೇತ್ರದಲ್ಲಿ ತಮ್ಮ ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಯಾದವೇಂದ್ರ ಸಿಂಗ್ ಬು೦ಡೇಲಾ ಅವರ ಎದುರು 3000ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡು ಭಾರಿ ಮುಖಭಂಗ ಅನುಭವಿಸಿದ್ದಾರೆ.
ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿದ್ದ ಉಮಾ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬೀಳಬಹುದಾದ ಮತಕ್ಕೆ ತೊಂದರೆ ಉಂಟು ಮಾಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಮಧ್ಯಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಏರಲು ಸಜ್ಜಾಗಿದೆ. ಭಾರತೀಯ ಜನಶಕ್ತಿ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 215 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಆದರೆ ಪಕ್ಷದ ಹೆಚ್ಚಿನ ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಂಡಿದ್ದಾರೆ.
ತಿಲಂಗಢ ಕ್ಷೇತ್ರದಲ್ಲಿ ತಾನು ಜಯಗಳಿಸದ್ದಿದ್ದರೆ, ರಾಜಕೀಯ ತೊರೆದು ಕೇದಾರನಾಥ್ ನಲ್ಲಿ ಹೋಗಿ ನೆಲೆಸುವೆ ಎಂದು ಎರಡು ದಿನಗಳ ಹಿಂದೆಯಷ್ಟೆ ಉಮಾ ಪತ್ರಕರ್ತರಿಗೆ ತಿಳಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ದೆಹಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಶೀಲಾ ದೀಕ್ಷಿತ್












Click it and Unblock the Notifications