ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
ಮಧುಗಿರಿ, ಡಿ. 8 : ಮಧುಗಿರಿ ವಿಧಾನಸಭೆ ಕ್ಷೇತ್ರದಿಂದ ಜೆಡಿಎಸ್ ನ ಅಧಿಕೃತ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದು ಖಾತ್ರಿಯಾಗಿದ್ದು, ಇಂದು ಅವರು ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಭಾನುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು, ಜೆಡಿಎಸ್ ನಿಂದ ವೀರಭದ್ರಯ್ಯ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿತ್ತು. ಅವರ ಸ್ವಯಂ ನಿವೃತ್ತಿಯನ್ನು ಸರ್ಕಾರ ಪುರಸ್ಕರಿಸದ ಕಾರಣ ಅನಿತಾ ಕುಮಾರಸ್ವಾಮಿ ಅವರನ್ನು ಅನಿವಾರ್ಯವಾಗಿ ಕಣಕ್ಕಿಸಲು ನಿರ್ಧರಿಸಲಾಗಿದೆ ಎಂದರು.
ಬಿಜೆಪಿಯಿಂದ ಮಾಚಿ ಸಚಿವ ಸಿ ಚೆನ್ನಿಗಪ್ಪ ಅಖಾಡಕ್ಕೆ ಇಳಿಯಲಿದ್ದಾರೆ. ಚೆನ್ನಿಗಪ್ಪ ಅವರು ಒಂದು ಕಾಲದಲ್ಲಿ ದೇವೇಗೌಡರಿಗೆ ನಿಷ್ಠರಾಗಿದ್ದರು. ಆದರೆ ಅನಿರೀಕ್ಷಿವಾಗಿ ಆದ ರಾಜಕೀಯ ಬದಲಾವಣೆಯಿಂದ ಚೆನ್ನಿಗಪ್ಪ ಬಿಜೆಪಿ ಸೇರ್ಪಡೆಯಾದರು. ಚೆನ್ನಿಗಪ್ಪ ಅವರನ್ನು ಸೋಲಿಸಲು ದೇವೇಗೌಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ತೀವ್ರ ವಿರೋಧ
ಬಿಜೆಪಿ ಸರ್ಕಾರವನ್ನು ಕಿತ್ತೆಸಿಯಿರಿ, ಜೆಡಿಎಸ್
ಸರ್ಕಾರದ ವಿರುದ್ಧ ದೇವೇಗೌಡ ಕಿಡಿ












Click it and Unblock the Notifications