ದೇಶದ ಮೂರು ವಿಮಾನ ನಿಲ್ದಾಣಗಳಿಗೆ ಬಿಗಿ ಭದ್ರತೆ

ನವದೆಹಲಿ, ಡಿ.6:ಭಯೋತ್ಪಾದಕರ ಭೀತಿ ಹಾಗೂ ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ನವದೆಹಲಿ,ಬೆಂಗಳೂರು ಮತ್ತು ಚೆನ್ನೈವಿಮಾನ ನಿಲ್ದಾಣಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ಡಿ.3ರಂದು ನಾಗರಿಕ ವಿಮಾನ ಯಾನ ಕಾರ್ಯಾಲಯಕ್ಕೆ ಈ ಬೆದರಿಕೆ ಇ ಮೇಲ್ ಬಂದಿತ್ತು.ಅದರಲ್ಲಿ ಡಿ.6ರಂದು ವಿಮಾನಗಳನ್ನು ಅಪಹರಿಸುವುದಾಗಿ ಬೆದರಿಕೆ ಒಡ್ಡಲಾಗಿತ್ತು.ಹಾಗಾಗಿ ಈ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಭದ್ರತಾ ತಪಾಸಣೆಗಾಗಿ ಮೂರು ಗಂಟೆ ಮುಂಚಿತವಾಗಿಯೇ ವಿಮಾನ ನಿಲ್ದಾಣಕ್ಕೆ ಬರಬೇಕು ಎಂದು ಪ್ರಯಾಣಿಕರಿಗೆ ಸೂಚಿಸಲಾಗಿದೆ. ಕೈಚೀಲಗಳನ್ನು ಕ್ಷ-ಕಿರಣದ ಮೂಲಕ ಪರೀಕ್ಷಿಸಲಾಗುತ್ತಿದೆ.ವಿಮಾನ ನಿಲ್ದಾಣಕ್ಕೆ ಬರುವ ಕಾರುಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಲಾಗುತ್ತಿದೆ. ಸಿಐಎಸ್ ಎಫ್, ಎನ್ ಎಸ್ ಜಿ ಕಮಾಂಡೋಗಳು ಈ ಮೂರು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಕಾರ್ಯದಲ್ಲಿ ನಿಮಗ್ನರಾಗಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+