ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವಾರ ತೈಲ ದರ ಇಳಿಕೆ , ಕೇಂದ್ರ

By Staff
|
Google Oneindia Kannada News

ನವದೆಹಲಿ, ಡಿ. 5 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಮನಾರ್ಹವಾಗಿ ಇಳಿಕೆ ಕಂಡಿದ್ದರಿಂದ ಮುಂದಿನ ವಾರ ಪೆಟ್ರೋಲ್ ಡಿಸೇಲ್ ಹಾಗೂ ಎಲ್ ಪಿಜಿ ಗ್ಯಾಸ್ ಬೆಲೆಗಳನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಪೆಟ್ರೋಲ್ 10 ರು, ಡಿಸೇಲ್ 3 ರು ಹಾಗೂ ಗ್ಯಾಸ್ ದರದಲ್ಲಿ 20 ರು.ಗಳನ್ನು ಕಡಿಮೆ ಮಾಡುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.

ಗುರುವಾರ ರಾಜಸ್ಥಾನದ ಚುನಾವಣೆ ಮುಕ್ತಾಯವಾಗಿದೆ. ಎಲ್ಲ ನಾಲ್ಕು ರಾಜ್ಯದಲ್ಲಿ ಚುನಾವಣೆ ಮುಗಿದಿರುವುದರಿಂದ ತೈಲ ಬೆಲೆ ಪರಿಷ್ಕರಣೆಯಾಗಲಿದೆ. ಡಿ 1 ರಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಆ ಸಭೆಯಲ್ಲಿ ಇದರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಉನ್ನತ ಮೂಲಗಳು ಪ್ರಕಾರ ಪೆಟ್ರೋಲ್ ಗೆ 10 ರು. ಡಿಸೇಲ್ ಗೆ 3 ರು ಮತ್ತು ಗ್ಯಾಸ್ ದರದಲ್ಲಿ 20 ರು.ಗಳನ್ನು ಇಳಿಕೆ ಮಾಡಲು ಪ್ರಧಾನಮಂತ್ರಿ ಮನಮೋಹನ್ ಸಿಂಗ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಬೆಲೆ 45 ಡಾಲರ್ ಆಗಿದೆ. ಒಂದೊಮ್ಮೆ ಬ್ಯಾರೆಲ್ ಬೆಲೆ 50 ಡಾಲರ್ ಗಿಂತ ಕಡಿಮೆಯಾದಲ್ಲಿ ತೈಲಗಳ ದರ ಇಳಿಕೆ ಮಾಡಲು ಚಿಂತನೆ ಮಾಡಲಾಗುವುದು ಎಂದು ಇಂಧನ ಸಚಿವ ಮುರಳಿ ದೇವೋರಾ ಸ್ಪಷ್ಟಪಡಿಸಿದ್ದರು. ಬ್ಯಾರೆಲ್ ಬೆಲೆಯಲ್ಲಿ ಭಾರಿ ಕುಸಿತ ಕಂಡು ತಿಂಗಳುಗಳೆ ಕಳೆದು ಹೋಗಿದ್ದವು. ಆದರೆ ತೈಲ ಬೆಲೆ ಇಳಿಕೆಯನ್ನು ಎದುರು ನೋಡುತ್ತಿರುವ ಜನರು ಸ್ವಲ್ಪ ದಿನ ಕಾಯಬೇಕು, ಕಾರಣ ಸರ್ಕಾರಕ್ಕೆ ಈ ಹಿಂದೆ ಆಗಿರುವ ನಷ್ಟವನ್ನು ತುಂಬಿಕೊಳ್ಳುವ ಸಲುವಾಗಿ ದರ ಇಳಿಕೆಯನ್ನು ತಡೆಹಿಡಿಯಲಾಗಿದೆ ಎಂದು ಸಚಿವರು ಹೇಳಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X