ಇಂದು ಟಿವಿ9 ಒಗ್ಗಟ್ಟು ಪ್ರದರ್ಶನ

ಬೆಂಗಳೂರು, ಡಿ. 5 : ಭಯೋತ್ಪಾದನೆ ವಿರುದ್ಧ ಜನಾಭಿಪ್ರಾಯ ಸಂಗ್ರಹಣೆ ಮತ್ತು ಜನಜಾಗೃತಿ ಮೂಡಿಸುವ ಸಲುವಾಗಿ ಟಿವಿ9 ಇಂದು ಸಂಜೆ ಬೆಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಗರಿಕರ ಅಭಿಪ್ರಾಯಗಳನ್ನು ಆಲಿಸುವುದು ಮತ್ತು ಅದನ್ನು ನೇರ ಪ್ರಸಾರ ಮಾಡುವ ವಿನೂತನ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ.

ಶುಕ್ರವಾರ ( ಡಿ 5) ಸಂಜೆ 6 ಗಂಟೆ ಆರಂಭವಾಗುವ ಈ ಕಾರ್ಯಕ್ರಮ 8 ಗಂಟೆಯವರೆಗೆ ನಡೆಯುತ್ತದೆ. ಸರ್ವರಿಗೂ ಸ್ವಾಗತ ಕೋರಲಾಗಿದೆ ಎಂದು ಟಿವಿ9 ವಾರ್ತಾ ನಿರೂಪಕ ರಂಗನಾಥ್ ಭಾರದ್ವಾಜ್ ಅವರು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.

ಸುಮಾರು 1000 ನಾಗರಿಕರನ್ನು ಆಮಂತ್ರಿಸಿ ಅವರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ರಾಜ್ಯದ ಜನತೆಯ ಮುಂದೆ ಇಡುವುದು ಮತ್ತು ಆ ಮೂಲಕ ಭಯೋತ್ಪಾದನೆಯ ಒಳಹೊರಗುಗಳ ಬಗೆಗೆ ಜನಮಾನಸದ ಸಂಕಲ್ಪವನ್ನು ಗಟ್ಟಿಗೊಳಿವುದು ಈ ಕಾರ್ಯಕ್ರಮದ ಧ್ಯೇಯ ಎಂದು ಭಾರದ್ವಾಜ್ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+