ಚುನಾವಣೆ: ಕಳ್ಳಭಟ್ಟಿ ಸಾರಾಯಿ ಮಾರಾಟ ನಿಯಂತ್ರಣ

ಬೆಳಗಾವಿ, ಡಿ.1: ಜಿಲ್ಲೆಯ ಅರಭಾಂವಿ ಹಾಗೂ ಹುಕ್ಕೇರಿ ಮತಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಕಳ್ಳಭಟ್ಟಿ ಸಾರಾಯಿ ಮಾರಾಟ ನಿಯಂತ್ರಣಕ್ಕಾಗಿ ಅತ್ಯಂತ ಹೆಚ್ಚಿನ ನಿಗಾವಹಿಸಲು ಜಿಲ್ಲಾಧಿಕಾರಿ ಡಾ. ಜೆ. ರವಿಶಂಕರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗೂಂಡಾ ನಿಷೇಧ ಕಾಯ್ದೆ 1985 ರಡಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ 2008 ರ ನವೆಂಬರ್ 24 ರಂದು ನಡೆದ ಜಿಲ್ಲಾ ಸ್ಥಾಯಿ ಸಮಿತಿ ಸಭೆಯಲ್ಲಿ ಹುಕ್ಕೇರಿ ಹಾಗೂ ಗೋಕಾಕ ತಾಲೂಕಿನಲ್ಲಿಯ ಸಕ್ಕರೆ ಕಾರ್ಖಾನೆಗಳಲ್ಲಿ ಚುನಾವಣೆಯ 8 ದಿನ ಮೊದಲು ಡಿಸ್ಟಲರಿಯನ್ನು ತಯಾರಿಸುವುದನ್ನು ಬಂದ್ ಮಾಡುವ ಬಗ್ಗೆ ಕ್ರಮ ಜರುಗಿಸಬೇಕು. ಅಬಕಾರಿ ಉಪ ಆಯುಕ್ತರು, ಬೆಳಗಾವಿ ಇವರು ಅಧ್ಯಕ್ಷರನ್ನು ಕೋರಿದ್ದರ ಹಿನ್ನಲೆಯಲ್ಲಿ ಈ ಕುರಿತು ಪ್ರತ್ಯೇಕವಾಗಿ ಸಭೆ ಕರೆದು ಚರ್ಚಿಸಿ ನೀರ್ಣಯ ತೆಗೆದುಕೊಳ್ಳುವುದಾಗಿ ಜಿಲ್ಲಾ ದಂಡಾಧಿಕಾರಿಗಳು ತಿಳಿಸಿದರು.

2008 ರ ಜುಲೈ ರಿಂದ ಅಕ್ಟೋಬರ್‌ವರೆಗೆ ಸಾಧಿಸಿದ ಪ್ರಗತಿಯ ಬಗ್ಗೆ ಅಬಕಾರಿ ಉಪ ಆಯುಕ್ತರು ಸಭೆಗೆ ನೀಡಿದ ವಿವರಣೆಯನ್ನು ಪರಿಶೀಲನೆ ಮಾಡಲಾಗಿ ಈ ಅವಧಿಯಲ್ಲಿ ಒಟ್ಟು 150 ಘೋರ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 47 ವಾಹನಗಳನ್ನು ಜಪ್ತಾಗಿದ್ದು, 11 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ತಿಳಿಸಿದರು.
(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+