ವಿಮಾನ ಇಂಧನ ಅಗ್ಗ,ಟಿಕೆಟ್ ದರಗಳಲ್ಲಿ ಇಳಿಕೆ?

ನವದೆಹಲಿ, ನ.16: ತೈಲ ಕಂಪನಿಗಳು ವಿಮಾನ ಇಂಧನದ ದರವನ್ನು ಕಡಿತಗೊಳಿಸಿವೆ.ಒಂದೇ ತಿಂಗಳಲ್ಲಿ ವಿಮಾನ ಇಂಧನ ದರ ಕಡಿತಕ್ಕೊಳಗಾಗುತ್ತಿರುವುದು ಇದು ಮೂರನೇ ಸಲ. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ವಿಮಾನ ಇಂಧನದ ದರ ಅರ್ಧದಷ್ಟು ಕಡಿಮೆಯಾಗಿದೆ.

ವಿಮಾನ ಇಂಧನದ ಬೆಲೆಯನ್ನು ಶೇ.12ರಷ್ಟು ಇಳಿಕೆ ಮಾಡಲಾಗಿದ್ದು ಈ ದರಗಳು ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ದೆಹಲಿಯಲ್ಲಿ ವಿಮಾನ ಇಂಧನದ ಬೆಲೆ ಕಿಲೋ ಲೀಟರ್ ಗೆ ರು.39,380.51ರಷ್ಟಿದೆ. ವಿಮಾನ ಇಂಧನ ದರದ ಬೆಲೆಯಲ್ಲಿ ಇಳಿಕೆಯಾಗಿರುವ ಕಾರಣ ಟಿಕೆಟ್ ಗಳ ಬೆಲೆಯೂ ಶೇ.40ರಿಂದ 50ರಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ.

ಈ ಕೂಡಲೆ ಟಿಕೆಟ್ ದರಗಳಲ್ಲಿ ಇಳಿಕೆಯಾಗುವ ಸೂಚನೆಗಳು ಇಲ್ಲ. ಈ ವರ್ಷದಲ್ಲಾದ ನಷ್ಟವನ್ನು ಸರಿತೂಗಿಸಿಕೊಂಡ ಬಳಿಕವಷ್ಟೆ ಟಿಕೆಟ್ ದರಗಳನ್ನು ಕಡಿತಗೊಳಿಸಲು ವಿಮಾನಯಾನ ಸಂಸ್ಥೆಗಳು ಯೋಜಿಸಿವೆ. ''ತೈಲ ಬೆಲೆಗಳು ತಿಂಗಳಿಂದ ತಿಂಗಳಿಗೆ ಏರಿಕೆಯಾಗುತ್ತಿದ್ದಾಗ ನಮ್ಮ ಹೊರೆಯ ಒಂದು ಭಾಗವನ್ನು ಮಾತ್ರ ಗ್ರಾಹಕರ ಮೇಲೆ ಹೊರಿಸುತ್ತಿದ್ದೆವು.ಆಗೆಲ್ಲಾ ಟಿಕೆಟ್ ದರಗಳನ್ನು ನಾಮಮಾತ್ರ ಏರಿಸಿದ್ದುಂಟು'' ಎಂದು ಏರ್ ಇಂಡಿಯಾ ವಕ್ತಾರ ಜೆ.ಭಾರ್ಗವ ಈ ಕುರಿತು ವಿವರ ನೀಡಿದರು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+