ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಭೂತಿ ಬಳಿದರೆ ಕೈಲಾಸ ಸಿಗದು: ಕರುಣಾನಿಧಿ

By Staff
|
Google Oneindia Kannada News

Karunanidhi once again stirs hornest's nest
ಚೆನ್ನೈ, ನ. 8: ಕೆಲ ತಿಂಗಳ ಹಿಂದೆ ಸೇತು ಸಮುದ್ರ ವಿಚಾರದಲ್ಲಿ "ಶ್ರೀ ರಾಮ ಒಬ್ಬ ಶುದ್ದ ಕುಡುಕ" ಮತ್ತು ರಾಮ ಸೇತುವನ್ನ ಶ್ರೀ ರಾಮಚಂದ್ರ ಕಟ್ಟಿದ ಎನ್ನುವುದಾದರೆ ಅವನು ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದು ವ್ಯಂಗ್ಯವಾಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂ ಆಚಾರ, ವಿಚಾರಗಳನ್ನ ಮತ್ತು ಅವುಗಳ ಪ್ರಸ್ತುತತೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಸದಾ ಜಾತ್ಯತೀತರಂತೆ ಕಾಣುವ ಅವರು ಈ ಸಲ ಅವರ ಕವನವೊಂದರ ಮುಖಾಂತರ ವಿವಾದದ ಕಿಡಿಗೆ ತುಪ್ಪ ಸುರಿದಿದ್ದಾರೆ. ಹಣೆಗೆ ತಿಲಕ, ವಿಭೂತಿ, ಕುಂಕುಮ ಇಡುವ ಪದ್ದತಿಯನ್ನು "ಕಂದಾಚಾರ" ಎಂದು ಜರಿದಿರುವ ಕರುಣಾನಿಧಿ ಈ ಎಲ್ಲ ಆಚರಣೆಗಳು ಯಾಕೆ ಬೇಕು ಎಂದು ನೇರವಾಗಿಯೇ ಪ್ರಶ್ನೆಯನ್ನು ಎತ್ತಿದ್ದಾರೆ.

ಇಷ್ಟಕ್ಕೆ ಸುಮ್ಮನಿರದ ಕರುಣಾನಿಧಿ, ದೇಶದಲ್ಲಿ ಇಂಥ ಪದ್ದತಿಗಳ ಅವಶ್ಯಕತೆ ಇದೆಯಾ? ಎಲ್ಲ ಧರ್ಮಗಳು ಸಮಾನವೆಂಬ ಭಾವನೆಗೆ ಹಣೆಗೆ ತಿಲಕ ಇಡುವಂಥ ಪದ್ಧತಿಗಳು ಧಕ್ಕೆ ತಂದಿವೆ. ಬ್ರಾಹ್ಮಣರೇಕೆ ಉಪನಯನ ಮಾಡಿಕೊಂಡು ಜನಿವಾರ ಹಾಕಿಕೊಳ್ಳಬೇಕು? ಅದ್ಯಾವ ರೀತಿಯಲ್ಲಿ ಪವಿತ್ರ ಮತ್ತು ಸಮಂಜಸ ಎಂಬ ಪ್ರಶ್ನೆಗಳನ್ನು ಹರಿಯಬಿಟ್ಟಿದ್ದಾರೆ.

ಇದಕ್ಕೂ ಮೊದಲು "ಹಿಂದೂಗಳೆಲ್ಲ ದರೋಡೆಕೋರರು" ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂಗಳನ್ನು ನಿಂದಿಸಿದ್ದನ್ನ ನಾವು ಸ್ಮರಿಸಬಹುದು. ದೇವರು ಎಂಬ ಪರಿಕಲ್ಪನೆಯೇ ಸುಳ್ಳು, ಸತ್ಯವೇ ದೇವರು ಎಂಬುವುದು ಕರುಣಾನಿಧಿ ಅವರ ವಾದ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X