ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ ಸಾಮಾನ್ಯರತ್ತಲೂ ಹರಿಯಲಿ ಇ-ಆಡಳಿತ

By *ನಿಸ್ಮಿತಾ
|
Google Oneindia Kannada News

ಬೆಂಗಳೂರು, ನವೆಂಬರ್. 7: 'ಗ್ರಾಹಕ ಕೇಂದ್ರೀಕೃತ ಸೇವೆ'ಗೆ ಒತ್ತು ನೀಡುತ್ತಿರುವ ಇ-ಆಡಳಿತವು ಮುಂದಿನ ದಿನಗಳಲ್ಲಿ ತನ್ನ ಕಾರ್ಯವೈಖರಿಯನ್ನು ಮಾರ್ಪಡಿಸಿಕೊಂಡು ಜನ ಸಾಮಾನ್ಯರಿಗೂ ದೋಷರಹಿತವಾಗಿ ಸುಲಭ ರೀತಿಯಲ್ಲಿ ಉಚಿತ ಸೇವೆಯನ್ನು ನೀಡಿ ಇನ್ನೂ ಬಳಕೆದಾರರ ಸ್ನೇಹಪರವಾಗಲಿ' ಎನ್ನುವ ಅಭಿಪ್ರಾಯವನ್ನು ಪ್ರಿನ್ಸ್ ವಾಟರ್‌ಹೌಸ್ ಕೂಪ್ರೆಸ್ ಪ್ರೈ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜಿ.ವಿ. ಸುಬ್ರಮಣ್ಯಯಂ ವ್ಯಕ್ತಪಡಿಸಿದರು.

ಮಾಹಿತಿ ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕರ್ನಾಟಕ ಸರ್ಕಾರದ ಎಸ್‌ಟಿಪಿಐ, ಎಂಎಂ ಆಕ್ಟೀವ್ ಸೈ-ಟೆಕ್ ಕಮ್ಯೂನಿಕೇಷನ್ ಜೊತೆಗೂಡಿ ಆಯೋಜಿಸಿರುವ ಮಾಹಿತಿ ತಂತ್ರಜ್ಞಾನ ವಲಯದ ಬೃಹತ್ ಐಟಿ ಮೇಳವಾದ 'ಬೆಂಗಳೂರು ಐಟಿ.ಬಿಜ್‌ನ' ಎರಡನೇ ದಿನದಆಯೋಜಿಸಲಾಗಿದ್ದ ಇ-ಆಡಳಿತ ಕುರಿತಾದ ಉಪನ್ಯಾಸದ ವೇಳೆ ಇ- ಆಡಳಿತ ವ್ಯವಸ್ಥೆಯ ತಜ್ಞ ಸುಬ್ರಮಣ್ಯಂ ಅವರು ನೀಡಿದ ಉಪನ್ಯಾಸದ ಪ್ರಮುಖ ಅಂಶಗಳು ಹೀಗಿವೆ:

'ಕಳೆದ ಐದು ವರ್ಷಗಳಿಂದ ದೇಶದ ಕೆಲವು ರಾಜ್ಯಗಳಲ್ಲಿ ಇ-ಆಡಳಿತವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಇ-ಆಡಳಿತದ ಪಾತ್ರ ಪ್ರಮುಖವಾದುದು. ಆದರೆ, ಕೆಲವು ರಾಜ್ಯಗಳು ಇನ್ನೂ ಇ-ಆಡಳಿತವನ್ನು ಅಳವಡಿಸಿಕೊಳ್ಳದಿರುವುದು ದುರದೃಷ್ಟಕರ. ಹಾಗೆಯೇ, ಇ-ಆಡಳಿತ ಜಾರಿಯಾಗಿರುವ ಕೆಲವು ರಾಜ್ಯಗಳಲ್ಲಿ ಅವುಗಳ ವ್ಯಾಪ್ತಿ ಸರ್ಕಾರಿ ಇಲಾಖೆಗಳಿಗೆ ಸೀಮಿತವಾಗಿದೆ.

ಪ್ರಸಕ್ತ ಪರಿಸ್ಥಿತಿಯಲ್ಲಿ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇಕಡಾ 50ಕ್ಕಿಂತಲೂ ಅಧಿಕವಾಗಿ 30 ವರ್ಷ ವಯೋಮಾನದವರಾಗಿದ್ದಾರೆ. ಇವರೆಲ್ಲರೂ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಭವಿಷ್ಯದ ಪೀಳಿಗೆಯವರು ಬಳಸಿಕೊಳ್ಳಲು ಅನುವಾಗುವಂತಹ ಸೇವೆಯನ್ನು ನೀಡುವತ್ತ ಇ-ಆಡಳಿತ ಚಿತ್ತ ಹರಿಸಬೇಕೆಂದು ಜಿ.ವಿ. ಸುಬ್ರಮಣ್ಯಂ ಅವರು ತಿಳಿಸಿದರು.

ಮುಂದುವರಿದು ಮಾತನಾಡಿ ಅವರು, 'ಬಳಕೆದಾರನೊಬ್ಬ ಸೇವೆಯೊಂದಿಗೆ ಜೋಡಣೆಗೊಳ್ಳಲು ಬಯಸುತ್ತಾನೆಯೇ ಹೊರತು, ಹಲವಾರು ಇಲಾಖೆಗಳೊಂದಿಗೆ ಅಲ್ಲ, ಇ-ಆಡಳಿತವನ್ನು ಜಾರಿಗೊಳಿಸುವಾಗ ಸರ್ಕಾರದ ನೀತಿ ನಿರೂಪಕರು ಈ ಅಂಶದ ಬಗ್ಗೆ ಗಮನ ನೀಡುವುದು ಅಗತ್ಯವಾಗಿರುತ್ತದೆ. ನೀಡುವ ಸೇವೆಗಳು ಗುರಿ ಸಾಧಿಸುವಂತಿರಬೇಕು. ಜೊತೆಗೆ ಅದರ ಗುಣಮಟ್ಟ ಅತ್ಯುತ್ತಮವಾಗಿದ್ದು ಅದರ ಬಳಕೆ ಶುಲ್ಕವು ಅತ್ಯಲ್ಪವಾಗಿರಬೇಕು. ಗ್ರಾಹಕ ಕೇಂದ್ರೀಕೃತ ಸೇವೆಯನ್ನು ನೀಡಲು ಬದ್ಧವಾಗಿರಬೇಕು ಇಲ್ಲದ್ದಿದ್ದರೇ ಇಡೀ ವ್ಯವಸ್ಥೆಯಲ್ಲೇ ಏರುಪೇರು ಕಾಣಿಸಿಕೊಳ್ಳುತ್ತದೆ' ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಇಲಾಖಾ ಕೇಂದ್ರೀಕೃತವಾಗಿರುವ ಬದಲು ಗ್ರಾಹಕರನ್ನು ಕೇಂದ್ರೀಕರಿಸಿಕೊಂಡು ಯಶಸ್ಸಿನ ಸಂಸ್ಥೆಯನ್ನು ವಿನ್ಯಾಸಗೊಳಿಸಿ ಮತ್ತು ವಹಿವಾಟನ್ನು ವೃದ್ಧಿಸಿಕೊಳ್ಳಲು ಇರುವ ಅವಕಾಶಗಳನ್ನು ಅನ್ವೇಷಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಐಸಿಟಿಯ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಬಹುದಾಗಿ ಸುಬ್ರಮಣ್ಯಂ ಅವರು ಸಲಹೆ ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X