ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಕದ ಹೊಸ್ತಿಲಲ್ಲಿ ಎಡವಿದ ರಾಜ್ಯೋತ್ಸವ ಪ್ರಶಸ್ತಿ

By Staff
|
Google Oneindia Kannada News

Rajyostava awards announcedಬೆಂಗಳೂರು, ಅ.30: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಗೃಹ ಸಚಿವ ವಿ.ಎಸ್.ಆಚಾರ್ಯ ಇಂದು ಸಂಜೆ ಬಿಡುಗಡೆ ಮಾಡಿದರು. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ 90 ಮಂದಿಗೆ ವರಿಸಿದೆ.

ಚಂದ್ರಯಾನ ಯೋಜನೆಯ ರೂವಾರಿ, ವಿಜ್ಞಾನಿ ಶಿವಕುಮಾರ್, ಪತ್ರಕರ್ತ ರವಿ ಬೆಳಗೆರೆ, ಪದ್ಮರಾಜ ದಂಡಾವತಿ ಸೇರಿದಂತೆ ಮೋಹನ್ ದಾಸ್ ಪೈ, ಹಿನ್ನಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ನಟ ಸಾಯಿಕುಮಾರ್, ಅನಂತ್ ಕೊಪ್ಪರ್(ಮಾಹಿತಿ ತಂತ್ರಜ್ಞಾನ), ಡಾ.ವಿಜಯಾ ದಬ್ಬೆ, ಎಂ ಅಣ್ಣಾದೊರೈ, ಪ್ರೊ.ಬಲರಾಮ್, ಮೀರಾತಾಯಿ ಕೊಪ್ಪಿಕರ್(ಕೃಷಿ), ಫರೀದಾ ರಹಮತುಲ್ಲ, ಯಶವಂತ ಹಳಿಬಂಡಿ(ಸುಗಮ ಸಂಗೀತ), ಎಸ್ ಆರ್ ರಾಮಸ್ವಾಮಿ, ಸಂಗಮೇಶ್ವರ ಸ್ವಾಮಿ ಹಿರೇಮಠ್, ವೆಂಕಟ್ ರಾಘವನ್(ಶಾಸ್ತ್ರೀಯ ಸಂಗೀತ), ಕೆ ಎಲ್ ನಾರಾಯಣ ಸ್ವಾಮಿ(ಗಮಕ), ಮಾಲತಿ ಸುಧೀರ್, ವಾಣಿ ಸರಸ್ವತಿ(ರಂಗಭೂಮಿ), ಗೀತಾ ಬಾಲಿ(ನೃತ್ಯ), ಶಿವಪ್ಪ ಯಲ್ಲಪ್ಪ ಭಜಂತ್ರಿ, ಪ್ರೊ ಎಸ್ ಜಿ ಸಿದ್ದರಾಮಯ್ಯ, ಡಾ ವೀರಣ್ಣ ರಾಜೂರು, ಹನುಮಂತ ಕುಮಾರ್ ಮುಧೋಳ್, ಡಾ ಸಣ್ಣ ರಾಮನಾಯಯ್ಕ್ (ಸಾಹಿತ್ಯ), ಹೊರದೇಶ ಕನ್ನಡಿಗ ಡಾ.ಉದಯ್ ಪ್ರಕಾಶ್, ಪಿ. ವಲಿ(ಸಮಾಜಸೇವೆ) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 90 ಮಂದಿಗೆ ಪ್ರಶಸ್ತಿ ನೀಡಲಾಗಿದೆ.

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಸುಮಾರು 3 ಸಾವಿರ ಅರ್ಜಿಗಳು ಬಂದಿದ್ದವು. ಇದರಲ್ಲಿ ಅರ್ಹರಾದವರನ್ನು ಅಳೆದು, ತೂಗಿ, ಜಿಲ್ಲಾವಾರು, ಪ್ರಾಂತ್ಯವಾರು ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಇಂದು ಬೆಳಗ್ಗೆಯೇ ಬಿಡುಗಡೆಯಾಗಬೇಕಿತ್ತಾದಾರೂ ಮುಖ್ಯಮಂತ್ರಿಗಳು ಪ್ರವಾಸದಲ್ಲಿರುವ ಕಾರಣ ಪಟ್ಟಿಯನ್ನು ಸಂಜೆ ಬಿಡುಗಡೆ ಮಾಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿಯು 20 ಗ್ರಾಂ ಚಿನ್ನದ ಪದಕ ಹಾಗೂ ರು. 1 ಲಕ್ಷ ನಗದು ಬಹುಮಾನ,ಪ್ರಶಸ್ತಿ ಫಲಕವನ್ನು ಹೊಂದಿದೆ. ನ.1ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾತ್ತಿದೆ. ಪೂರ್ಣ ಪಟ್ಟಿಗಾಗಿ ನಿರೀಕ್ಷಿಸಿ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X