ಮೈಸೂರು : ಕೊಳಚೆ ಮುಕ್ತ ನಗರಕ್ಕೆ ಪಣ : ಶೋಭಾ
ಮೈಸೂರು, ಅ. 23 : ಮುಂದಿನ ವರ್ಷದ ದಸರಾ ಮಹೋತ್ಸವದ ಹೊತ್ತಿಗೆ ಐತಿಹಾಸಿಕ ನಗರಿ ಮೈಸೂರು ನಗರವನ್ನು ಕೊಳಗೇರಿ ಪ್ರದೇಶದಿಂದ ಮುಕ್ತಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಘೋಷಿಸಿದರು.
ಜವಾಹರ್ ಲಾಲ್ ನೆಹರು ರಾಷ್ಟ್ರೀಯ ನಗರಾಭಿವೃದ್ಧಿ ಯೋಜನೆಯಡಿಯಲ್ಲಿ ಮೈಸೂರು ಮಹಾನಗರ ಪಾಲಿಕೆ, ರಾಜ್ಯ ಕೊಳಚೆ ನಿರ್ಮೊಲನಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ನಗರದ ಮೇದಾರ ಬ್ಲಾಕ್ ನ ಬಂಬೂ ಬಜಾರ್ ನಲ್ಲಿ ಕೊಳಚೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಫಾಪನೆ ನೆರವೇರಿಸಿ ಮಾತನಾಡಿದ ಅವರು, ಎರಡು ಹಂತದಲ್ಲಿ ಮನೆಗಳ ನಿರ್ಮಾಣ ಮಾಡುವುದಾಗಿ ಹೇಳಿದರು.
ಒಟ್ಟು 3288 ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಮುಂದಿನ ವರ್ಷದ ದಸರಾದೊಳಗೆ ಸಂಪೂರ್ಣ ಕಾಮಗಾರಿಯನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದರು.
(ದಟ್ಸ್ಕನ್ನಡವಾರ್ತೆ)
ದಸರಾ ಹಬ್ಬದ ಸಂಭ್ರಮದ ಸುದ್ದಿಗಳು
ನವರಾತ್ರಿಯ ಗ್ಯಾಲರಿ












Click it and Unblock the Notifications