ಮಾಯಾವಿ ಸರೋವರ ನಾಟಕ ಪ್ರದರ್ಶನ

ದಟ್ಸ್ ಕನ್ನಡಕ್ಕಾಗಿ ಜಾಲತರಂಗ ಅಂಕಣವನ್ನು ಬಹಳಷ್ಟು ದಿನಗಳಿಂದ ಬರೆಯುತ್ತಿರುವ ಅನಿವಾಸಿ ಲೇಖಕ, ನಾಟಕಕಾರ ಮೈ ಶ್ರೀ ನಟರಾಜ ಅವರು ರಚಿಸಿರುವ 'ಮಾಯಾವಿ ಸರೋವರ' ನಾಟಕ ಈ ಶನಿವಾರ ಸಂಜೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. 38 ವರ್ಷಗಳ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವ ಕಲಾಗಂಗೋತ್ರಿ ತಂಡದಿಂದ ಈ ಹಾಸ್ಯ ನಾಟಕ ರಂಗವೇರುತ್ತಿದೆ.

ಅಮೆರಿಕನ್ನಡಿಗರಿಗೆ ಈ ನಾಟಕ ಚಿರಪರಿಚಿತವಾಗಿದೆ ಎಂದರೆ ತಪ್ಪಾಗಲಾರದು. ಮೂಲ ಹಿಂದಿ ನಾಟಕ(ಕರ್ತೃ: ಡಾ. ಶಂಕರ ಶೇಷ) ಹಾಗೂ ಡಾ. ಮೈಶ್ರೀನ ಅವರ ಕನ್ನಡ ಅನುವಾದಿತ ನಾಟಕವನ್ನು ನೋಡಿ ಆನಂದಿಸಿದ್ದಾರೆ. ಈಗ ಬೆಂಗಳೂರಿಗರಿಗೆ 'ನಾಟಕ ಬೆಂಗ್ಳೂರು' ಹಬ್ಬದ ಪ್ರಯುಕ್ತ ಈ ನಾಟಕ ನೋಡುವ ಸೌಭಾಗ್ಯ ಲಭ್ಯವಾಗಿದೆ. ಮೈಸೂರಿನ ಗೀತಾ ಬುಕ್ ಹೌಸ್ ಅವರು ಮೈಶ್ರೀನ ಅವರ ಅನುವಾದಿತ ನಾಟಕವನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ.

ಕಲಾಗಂಗೋತ್ರಿಯ' ಮ' ವ್ಯಾಮೋಹ : ನಮ್ಮ ಮೆಗ ಸಿರಿಯಲ್ ಕಿಂಗ್ ಟಿ ಎನ್ ಸೀತಾರಾಮ್ ರಂತೆ ಕಲಾಗಂಗೋತ್ರಿ ತಂಡಕ್ಕೂ ಕೂಡ ಇತ್ತೀಚೆಗೆ 'ಮ' ಕಾರದ ಮೇಲೆ ವ್ಯಾಮೋಹ ಹುಟ್ಟಿದೆ. ಮುಖ್ಯಮಂತ್ರಿ, ಮೂಕಜ್ಜಿಯ ಕನಸು, ಮೈಸೂರು ಮಲ್ಲಿಗೆ ಹಾಗೂ ಮಂದ್ರ ನಾಟಕಗಳ ಭರ್ಜರಿ ಯಶಸ್ಸಿನ ನಂತರ ಈಗ ಪ್ರೇಕ್ಷಕರನ್ನು 'ಮಾಯಾವಿ ಸರೋವರ'ದಲ್ಲಿ ಮುಳುಗಿಸಲು ಮುಖ್ಯಮಂತ್ರಿ ಚಂದ್ರು ಹಾಗೂ ಬಿವಿ ರಾಜಾರಾಮ್ ಅವರ ಮುಂದಾಳತ್ವದಲ್ಲಿ ಕಲಾಗಂಗೋತ್ರಿ ತಂಡ ಸಿದ್ಧವಾಗಿದೆ.

'ನಾ ನೀನಾದ್ರೆ ನೀ ನಾನಾಗಬಹುದಾ? ರೋಲ್ ಚೇಂಚ್ ಮಾಡೋದಾ? ಊಹಾ ಲೋಕದಲ್ಲಿ ತೇಲುತ್ತಾ ರಾಜ ರಾಣಿಯರ ಕಥೆಯಿಂದ ಆಧುನಿಕ ಯುಗದ ಸಾಂಸಾರಿಕ ಲೋಕಕ್ಕೆ ಧುಮಕುವ ಈ ಕಥೆ ಹಾಸ್ಯದ ಹೊನಲಿನಲ್ಲಿ ತೇಲಿಸಿ ಸರೋವರದಲ್ಲಿ ನಿಮ್ಮನ್ನು ಮುಳುಗಿಸಲಿದೆ ಎನ್ನುತ್ತಾರೆ ನಾಟಕದ ವಿನ್ಯಾಸಕಾರ ಹಾಗೂ ನಿರ್ದೇಶಕ ಬಿವಿ ರಾಜಾರಾಂ.ಈ ನಾಟಕದಲ್ಲಿ ಒಂದಿಬ್ಬರು ಹಿರಿಯ ಕಲಾವಿದರನ್ನು ಬಿಟ್ಟರೆ ಉಳಿದವರೆಲ್ಲ ಯುವ ನಟ, ನಟಿಯರು ಅಭಿನಯಿಸುತ್ತಿದ್ದಾರೆ.

ಮಾಯಾವಿ ಸರೋವರ ಎಲ್ಲಾ ಬಗೆಯ ಜನರನ್ನು ರಂಜಿಸಲಿದೆ ಎಂದರು.ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೇಲೆ ಇದು ಅವರ ಮೊದಲ ಹಾಸ್ಯಭರಿತ ಪ್ರಯೋಗ. ಅಕಾಡೆಮಿಯ ಯೋಜನೆಗಳ ನಾಟಕದ ಮಾತಾಡುತ್ತಾ..ಅಕಾಡೆಮಿಗೆ ಹೊಸ ರೂಪುರೇಷೆ ನೀಡಿ, ಹೆಚ್ಚೆಚ್ಚು ಯುವಜನರನ್ನು ರಂಗಭೂಮಿಯತ್ತ ಆಕರ್ಷಿಸುವಂತೆ ಮಾಡಲಾಗುವುದು ಎಂದರು.

ಹಬ್ಬದ ಸಂಭ್ರಮಕ್ಕೆ ಮುನ್ನುಡಿಯಂತೆ ಮನಸಾರೆ ನಗಲು ಶನಿವಾರ ಅ.25 ರಂದು ಸಂಜೆ 7 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನವಿರುತ್ತದೆ. ಎಲ್ಲರೂ ಬನ್ನಿ ಟಿಕೆಟ್ ದರ ಒಂದು ಬಿಜಲಿಪಟಾಕಿ ಪ್ಯಾಕೆಟ್ ಗೂ ಕಮ್ಮಿ.

ದಸರೆ ನಂತರ ನಗರದಲ್ಲಿ ನಾಟಕಗಳ ಹಬ್ಬ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಚಂದ್ರು
ರಾಜಕೀಯ ದೊಂಬರಾಟದ ದೊರೆ 'ಮುಖ್ಯಮಂತ್ರಿ'
ರಂಗರೂಪದಿ ಕುಂಚರಾಜನ ವ್ಯಥೆಭರಿತ ಕಥೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+