ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ನ ಮೆರಾಜುದ್ದೀನ್ ಪಟೇಲ್ ಇನ್ನಿಲ್ಲ

By Staff
|
Google Oneindia Kannada News

Merajuddin patelಕಲ್ಬುರ್ಗಿ, ಅ. 8 : ತೀವ್ರ ಹೃದಯಾಘಾತಕ್ಕೀಡಾಗಿ ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಎನ್. ಪಟೇಲ್ (52) ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಕಲ್ಬುರ್ಗಿ ಜಿಲ್ಲಾ ಜೆಡಿಎಸ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಅವರು ಕಾರ್ಯಕ್ರಮ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಎದೆ ನೋವು ಕಾಣಸಿಕೊಂಡಿತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು. ಮೆರಾಜುದ್ದೀನ್ ಅವರು ಪತ್ನಿ ನಸೀಮಾ ಬೇಗಮ್, ಏಳು ಜನ ಪುತ್ರಿಯರು, ಅಪಾರ ಬಂಧು ಬಳಗ ಹಾಗೂ ಅಸಂಖ್ಯೆ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ಅದೃಷ್ಟದ ರಾಜಕಾರಣಿ ಎಂದೇ ಜನಜನಿತವಾಗಿದ್ದ ಮೆರಾಜುದ್ದೀನ್ ಅಪರೂಪದ ರಾಜಕಾರಣಿಯೂ ಹೌದು. ಎಲ್ಲ ಸಮಾಜ ಸಮುದಾಯ ಮತ್ತು ರಾಜಕೀಯ ಪಕ್ಷಗಳ ಮುಂಖಡರ ಜತೆ ಉತ್ತಮ ಸಂಬಂಧವಿಟ್ಟುಕೊಂಡಿದ್ದಲ್ಲದೆ, ಸೌಮ್ಯ ಸ್ವಭಾವದ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದರು. ಮೆರಾಜುದ್ದೀನ್ ನಿಧನದಿಂದ ಜೆಡಿಎಸ್ ಬಡವಾಗಿದೆ. ಈ ಮೂಲಕ ರಾಜ್ಯ ಅಪರೂಪ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ.

ಪಂಚಾಯತಿ ರಾಜಕಾರಣಿದಿಂದ ರಾಜಕೀಯ ಆರಂಭಿಸಿದ ಮೆರಾಜುದ್ದೀನ್ ಹಂತಹಂತವಾಗಿ ಬೆಳೆಯುತ್ತಾ ಹೋದರು. ಅದೃಷ್ಟದ ರಾಜಕಾರಣಿಯಾಗಿದ್ದ ಇವರಿಗೆ ಬಯಸಿದೆ ಅನೇಕ ಹುದ್ದೆಗಳು ಲಭಿಸಿದ್ದವು. ಮುಖ್ಯವಾಗಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ಸಚಿವ ಸ್ಥಾನ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಗಳು ಪ್ರಮುಖವಾದ ಹುದ್ದೆಗಳು ಎಂದೇ ಹೇಳಬಹುದು.

ಎಚ್.ಡಿ.ದೇವೇಗೌಡರ ಕಟ್ಟಾ ಶಿಷ್ಯ ಎಂದೇ ಬಿಂಬತರಾಗಿದ್ದ ಮೆರಾಜುದ್ದೀನ್, ಜನತಾ ಪರಿಹಾರ ಅನೇಕ ಬಾರಿ ಒಡೆದರೂ ದೇವೇಗೌಡರ ದಳವನ್ನು ಬಿಟ್ಟು ಕದಲಲಿಲ್ಲ ಎನ್ನುವುದು ಇವರ ಹೆಗ್ಗಳಿಕೆ. ಎರಡೂವರೆ ದಶಕಗಳ ರಾಜಕೀಯ ಜೀವನದಲ್ಲಿ ಎಂದು ಹೆಸರು ಕೆಡಿಸಿಕೊಳ್ಳದೆ, ಸಭ್ಯ ರಾಜಕಾರಣದ ಮೂಲಕ ಸಭ್ಯತೆಯನ್ನು ಮೆರೆದಿದ್ದರು. ದೇವೇಗೌಡರ ವಿರೋಧಿ ಅಲೆಯ ಹಿನ್ನೆಲೆಯಲ್ಲಿ ಮೆರಾಜುದ್ದೀನ್ ಕಳೆದ ವಿಧಾನಸಭೆ ಚುನಾವಣೆ ಸೋಲನುಭವಿಸಿದ್ದರು. ಮೆರಾಜುದ್ದೀನ್ ನಿಧನದಿಂದ ರಾಜ್ಯ ರಾಜಕಾರಣ ಸಭ್ಯ ಜನನಾಯಕನನ್ನು ಕಳೆದುಕೊಂಡಂತಾಗಿದೆ. ಮೆರಾಜುದ್ದೀನ್ ಪಟೇಲ್ ನಿಧನಕ್ಕೆ ದೇವೇಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅನೇಕ ಗಣ್ಯ ಕಂಪನಿ ಮಿಡಿದಿದ್ದಾರೆ.

ಇಂದು ಅಂತ್ಯಕ್ರಿಯೆ : ಮೆರಾಜುದ್ದೀನ್ ಸ್ವಗ್ರಾಮ ಹುಮನಾಬಾದ್ ತಾಲ್ಲೂಕು ಹೊಚಕನಳ್ಳಿ ಇಂದು ಅಂತ್ಯಕ್ರಿಯೆ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X