ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದ್ದಿ ತುಣುಕು: ಮಾಸ್ತಿ ನೆನಪಲ್ಲಿ ಕಾದಂಬರಿ ಸ್ಪರ್ಧೆ

By Staff
|
Google Oneindia Kannada News

ಮಾಸ್ತಿ ನೆನಪಲ್ಲಿ ಕಾದಂಬರಿ ಸ್ಪರ್ಧೆ
ಬೆಂಗಳೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ ಟ್ರಸ್ಟ್ ಮತ್ತು ಮಾಸ್ತಿ ಪ್ರಶಸ್ತಿ ಸಮಿತಿಗಳು 'ಮಾಸ್ತಿ ಕಾದಂಬರಿ ಪುರಸ್ಕಾರ' ಸ್ಪರ್ಧೆಯನ್ನು ಏರ್ಪಡಿಸಿವೆ. ಕನ್ನಡ ಕಾದಂಬರಿಕಾರರ ಸ್ವಂತ ರಚನೆಗಳಿಗೆ ಮಾತ್ರ ಅವಕಾಶ. ಹಸ್ತ ಪ್ರತಿ ಡಿಟಿಪಿ ಅಥವಾ ಬೆರಳಚ್ಚು ಮಾಡಿದ್ದು ಸ್ಪಷ್ಟವಾಗಿ ಓದುವಂತಿರಬೇಕು. ಜೆರಾಕ್ಸ್ , ಕಾರ್ಬನ್ ಪ್ರತಿಗಳನ್ನು ಸ್ವೀಕರಿಸುವುದಿಲ್ಲ.

350 ರಿಂದ 400 ಪುಟಗಳವರೆಗೆ ಬರೆಯಬಹುದು. ಕೃತಿಗಳನ್ನು ಕಳಿಸಲು ಕೊನೆಯ ದಿನಾಂಕ ಡಿ.31.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಅಧ್ಯಕ್ಷರು, ಮಾಸ್ತಿ ಟ್ರಸ್ಟ್, ಮಾಸ್ತಿ ಪ್ರಶಸ್ತಿ ಸಮಿತಿ
ಕಾದಂಬರಿ ಸ್ಪರ್ಧೆ -2008
ನಂ. 21, ಎಲ್ಲಪ್ಪ ಗಾರ್ಡನ್, 10 ನೇ ಅಡ್ಡರಸ್ತೆ
ಮಲ್ಲೇಶ್ವರ
ಬೆಂಗಳೂರು-
ಸಂಪರ್ಕವಾಣಿ: (080)2336 3347


ಸ್ವಾತಂತ್ರ್ಯ ಸೇನಾನಿ ಬಸಪ್ಪ ನಿಂಗಪ್ಪ ವಿಧಿವಶ
ಬಿಜಾಪುರ: ಸ್ವಾತಂತ್ರ್ಯ ಹೋರಾಟಗಾರ ಬಸಪ್ಪ ನಿಂಗಪ್ಪ ಶಿರೂರು(98) ಗುರುವಾರ ರಾತ್ರಿ ನಿಧನರಾಗಿದ್ದಾರೆ. ಇವರು ವಿನೋಬಾ ಭಾವೆ ಅವರಿಂದ ಪ್ರೇರಿತರಾಗಿ ಭೂದಾನ ಚಳುವಳಿಯಲ್ಲಿ ಪಾಲ್ಗೊಂಡು, ತಮ್ಮ 18 ಎಕರೆ ಜಮೀನು ದಾನ ಮಾಡಿದ್ದರು.
1941 ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂಡಲಗಾ ಜೈಲಿನಲ್ಲಿ ಆರು ತಿಂಗಳು ಸೆರೆವಾಸ ಅನುಭವಿಸಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದ ತಾಮ್ರ ಪತ್ರ ಪ್ರಶಸ್ತಿ ಪಡೆದಿದ್ದರು. ಮೃತರಿಗೆ2002 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು.

ನಗರದ ಇಬ್ಬರು ವಿಜ್ಞಾನಿಗಳಿಗೆ ಭಟ್ನಾಗರ್ ಪ್ರಶಸ್ತಿ
ಬೆಂಗಳೂರು: ನಗರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿ ಪಿ.ಎನ್. ಚಂದ್ರನ್ ಹಾಗೂ ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಡ್ ಸೈಂಟಿಫಿಕ್ ರಿಸರ್ಚ್ ನ ವಿಜ್ಞಾನಿ ಶ್ರೀಕಾಂತ್ ಶಾಸ್ತ್ರಿ ಸೇರಿದಂತೆ 10 ಜನ ವಿಜ್ಞಾನಿಗಳು 2008 ನೇ ಸಾಲಿನ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅರ್ಥ್ ಅಟ್ಮಾಸ್ಪಿಯರಿಕ್ ಓಷನ್ ಹಾಗೂ ಪ್ಲಾನೆಟರಿ ಸೈನ್ ವಿಭಾಗದಲ್ಲಿ ವಿನಯಚಂದ್ರನ್ ಅವರಿಗೆ ಪ್ರಶಸ್ತಿ ದೊರೆತರೆ, ಭೌತ ವಿಜ್ಞಾನ ವಿಭಾಗದಲ್ಲಿ ಶ್ರೀಕಾಂತ ಶಾಸ್ತ್ರಿ ಅವರಿಗೆ ಪ್ರಶಸ್ತಿ ಬಂದಿದೆ. ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ 5 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X