ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಶ್ರೀಶ್ರೀಗಳಿಂದ ಇನ್ನೊಂದು ಮಠ ಸ್ವಾಹಾ

By Staff
|
Google Oneindia Kannada News

ಕಾಸರಗೋಡು, ಸೆ. 11 : ಗೋಕರ್ಣದ ಮಹಾಬಲೇಶ್ವರ ಮಠ ಹಾಗೂ ಚಿಕ್ಕಮಗಳೂರಿನ ಅಜ್ಜಂಪುರದ ಅಮೃತ್ ಮಹಲ್ ಗೋಸಂರಕ್ಷಣಾ ಕೇಂದ್ರ ವಶಪಡಿಸಿಕೊಂಡ ಬೆನ್ನಲ್ಲೇ, ಕಾಸರಗೋಡಿನ ಹತ್ತಿರವಿರುವ ಕುಂಟಿಕಾನ ಶಂಕರ ನಾರಾಯಣ ಮಠವನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಗಳು ವಶಪಡಿಸಿಕೊಂಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಕುಂಟಕಾನ ಮಠದ ಟ್ರಸ್ಟಿಗಳು ರಾಮಚಂದ್ರಾಪುರ ಮಠದ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸಿದ್ದತೆ ನಡೆಸಿದ್ದಾರೆ.

ಸೆ. 5 ರ ಮಧ್ಯಾಹ್ನ ರಾಮಚಂದ್ರಾಪುರ ಮಠದ ಅನುಯಾಯಿಗಳು ಎಂದು ಹೇಳಿಕೊಂಡಿರುವ 100 ಅಧಿಕ ಜನ ಕುಂಟಿಕಾನ ಶಂಕರ ನಾರಾಯಣ ಮಠಕ್ಕೆ ನುಗ್ಗಿ ಅಲ್ಲಿಯ ಜನರನ್ನು ಬೆದರಿಸಿ ಮಠವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಬಲವಂತವಾಗಿ ದೇವಾಲಯದ ಬೀಗ ಮುರಿದಿರುವ ರಾಮಚಂದ್ರಾಪುರ ಮಠದ ಶಿಷ್ಯರು ದಬ್ಬಾಳಿಕೆಯ ಮೇಲೆ ಮಠವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸುಮಾರು 400 ವರ್ಷಗಳಿಂದ ಮಠ ಸಮಸ್ತ ಜವಾಬ್ದಾರಿಯನ್ನು ಟ್ರಸ್ಟಿಗಳು ನೋಡಿಕೊಳ್ಳುತ್ತಿದ್ದು, ದಾಖಲೆಗಳು ಸಹ ನಮ್ಮ ಪರವಾಗಿಯೇ ಇವೆ. ಇಷ್ಟಾದರೂ ಕೂಡಾ ರಾಮಚಂದ್ರಾಪುರ ಮಠದ ಶಿಷ್ಯರು ಬಲವಂತವಾಗಿ ಮಠದ ಬೀಗವನ್ನು ಮುರಿದು ತಮ್ಮ ಬೀಗವನ್ನು ಹಾಕಿದ್ದಾರೆ. ರಾಮಚಂದ್ರಾಪುರ ಮಠದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದೆ. ರಾಮಚಂದ್ರಾಪುರ ಮಠದ ಶಾಖಾ ಮಠದ ಎಂದು ಹೇಳಿಕೊಂಡು ಅವರ ನಡೆಸಿರುವ ದಬ್ಬಾಳಿಕೆ ಖಂಡನೀಯ ಎಂದು ಮಠದ ಟ್ರಸ್ಟಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಕೂಡ ಕೇರಳ ಸರ್ಕಾರದಿಂದ ಅಧಿಕೃತವಾಗಿ ಉರ್ಜಿತಗೊಂಡಿದೆ. ಆದರೂ ಕೂಡ ಮಠದ ಆಸ್ತಿ ಕಬಳಿಸಲು ಶಂಕರನಾರಾಯಣ ಮಠ 11 ಶಾಖೆ ಎಂದು ವಶಕ್ಕೆ ಮುಂದಾಗಿರುವುದು ಸರಿಯಲ್ಲ ಎನ್ನುವ ಮಾತು ಕೇಳಿಬರತೊಡಗಿದೆ.

ರಾಮಚಂದ್ರಾಪುರ ಮಠದ ಸ್ವಾಮಿಗಳಿಗೆ ಶಂಕರನಾರಾಯಣ ಮಠದಲ್ಲಿ ವಾಸ್ತವ್ಯಕ್ಕೆ ಹಾಗೂ ಪೂಜೆ ಅವಕಾಶ ಮಾಡಿಕೊಟ್ಟಿರುವುದೇನೂ ನಿಜ. ಅಂದ ಮಾತ್ರಕ್ಕೆ ಮಠ ತಮ್ಮದು ಎನ್ನುವುದು ಯಾವ ನ್ಯಾಯ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಗುರು ಮತ್ತು ಶಿಷ್ಯರೊಳಗೆ ಜಿದ್ದಾಜಿದ್ದಾ ಆರಂಭವಾದಂತಾಗಿದೆ.

ರಾಮಚಂದ್ರಾಪುರ ಮಠದ ಸ್ವಾಮಿಗಳು ಮಾಡುತ್ತಿರುವುದು ಸರಿಯಲ್ಲ. ಸೆ. 5 ರಿಂದ ಮಠದ ಒಳಗೆ ಹೋಗಲು ನಮಗೆ ಅವಕಾಶವಿಲ್ಲ. ರಾಮಚಂದ್ರಾಪುರ ಮಠದ ಶಿಷ್ಯರು ವರ್ತನೆ ಕೀಳು ಮಟ್ಟದ್ದಾಗಿದೆ. ಮಠ ವಶಪಡಿಸಿಕೊಂಡಿರುವ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗುವುದಾಗಿ ಟ್ರಸ್ಟಿನ ಗೌರವಾಧ್ಯಕ್ಷ ಶಂಕರ ಭಟ್, ಗೋವಿಂದ ಭಟ್, ಬಾಲಕೃಷ್ಣ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ರಾಮಚಂದ್ರಾಪುರ ಮಠದ ಸ್ವಾಮಿಗಳು ಮತ್ತೊಂದು ಮಠಕ್ಕೆ ಕಣ್ಣು ಹಾಕಿರುವುದು ಎಲ್ಲರ ಕಣ್ಣು ಕೆಂಪೇರುವಂತೆ ಮಾಡಿದೆ.

ಸರ್ಕಾರ ಸ್ಪಷ್ಟನೆ

ಚಿಕ್ಕಮಗಳೂರಿನ ಅಜ್ಜಂಪುರದಲ್ಲಿರುವ ಅಮೃತ ಮಹಲ್ ಗೋಸಂರಕ್ಷಣೆ ಕೇಂದ್ರವನ್ನು ರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ಸ್ಪಷ್ಟಪಡಿಸಿದ್ದಾರೆ. ರಾಮಚಂದ್ರಾಪುರ ಮಠದ ಸುಪರ್ದಿಗೆ ಗೋಸಂರಕ್ಷಣಾ ಕೇಂದ್ರವನ್ನು ನೀಡಲು ಸರ್ಕಾರವೇ ಮುಂದಾಗಿತ್ತು. ರಾಮಚಂದ್ರಾಪುರಮಠದ ಸ್ವಾಮಿಗಳು ಬೇಡಿಕೆಯನ್ನು ಮುಂದಿಟ್ಟಿಲ್ಲ ಎಂದು ಅವರು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಕುಂಟಿಕಾನಮಠ ದೇಗುಲದಲ್ಲಿ ಬ್ರಹ್ಮಕಲಶೋತ್ಸವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X