ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಲೈವ್ ಬ್ಯಾಂಡ್ ಮತ್ತೆ ಆರಂಭದ ಸೂಚನೆ?

By Staff
|
Google Oneindia Kannada News

ಬೆಂಗಳೂರು, ಸೆ. 5 : ನಗರದಲ್ಲಿ ಲೈವ್ ಬ್ಯಾಂಡ್ ಗಳನ್ನು ಆರಂಭಿಸುವ ಕುರಿತಂತೆ ಪರವಾನಿಗೆ ತಡೆಹಿಡಿದಿರುವ ಕ್ರಮವನ್ನು ಪುನರ್ ಪರಿಶೀಲನೆ ನಡೆಸಲು ಹೈಕೋರ್ಟ್ ಪೊಲೀಸ್ ಇಲಾಖೆಗೆ ಎಂಟು ವಾರಗಳ ಗಡುವು ನೀಡಿದೆ.

ರಾಜ್ಯದಲ್ಲಿ ಲೈವ್ ಬ್ಯಾಂಡ್ ಅನುಮತಿ ನಿರಾಕರಿಸಿರುವ ಪೊಲೀಸ್ ಇಲಾಖೆ ಕ್ರಮವನ್ನು ಪ್ರಶ್ನಿಸಿ ನಗರದ ಪಲ್ಲವಿ ಚಿತ್ರಮಂದಿರದ ಸಂಕೀರ್ಣದಲ್ಲಿರುವ ಕೇವ್ ಕೇಟರರ್ಸ್ ಹಾಗೂ ಲಾಲ್ ಬಾಗ್ ರಸ್ತೆಯ ಫೋರ್ ಫ್ರೆಂಡ್ಸ್ ಎಂಟರ್ ಪ್ರೈಸಸ್ ಮತ್ತಿತರರು ಲೈವ್ ಬ್ಯಾಂಡ್ ಮಾಲೀಕರು ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕೆ.ಪಾಟೀಲ್, ಅರ್ಜಿ ಇತ್ಯರ್ಥವಾಗುವ ಸಂದರ್ಭದಲ್ಲಿ ಅರ್ಜಿದಾರನ ವಾದವನ್ನೂ ಆಲಿಸಿ ನಿರ್ಣಯ ತಗೆದುಕೊಳ್ಳಬೇಕು ಎಂದು ಸೂಚನೆ ನೀಡಿದೆ. ಆದ್ದರಿಂದ ಲೈವ್ ಬ್ಯಾಂಡ್ ನಡೆಸುವುದಕ್ಕೆ ಅನುಮತಿ ನಿರಾಕರಿಸುತ್ತಿರುವುದನ್ನು ಪೊಲೀಸ್ ಇಲಾಖೆ ಪುನರ್ ಪರಿಶೀಲನೆ ನಡೆಸಬೇಕು. ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಎಂಟು ವಾರದೊಳಗೆ ಸಮಗ್ರವಾಗಿ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲು ನ್ಯಾಯಾಲಯ ಎಂಟು ವಾರಗಳ ಗಡುವು ನೀಡಿದೆ.

ಬೆಂಗಳೂರು ಲೈವ್ ಬ್ಯಾಂಡ್ ಮಾಲೀಕರ ಸಂಘ ಲೈವ್ ಬ್ಯಾಂಡ್ ನಡೆಸಲಿಕ್ಕೆ ಅನುಮತಿ ನೀಡಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಆದರೆ ಆಯುಕ್ತರು ಪೊಲೀಸ್ ಇಲಾಖೆ ಎಂಟು ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಅನುಮತಿ ನೀಡಲಾಗುವುದು ಆಯುಕ್ತ ಶಂಕರ ಬಿದರಿ ತಿಳಿಸಿದ್ದರು. ಮುಖ್ಯವಾಗಿ ವಾಹನ ನಿಲುಗಡೆಗೆ ಸ್ಥಳವಿಲ್ಲ, ಸಾಕಷ್ಟು ಕಿಟಕಿಗಳಿಲ್ಲ. ಜನವಸತಿ ಪ್ರದೇಶ, ದೇವಸ್ಥಾನ ಹಾಗೂ ಗುಡಿಗೋಪುರಗಳಿವೆ ಎಂದೆಲ್ಲಾ ನೆಪವೂಡ್ಡಿ ಲೈವ್ ಬ್ಯಾಂಡ್ ನಡೆಸಲು ಪರವಾನಿಗೆ ಕೋರಿದ್ದ ಅರ್ಜಿಗಳನ್ನು ಆಯುಕ್ತರು ತಿರಸ್ಕರಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಿಂಗಳಲ್ಲಿ ಲೈವ್‌ಬ್ಯಾಂಡ್ ಸಮಸ್ಯೆ ಪರಿಹರಿಸಿ: ಕೋರ್ಟ್
ಲೈವ್ ಬ್ಯಾಂಡ್ ಗೆ ಅನುಮತಿ ಕೊಡಬೇಕೆಂದು ಮನವಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X