ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನೀಫ್ ನಿರಪರಾಧಿ: ಆಸ್ಟ್ರೇಲಿಯಾ ಫೆಡರಲ್ ಪೊಲೀಸ್

By Staff
|
Google Oneindia Kannada News

ಮೆಲ್ಬೊರ್ನ್, ಆ. 30 : ಕಳೆದ ವರ್ಷ ನಡೆದಿದ್ದ ಲಂಡನ್ ವಿಮಾನ ನಿಲ್ದಾಣ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಸ್ಬೇನ್ ವಿಮಾನ ನಿಲ್ದಾಣ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರು ಮೂಲದ ಭಾರತೀಯ ವೈದ್ಯ ಹನೀಫ್ ಮಹಮದ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಂತ್ಯಗೊಳಿಸಲು ಆಸ್ಟ್ರೇಲಿಯಾದ ಫೆಡರಲ್ ಪೊಲೀಸ್ ನಿರ್ಧರಿಸಿದೆ.

ಹನೀಫ್ ಮಹಮದ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇದೆ. ಈ ಕುರಿತು ತೀವ್ರ ವಿಚಾರಣೆ ನಡೆಸಲಾಗಿದ್ದು, ಉಗ್ರರ ಸಂಘಟನೆಯೂಂದಿಗೆ ಸಂಪರ್ಕ ಹೊಂದಿರುವ ಯಾವ ಸಾಕ್ಷಿಗಳು ನಮಗೆ ಲಭ್ಯವಾಗಿಲ್ಲ. ಇದರಿಂದ ಪ್ರಕರಣವನ್ನು ಹೆಚ್ಚು ದಿನ ಮುಂದುವರೆಸಲು ಸಾಧ್ಯವಿಲ್ಲ ಎಂದು ಆಸ್ಟೇಲಿಯಾ ಫೆಡರಲ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಹನೀಫ್ ಪರ ವಕೀಲ ರಾಡ್ ಹಾಡ್ಜಸನ್ ಮಾತನಾಡಿ, ಭಾರತೀಯ ಮೂಲದ ವೈದ್ಯ ಹನೀಫ್ ಮಹಮದ್ ನಿರಪರಾಧಿ, ಕೇವಲ ಸಂಶಯದ ಮೂಲಕ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆತನ ವಿರುದ್ಧ ಅಪರಾಧಿ ಪ್ರಕರಣಗಳಾಗಲಿ, ಅಪರಾಧಿ ಎಸಗುವವರ ಜೊತೆಗೆ ಸಂಪರ್ಕವಾಗಲಿ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಹನೀಫ್ ಅವರ ಮೇಲಿರುವ ಎಲ್ಲ ಮೊಕದ್ದಮೆಗಳನ್ನು ವಾಪಸ್ಸು ಪಡೆದು ನಿರಪರಾಧಿ ಎಂದು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು.

ಫೆಡರಲ್ ಪೊಲೀಸರು ತಳೆದಿರುವ ನಿರ್ಧಾರವನ್ನು ಬೆಂಗಳೂರಿನಲ್ಲಿರುವ ಹನೀಫ್ ಅವರಿಗೆ ಅವರ ರಾಜ್ ಹಾಡ್ಜಸನ್ ಅವರು ಫೋನ್ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದ್ದು, ಹನೀಫ್ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಿರಪರಾಧಿಗೆ ದೊರೆಕಿರುವ ಜಯ ಎಂದು ಪ್ರಕ್ರಿಯಿಸಿದ್ದಾರೆ. ಕಳೆದ ವರ್ಷ ಲಂಡನ್ ವಿಮಾನ ನಿಲ್ದಾಣದೊಳಗೆ ಕಾರ್ ಬಾಂಬ್ ಸ್ಫೋಟಿಸುವ ವಿಫಲ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೀಫ್ ಅವರನ್ನು ಬಂಧಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ಆಸ್ಟ್ರೇಲಿಯಾ ಫೆಡರಲ್ ಪೊಲೀಸರ ವಿರುದ್ಧ ಹನೀಫ್‌ಗೆ ಜಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X