ಒರಿಸ್ಸಾ ಹತ್ಯಾಕಾಂಡ ಖಂಡಿಸಿ ಎಲ್ಲೆಡೆ ಪ್ರತಿಭಟನೆ

ಕಂಧಮಾಲ್, ಆ. 29 : ವಿಎಚ್ ಪಿ ಮುಖಂಡ ಲಕ್ಷ್ಮಣಾನಂದ ಸರಸ್ವತಿ ಸ್ವಾಮಿ ಅವರನ್ನು ಹತ್ಯೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆದಿರುವ ಕ್ರಿಶ್ಚಿಯನ್ ರ ನರಮೇಧ ಖಂಡಿಸಿ ದೇಶದಾದ್ಯಂತ ಇಂದು ಕ್ರಿಶ್ಚಿಯನ್ ಮುಖಂಡರು ತಮ್ಮ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಭುವನೇಶ್ವರ್ ದ ಒರಿಸ್ಸಾ ಭವನದ ಮುಂದೆ ಇಂದು ಸಂಜೆ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ.

ಕಳೆದ ಒಂದು ವಾರದಿಂದ ರಾಜ್ಯದಲ್ಲಿರುವ ಕ್ರಿಶ್ಚಿಯನ್ ರು ಭಯ ನೆರಳಿನಲ್ಲಿ ಜೀವನ ನಡೆಸುತ್ತಿದ್ದಾರೆ. ಬಾರ್ ಗಢದಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರನ್ನು ಜೀವಂತ ದಹನ ಮಾಡಲಾಯಿತು. ಕಂಧಮಾಲ್, ಸುಂದರ್ ಗಢ, ಕೋರಾಪುಟ್, ಬೋಧ, ಬಾರ್ ಗಢ್ ಪ್ರದೇಶದಲ್ಲಿ ಹಿಂಸಾಚಾರ ಮುಂದುವರೆದಿದೆ. ಅಮಾಯಕ ಕ್ರಿಶ್ಚಿಯನ್ ರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಈ ಕೃತ್ಯವನ್ನು ಖಂಡಿಸಿ ಇಂದು ದೇಶಾದ್ಯಂತ ಕ್ರಿಶ್ಚಿಯನ್ ಸಂಘ ಸಂಸ್ಥೆಗಳನ್ನು ಬಂದ್ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಕ್ರಿಶ್ಚಿಯನ್ ಮುಖಂಡರು ತಿಳಿಸಿದ್ದಾರೆ. ಒರಿಸ್ಸಾದಲ್ಲಿ ನಡೆಯಲಿರುವ ಎಲ್ಲ ಘಟನೆಗಳನ್ನು ಹೊಂದಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಲಾಗುವುದು ಅವರು ತಿಳಿಸಿದ್ದಾರೆ.

ಕಳೆದ ಶನಿವಾರ ವಿಶ್ವ ಹಿಂದು ಪರಿಷತ್ ಮುಖಂಡ ಲಕ್ಷ್ಮಣಾನಂದ ಸರಸ್ವತಿ ಸ್ವಾಮಿ ಹಾಗೂ ಅವರ ನಾಲ್ವರು ಅನುಯಾಯಿಗಳನ್ನು 30 ಜನರ ತಂಡವೊಂದು ಅವರ ಆಶ್ರಮಕ್ಕೆ ತೆರಳಿ ಬೀಕರವಾಗಿ ಹತ್ಯೆ ಮಾಡಿತ್ತು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಹಿಂದುಪರ ಸಂಘಟನೆಗಳು ಉಗ್ರ ಪ್ರತಿಭಟನೆ ಇಳಿದಿದ್ದಾರೆ. ಕ್ರಿಶ್ಚಿಯನ್ ಸಂಸ್ಥೆಗಳು, ಚರ್ಚೆಗಳ ಮೇಲೆ ಅನೇಕ ದಾಳಿಗಳು ನಡೆದಿದ್ದು, ಹಿಂಸಾಚಾರಕ್ಕೆ ಇಲ್ಲಿಯವರೆಗೂ ಹತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಒರಿಸ್ಸಾ: ಹಿಂದು-ಕ್ರೈಸ್ತರ ಗಲಭೆ, ನಿಷೇಧಾಜ್ಞೆ, 10 ಸಾವು
ಒರಿಸ್ಸಾ ಗಲಭೆ ವಿರೋಧಿಸಿ ಎಂಜಿ ರಸ್ತೆಯಲ್ಲಿ ಪ್ರತಿಭಟನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+