ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ವೀಸಾ ಕ್ಯಾಂಪಸ್ ಕಾರ್ಡ್

By Staff
|
Google Oneindia Kannada News

ಬೆಂಗಳೂರು, ಆ.27: ಕ್ಯಾಂಪಸ್‌ನಲ್ಲಿ ಹಣಕಾಸು ವ್ಯವಹಾರ ಸುಲಭವಾಗುವಂತೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಯಾಂಪಸ್ ಎಂಬ ಸೇವೆಯನ್ನು ಕಾರ್ಪೊರೇಷನ್ ಬ್ಯಾಂಕ್ ಬುಧವಾರCorporation bank launches smart campus Card ಆರಂಭಿಸಿತು.

ಐಡೆನಿಜನ್ ಸಾಫ್ಟ್‌ವೇರ್ ಪ್ರೈವೆಟ್ ಲಿಮಿಟಿಡ್ ಎಂಬ ಸಂಸ್ಥೆ ಇದೇ ಮೊದಲ ಬಾರಿಗೆ ಕಾರ್ಪೊರೇಶನ್ ಬ್ಯಾಂಕ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು. ವಿದ್ಯಾರ್ಥಿಗಳು ಬ್ಯಾಂಕ್ ವ್ಯವಹಾರದಲ್ಲಿ ತೊಡಗಲು, ಆಡಳಿತ ಮಂಡಳಿ, ಶಿಕ್ಷಕ ವರ್ಗ ಮತ್ತು ಹೆತ್ತವರ ನಡುವೆ ವೀಸಾ ಡೆಬಿಟ್ ಕಾರ್ಡ್ ವ್ಯವಹಾರವನ್ನು ನಡೆಸಲು ಅನುಕೂಲವಾಗಲಿದೆ.

ಸ್ಮಾರ್ಟ್ ಕ್ಯಾಂಪಸ್‌ನಿಂದ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕ, ಗ್ರಂಥಾಲಯದ ಮತ್ತಿತರ ಶುಲ್ಕಗಳನ್ನು ಪಾವತಿಸಲು ಹಾಗೂ ಕ್ಯಾಂಪಸ್ ಚಟುವಟಿಕೆಗಳಿಗಾಗಿ ಕಾರ್ಡನ್ನು ಬಳಸಿಕೊಳ್ಳಬಹುದು. ಈಗಾಗಲೇ 60,000ವಿದ್ಯಾರ್ಥಿಗಳು ತಮ್ಮ ಕಾಲೇಜು ಸಂಬಂಧಿ ವ್ಯವಹಾರಗಳಿಗಾಗಿ ಸ್ಮಾರ್ಟ್ ಕಾರ್ಡ್ ಅನ್ನು ಬಳಸುತ್ತಿದ್ದು, ಐಡೆನಿಜನ್ ಮತ್ತು ಕಾರ್ಪೊರೇಶನ್ ಬ್ಯಾಂಕಿನ ಈ ಒಪ್ಪಂದ ಹೊಸ ಸೌಲಭ್ಯದಿಂದಾಗಿ ಸ್ಮಾರ್ಟ್ ಕಾರ್ಡ್ ಬಳಕೆದಾರರ ಸಂಖ್ಯೆಯನ್ನು ದುಪ್ಪಟ್ಟಾಗಲಿದೆ.

ಈ ಕಾರ್ಡ್ ಉಳ್ಳವರು ತಮ್ಮ ವ್ಯವಹಾರವನ್ನು ದೇಶಾದ್ಯಂತ ಇರುವ ಕಾರ್ಪೊರೇಶನ್ ಬ್ಯಾಂಕಿನ 1,000ಕ್ಕೂ ಅಧಿಕ ಶಾಖೆ, ಎಟಿಎಂ ಮತ್ತು ಅಂತರ್ಜಾಲದ ಮೂಲಕ ಮಾಡಲು ಸಹಕಾರಿಯಾಗಲಿದೆ. ಸ್ಮಾರ್ಟ್ ಕ್ಯಾಂಪಸ್‌ನ ವೀಸಾ ಕಾರ್ಡ್ ಉಳ್ಳವರು 25,000ಕ್ಕೂ ಅಧಿಕ ಎಟಿಎಂ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸಬಹುದಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X