ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣು ಒಪ್ಪಂದ : ಎನ್ಎಸ್ ಜಿ ಅಂಗಳದಲ್ಲಿ ಚೆಂಡು

By Staff
|
Google Oneindia Kannada News

ನವದೆಹಲಿ, ಆ. 20 : ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದವು ಕಳೆದ ತಿಂಗಳ ನಡೆದ ಐಎಇಎ ಸಭೆಯಲ್ಲಿ ಒಪ್ಪಿಗೆ ಪಡೆದ ನಂತರ ಇದೀಗ ಚೆಂಡು ಪರಮಾಣು ಸರಬರಾಜು ರಾಷ್ಟ್ರಗಳ(ಎನ್ಎಸ್ ಜಿ) ಅಂಗಳಕ್ಕೆ ಬಂದು ಬಿದ್ದಿದೆ. 45 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಎನ್ಎಸ್ ಜಿ ಸಭೆ ಗುರುವಾರ (ಆ.21) ನಡೆಯಲಿದ್ದು. ಭಾರತ ಮತ್ತು ಅಮೆರಿಕ ದೇಶದ ಮುಖಂಡರು ಒಪ್ಪಂದಕ್ಕೆ ಹಸಿರು ನಿಶಾನೆ ಪಡೆಯುವ ಸಲುವಾಗಿ ಭಾರಿ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಐರ್ ಲ್ಯಾಂಡ್, ಫ್ರಾನ್ಸ್, ನ್ಯೂಜಿಲ್ಯಾಂಡ್ ದೇಶಗಳು ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸತೊಡಗಿವೆ ಎನ್ನಲಾಗಿದೆ.

ಎನ್ ಪಿಟಿ ಗೆ ಸಹಿ ಹಾಕುವುದಕ್ಕೂ ಮುಂಚೆ ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಹಮತ ಸೂಚಿಸಲು ಎನ್ಎಸ್ ಜಿ ಸದಸ್ಯ ರಾಷ್ಟ್ರಗಳು ಹಿಂದೇಟು ಹಾಕತೊಡಗಿವೆ ಎಂದು ತಿಳಿದು ಬಂದಿದೆ. ಹಾಗೆಯೇ ಪರಮಾಣು ರಾಷ್ಟ್ರವಾದ ನಂತರ ಐಎಇಎ, ಎನ್ಎಸ್ ಜಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ವಿದ್ಯುತ್ ಉತ್ಪಾದನೆ ಜನೋಪಯೋಗಿ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳಬೇಕು. ಅಣ್ವಸ್ತ್ರ ತಯಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಪ್ರತಿ ವರ್ಷ ಒಪ್ಪಂದ ಕುರಿತಾದ ಸಮಗ್ರ ಮಾಹಿತಿಯನ್ನು ಸಂಬಂಧಿಸಿದ ಸಂಸ್ಥೆಗಳಿಗೆ ನೀಡುತ್ತೇವೆ ಎಂಬ ಒಪ್ಪಿಗೆಯನ್ನು ಭಾರತದಿಂದ ಪಡೆದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎಂದು ಎನ್ಎಸ್ ಜಿ ಸದಸ್ಯ ರಾಷ್ಟ್ರಗಳು ಅಭಿಪ್ರಾಯ ಪಟ್ಟಿವೆ.

ಈ ಎಲ್ಲ ಸಮಸ್ಯೆಗಳ ಜತೆಗೆ ಗುರುವಾರ ಎನ್ಎಸ್ ಜಿ ಸದಸ್ಯ ರಾಷ್ಟ್ರಗಳ ಮುಂದೆ ಭಾರತ ತನ್ನ ಬೇಡಿಕೆ ಪ್ರಸ್ತಾಪಿಸಲಿದೆ. ಭಾರತ ಮತ್ತು ಅಮೆರಿಕ ಪರಮಾಣು ಒಪ್ಪಂದ ಕುರಿತು ವಿಯನ್ನಾದಲ್ಲಿ ನಡೆಯುವ ಮಹತ್ವದ ಸಭೆಗೆ ಕೇಂದ್ರದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಶಿವಶಂಕರ ಮೆನನ್ ನೇತೃತ್ವದಲ್ಲಿ ಆರ್.ಬಿ.ಗ್ರೋವರ್, ಪ್ರಧಾನಮಂತ್ರಿ ಸಲಹೆಗಾರ ಶ್ಯಾಮ್ ಶರಣ್, ಡಿ.ಬಿ.ವೆಂಕಟೇಶ್ ಅವರನ್ನು ಒಳಗೊಂಡು ಭಾರತದ ನಿಯೋಗ ವಿಯನ್ನಾಗೆ ತೆರಳಿದ್ದು, ತೀವ್ರ ಲಾಬಿಯಲ್ಲಿ ನಿರತವಾಗಿವೆ.

(ದಟ್ಸ್ ಕನ್ನಡ ವಾರ್ತೆ)

ಎನ್ಎಸ್ ಜಿ ಸಭೆಗೆ ತೆರಳಿದ ಭಾರತದ ನಿಯೋಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X