ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಭಾರತದ ಆಸೆ ಜೀವಂತ

By Staff
|
Google Oneindia Kannada News

Vijender Kumar of India enter semifinal in boxingಬೀಜಿಂಗ್, ಆ. 20 : ಓಲಿಂಪಿಕ್ ಕ್ರೀಡಾಕೂಟದಲ್ಲಿ ಇಂದು ಭಾರತೀಯ ಕ್ರೀಡಾಳುಗಳು ಭಾರತದ ತ್ರಿವರ್ಣ ಧ್ವಜವನ್ನು ಆಗಸದಲ್ಲಿ ಫಟಫಟಿಸುವಂತೆ ಮಾಡಿದ್ದಾರೆ. ಕುಸ್ತಿ ಪಂದ್ಯದಲ್ಲಿ ಸುಶೀಲ್ ಕಂಚು ಪದಕ ಕೊರಳಿಗೇರಿಸಿದರೆ, ಬಾಕ್ಸಿಂಗ್‌ನಲ್ಲಿ ವಿಜೇಂದರ್ ಕುಮಾರ್ ಕ್ವಾರ್ಟರ್ ಫೈನಲ್‌ನಲ್ಲಿ ಜಯಭೇರಿ ಬಾರಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇಂದು ನಡೆದ ಬಾಕ್ಸಿಂಗ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿಜೇಂದರ್ ಕುಮಾರ್ ವಿಜೇತರಾಗಿದ್ದಾರೆ. 75 ಕೆಜಿ ಮಿಡಲ್ ವೇಟ್ ಬಾಕ್ಸಿಂಗ್‌ನಲ್ಲಿ ವಿಜೇಂದರ್ ಕುಮಾರ್ ಅವರು ಇಕ್ವೆಡಾರ್‌ನ ಕಾರ್ಲೋಸ್ ಗೊರೊಂರಾ ಅವರನ್ನು ಭಾರೀ ಅಂತರದಲ್ಲಿ ಸೋಲಿಸಿದರು.

ರಕ್ಷಣಾತ್ಮಕವಾಗಿ ಆಟವಾಡಿದ ವಿಜೇಂದರ್ ಇನ್ನೂ ಒಂದು ಸುತ್ತು ಬಾಕಿ ಇರುವಂತೆಯೇ ಇಕ್ವೆಡಾರ್‌ನ ಎದುರಾಳಿ ವಿರುದ್ಧ 9-4 ಅಂತರದಿಂದ ಗೆಲುವು ಸಾಧಿಸಿದರು. ಮೊದಲ ಸುತ್ತಿನಲ್ಲಿ 2 ಅಂಕ ಗಳಿಸಿದ ನಂತರ ಹಿಂತಿರುಗಿ ನೋಡರೆ ಪೂರ್ಣ ಮೇಲುಗೈ ಸಾಧಿಸಿ, ಅಂತಿಮವಾಗಿ ಜಯಮಾಲೆಯನ್ನು ಧರಿಸಿದರು. ಆಕ್ರಮಣಕ್ಕೆ ಹೆಚ್ಚು ಒತ್ತು ನೀಡದೆ ತಂತ್ರಗಾರಿಕೆಗೆ ಹೆಚ್ಚಿನ ಪ್ರಾಧಾನ್ಯ ನೀಡಿದ ವಿಜೇಂದರ್ ಸುಲಭ ಜಯ ಸಾಧಿಸಿದರು.

51 ಕೆಜಿ ಪ್ಲೈವೇಟ್ ವಿಭಾಗದಲ್ಲಿ ಜಿತೇಂದರ್ ಕುಮಾರ್ ರಷ್ಯಾದ ಜಾರ್ಜ್ ಬಾಲಕ್ ಸಿನ್ ಅವರ ಮುಂದೆ ಇಂದು ಸೋಲುಂಡು ನಿರಾಶೆ ಮೂಡಿಸಿದ್ದರು. ಈ ಗೆಲುವಿನಿಂದ ಹುಮ್ಮಸ್ಸು ಹೆಚ್ಚಿಸಿಕೊಂಡಿರುವ ವಿಜೇಂದರ್ ತಮ್ಮ ಗುರಿ ಚಿನ್ನದ ಪದಕ ಗೆಲ್ಲುವುದೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಹಾಗು ಇಂದಿನ ಗೆಲುವು ಎಲ್ಲ ಭಾರತೀಯರಿಗೆ ಅರ್ಪಿಸುತ್ತಿರುವುದಾಗಿ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ನಲ್ಲಿ ಸೋತ ಜಿತೇಂದರ್
ಒಲಿಂಪಿಕ್ಸ್ :ಭಾರತದ ಕುಸ್ತಿಪಟು ಸುಶೀಲ್ ಗೆ ಕಂಚು
ಟೇಬಲ್ ಟೆನ್ನಿಸ್ :ಒಲಿಂಪಿಕ್ಸ್ ನಿಂದ ಕಮಲ್ ಔಟ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X