ಬೌಲರ್‌‍ಗಳ ಪರಾಕ್ರಮಕ್ಕೆ ತತ್ತರಿಸಿದ ಶ್ರೀಲಂಕಾ

ಗಾಲೆ, ಆ. 4 : ಇಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಲಂಕಾ ಪಡೆಯನ್ನು ಧೂಳಿಪಟ ಮಾಡುವ ಮೂಲಕ 170 ರನ್‌ಗಳ ಭರ್ಜರಿ ಜಯ ಸಾಧಿಸಿ ಐಡಿಯಾ ಕಪ್ ಸರಣಿಯನ್ನು 1-1 ರಿಂದ ಸಮ ಮಾಡಿಕೊಂಡಿತು. ಹರ್ಭಜನ್ ಸಿಂಗ್, ಇಶಾಂತ್ ಶರ್ಮಾ ಅವರ ಮಾರಕ ಬೌಲಿಂಗ್ ಹಾಗೂ ಉಪನಾಯಕ ವಿರೇಂದ್ರ ಸೆಹ್ವಾಗ್ ಅವರ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವು.

ಭಾರತದ ನಾಯಕ ಅನಿಲ್ ಕುಂಬ್ಳೆ ಶ್ರೀಲಂಕಾದ ಮುತ್ತಯ್ಯ ಮುರಲೀಧರನ್ ಅವರ ವಿಕೆಟ್ ಪಡೆಯುವುದರ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ನಿರೀಕ್ಷೆಯಂತೆ ವಿರೇಂದ್ರ ಸೆಹ್ವಾಗ್ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು. ಎರಡನೇ ಇನ್ನಿಂಗ್ಸ್ ನಲ್ಲಿ ವಿರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರ ಉತ್ತಮ ಜತೆಯಾಟದ ಮೂಲಕ ಭಾರತಕ್ಕೆ ಒಟ್ಟು 237 ರನ್ ಗಳ ಮುನ್ನಡೆ ಪಡೆದುಕೊಂಡಿತ್ತು. ಶನಿವಾರ ಎರಡನೇ ಇನ್ನಿಂಗ್ಸ್ ಕೊನೆಗೊಂಡಾಗ 200 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಇಂದು ಬೆಳಗ್ಗೆ ಆಟ ಮುಂದುವೆರೆಸಿದ ಭಾರತೀಯ ಪಡೆ ದಿಢೀರ್ ಕುಸಿತ ಕಂಡು 269ಕ್ಕೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.

307 ರನ್ ಗಳ ಬೆನ್ನಟ್ಟಿದ ಲಂಕಾ ಪಡೆ ಭಾರತೀಯ ಬೌಲಿಂಗ್ ಎದುರಿಸಲು ತತ್ತರಿಸಿತು. ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್, ಇಶಾಂತ್ ಶರ್ಮಾ ಹಾಗೂ ನಾಯಕ ಅನಿಲ್ ಕುಂಬ್ಳೆ ಅವರ ಮಾರಕ ದಾಳಿಗೆ ಲಂಕಾ ಬ್ಯಾಟ್ಸ್ ಮನ್ ಗಳು ಪೆವಿಲಿಯನ್‌ಗೆ ಮುಖ ಮಾಡಿದರು. ಸಮರವೀರ ಮತ್ತು ತಿಲಕರತ್ನೆ ದಿಲ್ ಶಾನ್ ಇಬ್ಬರು ಲಂಕಾ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರಾದರೂ ಭಾರತೀಯ ಬೌಲಿಂಗ್ ದಾಳಿ ಎದುರು ರನ್ ಗಳಿಸಲು ಅವರು ಸಫಲರಾಗಲಿಲ್ಲ. ಕೊನೆಯಲ್ಲಿ 136 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 170 ರನ್ ಗಳಿಂದ ಸೋಲನುಭವಿಸಬೇಕಾಯಿತು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+