ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.5ರವರೆಗೂ ಮೇಲ್ಮನೆ ಕಲಾಪ ಮುಂದುವರಿಕೆ

By Staff
|
Google Oneindia Kannada News

ಬೆಂಗಳೂರು, ಜು.29: ವಿಧಾನ ಪರಿಷತ್ ಕಲಾಪವನ್ನು ಆಗಸ್ಟ್ 5ರವರೆಗೂ ಮುಂದೂಡಲು ಸದನದ ಕಲಾಪ ಸಮಿತಿ ನಿರ್ಧರಿಸಿದೆ. ವಿಧಾನಸಭೆ ಕಲಾಪ ಜು.31ಕ್ಕೆ ಅಂತ್ಯಗೊಳ್ಳಲಿದೆ.

ಆಗಸ್ಟ್ 1,4 ಮತ್ತು 5ರಂದು ಹೆಚ್ಚುವರಿಯಾಗಿ ಮೂರು ದಿನಗಳ ಕಾಲ ಮೇಲ್ಮನೆ ಕಲಾಪ ನಡೆಯಲಿದೆ. ಈ ಮೊದಲು ಜುಲೈ ಮಾಸಾಂತ್ಯದವರೆಗೂ ವಿಧಾನಮಂಡಲ ಅಧಿವೇಶನ ನಿಗದಿಯಾಗಿತ್ತು. ಬಳಿಕ ಆ.8ರವರೆಗೂ ವಿಸ್ತರಿಸಲು ನಿರ್ಧರಿಸಲಾಯಿತು. ಕೊನೆಗೆ ಜು.31ಕ್ಕೆ ವಿಧಾನಸಭೆ ಕಲಾಪವನ್ನು ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ.

2008-09ನೇ ಸಾಲಿನ ಮುಂಗಡ ಪತ್ರದ ಚರ್ಚೆ ಇನ್ನೂ ಮೇಲ್ಮನೆಯಲ್ಲಿ ಆರಂಭವಾಗಿಲ್ಲ. ನಾಳೆಯಿಂದ ಮೂರು ದಿನಗಳ ಕಾಲ ಈ ಚರ್ಚೆ ಪೂರ್ಣಗೊಳಿಸಿ ಒಪ್ಪಿಗೆ ನೀಡಿದ ಬಳಿಕ, ಮತ್ತೆ ಮೂರು ದಿನಗಳ ಕಾಲ ಉಳಿದ ಕಲಾಪವನ್ನು ಮುಂದುವರಿಸಲಾಗುತ್ತದೆ. ವಿಧಾನ ಪರಿಷತ್ ಕಲಾಪ ಸಲಹಾ ಸಮಿತಿ ಈ ತೀರ್ಮಾನ ಕೈಗೊಂಡಿದೆ.

(ದಟ್ಸ್‌ಕನ್ನಡ ವಾರ್ತೆ)

ನಾಗರೀಕರ ಭದ್ರತೆಗಾಗಿ ಗುರುತಿನ ಚೀಟಿ, ಸಿಸಿಟಿವಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X