ಬಾಂಬ್ ಸ್ಫೋಟ ರಾಜ್ಯ ಗುಪ್ತಚರ ಇಲಾಖೆ ವೈಪಲ್ಯ : ಕೇಂದ್ರ
ಬೆಂಗಳೂರು, ಜು. 29 : ಬಾಂಬ್ ಸ್ಫೋಟದ ಮೂಲಕ ಉಗ್ರರು ಅಟ್ಟಹಾಸ ಮುಂದುವರೆಯುತ್ತಿರುವ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುಸುಕಿನ ಗುದ್ದಾಟ ಹಾಗೂ ಆರೋಪ ಪ್ರತ್ಯಾರೋಪಗಳು ನಡೆಯತೊಡಗಿವೆ.
ಬೆಂಗಳೂರಿನಲ್ಲಿ ಬಾಂಬ್ ದಾಳಿ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೊದಲೇ ತಿಳಿಸಿತ್ತು ಎಂದು ಕಂಡಕಂಡವರಿಗೆಲ್ಲಾ ಗೃಹ ಸಚಿವ ಶಿವರಾಜ್ ಪಾಟೀಲ್ ಸೇರಿದಂತೆ ಗೃಹ ಇಲಾಖೆ ಅಧಿಕಾರಿಗಳು ಹೇಳುತ್ತಿರುವುದು ರಾಜ್ಯದ ಪೊಲೀಸ್ ಇಲಾಖೆಯ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕಳೆದ ಆರು ತಿಂಗಳನಿಂದ ಕೇಂದ್ರದ ಗೃಹ ಇಲಾಖೆ ಯಾವುದೇ ಮುನ್ಸೂಚನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕಳೆದ ಕೆಲ ದಿನಗಳ ಹಿಂದೆ ಕೇಂದ್ರದಿಂದ ಯಾವುದೇ ಆತಂಕವಿಲ್ಲ ಎನ್ನುವ ಸುದ್ದಿಯನ್ನು ಕಳಿಸಿದೆ. ಹೀಗಿದ್ದರೂ ಕೂಡಾ ಇದೀಗ ಸ್ಫೋಟಗೊಂಡ ನಂತರ ತಮ್ಮ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳಲು ರಾಜ್ಯದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂದು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.
ರಾಜ್ಯ ಗುಪ್ತಚರ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಅಗತ್ಯ ಸಿಬ್ಬಂದಿಯಿಂದ ಭದ್ರವಾಗಿದೆ. ಕೇಂದ್ರದಿಂದ ಬರುವ ಯಾವ ಮಾಹಿತಿಗಳು ನಮಗೆ ತಲುಪದಿರಲು ಸಾಧ್ಯವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ವಿನಾ ಆರೋಪ ಮಾಡುವುದು ಬೇಡ ಎಂದು ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಉಗ್ರರ ನಿಗ್ರಹಕ್ಕೆ ಕೋಕಾ ಕಾಯ್ದೆ ಅಗತ್ಯ: ಬಿಎಸ್‌ವೈ
ಉಗ್ರರ ನಿಗ್ರಹಕ್ಕೆ ಶೀಘ್ರದಲ್ಲೇ ಹೊಸ ನೀತಿ:ಬಿಎಸ್ ವೈ












Click it and Unblock the Notifications