ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಂಬೆ ಪೊಟ್ಟಣದಲ್ಲಿಟ್ಟು ಬಾಂಬ್ ಸ್ಫೋಟ ?

By Staff
|
Google Oneindia Kannada News

ಬೆಂಗಳೂರು, ಜು. 29 : ನಗರದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲು ಉಗ್ರರು ಬೊಂಬೆಗಳ ಪಟ್ಟಣವೆಂದೇ ಖ್ಯಾತಿಯಾಗಿರುವ ಚನ್ನಪಟ್ಟಣದಲ್ಲಿ ಬಾಂಬ್ ತಯಾರಿಸಿದ್ದ ಬಗ್ಗೆ ಪೊಲೀಸರಿಗೆ ಕೆಲ ಕುರುಹುಗಳು ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ಸುಮಾರು ಹತ್ತಕ್ಕೂ ಅಧಿಕ ತನಿಖಾ ತಂಡಗಳು ಅಲ್ಲಿ ತನಿಖೆಯನ್ನು ತೀವ್ರಗೊಳಿಸಿವೆ.

ಇದೇ ವೇಳೆ ರಾಷ್ಟ್ರೀಯ ಭದ್ರತಾ ದಳದ ಸಿಬ್ಬಂದಿಯನ್ನು ಒಳಗೊಂಡ ಕೇಂದ್ರದ ತಂಡವೂ ಸೋಮವಾರ ಚನ್ನಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪೊಲೀಸ್ ಠಾಣೆಗೆ ತೆರಳಿದ ಐವರು ಸದಸ್ಯರ ತನಿಖಾ ತಂಡ ಪೊಲೀಸರು ವಶಪಡಿಸಿಕೊಂಡಿರುವ ಸ್ಫೋಟಕಗಳ ತನಿಖೆ ನಡೆಸಿತು. ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಬಳಸಿದ ಸ್ಫೋಟಕ ಮತ್ತು ಚನ್ನಪಟ್ಟಣದಲ್ಲಿ ದೊರೆತ ಸ್ಫೋಟಕಗಳಿಗೂ ಸಾಮ್ಯತೆ ಇದೆ ಎಂದು ಡಿಜಿಪಿ ಶ್ರೀಕುಮಾರ್ ತಿಳಿಸಿದ್ದಾರೆ.

ಸರಣಿ ಸ್ಫೋಟದ ಸಿದ್ಧತೆಯನ್ನು ಚನ್ನಪಟ್ಟಣದಲ್ಲಿ ನಡೆಸಿರುವುದು ಸಾಬೀತಾಗಿರುವ ಹಿನ್ನಲೆಯಲ್ಲಿ ಅಲ್ಲಿ ವಿಶೇಷ ತನಿಖಾ ತಂಡದ ಸದಸ್ಯರ ತನಿಖೆ ತೀವ್ರಗೊಂಡಿದೆ. ನಗರದ ಪೊಲೀಸ್, ಕೇಂದ್ರ ಅಪರಾಧ ವಿಭಾಗದ ಸಿಬ್ಬಂದಿ ಬೆಂಗಳೂರು ಗ್ರಾಮಾಂತರ ಪೊಲೀಸ್, ಕನಕಪುರ ಪೊಲೀಸ್ ಸಿಬ್ಬಂದಿಯ ತಂಡಗಳು ಚನ್ನಪಟ್ಟಣದ ವಿವಿಧೆಡೆ ತನಿಖೆ ನಡೆಸುತ್ತಿವೆ.

ನಗರದಲ್ಲಿ ಸರಣಿ ಸ್ಫೋಟ ಸಂಭವಿಸುವ ಹಿಂದಿನ ದಿನ ಚನ್ನಪಟ್ಟಣದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಬಾಂಬ್ ಅನ್ನು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟು ಸ್ಫೋಟಿಸಿದ್ದರಿಂದ ಅದರ ಪರಿಣಾಮ ತೀವ್ರವಾಗಿರಲಿಲ್ಲ. ಆದ್ದರಿಂದ ಯಾವುದೇ ರೀತಿಯ ಹಾನಿಯೂ ಸಂಭವಿಸಿರಲಿಲ್ಲ. ಆದರೆ ಇದನ್ನು ಪ್ರಯೋಗಾರ್ಥವಾಗಿ ಸ್ಫೋಟಿಸಿರುವ ಸಾಧ್ಯತೆ ಇದೆ ಎಂದು ಶ್ರೀಕುಮಾರ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಕರೆ
ಮಂಗಳೂರಿನಲ್ಲಿ ಅನಾಥ ಸೂಟ್‌ಕೇಸ್ ಸೃಷ್ಟಿಸಿದ ತಲ್ಲಣ
ಶಂಕಿತ ಉಗ್ರ ಅಬ್ದುಲ್ ಹಲೀಂ ಜತೆ ತೀವ್ರ ವಿಚಾರಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X