ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅನಿಮೇಷನ್ ಸ್ಟುಡಿಯೋ

By Staff
|
Google Oneindia Kannada News

ಬೆಂಗಳೂರು, ಜು.29: ಕರ್ನಾಟಕದಲ್ಲಷ್ಟೇ ಅಲ್ಲ ಭಾರತದಲ್ಲೇ ಹೇಳಿಕೊಳ್ಳುವಂತಹ ಅನಿಮೇಷನ್ ಸ್ಟುಡಿಯೋ ಇಲ್ಲದೆ ಚಿತ್ರ ನಿರ್ಮಾಪಕರು ವಿದೇಶಗಳಿಗೆ ಹಾರಬೇಕಾದ ಪರಿಸ್ಥಿತಿ ಇದೆ. ಆದರೆ ಈ ಸಮಸ್ಯೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಬೆಂಗಳೂರಿನಲ್ಲಿ 80 ಕೋಟಿ ರು.ಗಳ ವೆಚ್ಚದಲ್ಲಿ ಅನಿಮೇಷನ್ ಸ್ಟ್ಟುಡಿಯೋ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಹಾಗಂತ ಈ ಸ್ಟುಡಿಯೋವನ್ನು ಸರ್ಕಾರ ನಿರ್ಮಿಸುತ್ತಿಲ್ಲ. ಬೆಂಗಳೂರು ಮೂಲದ ಹಾಲಿವುಡ್ ನಿರ್ಮಾಪಕ, ಸಾಹಿತಿ, ನಿರ್ದೇಶಕ ಶಿವ ಸೆಲ್ವರಾಜ್ ಎಂಬವರು ಈ ಅನಿಮೇಷನ್ ಸ್ಟುಡಿಯೋವನ್ನು ಬೆಂಗಳೂರಿನಲ್ಲಿ ಕಟ್ಟಲು ನಿರ್ದರಿಸಿದ್ದಾರೆ. ಕಳೆದ 20 ವರ್ಷಗಳಿಂದ ಯುಎಸ್‌ನಲ್ಲಿ ವಾಸವಾಗಿರುವ ಸೆಲ್ವರಾಜ್, ಉತ್ತಮ ತಾಂತ್ರಿಕತೆಯಿಂದ ಕೂಡಿದ ಅನಿಮೇಷನ್ ಸ್ಟುಡಿಯೋವನ್ನು 80 ಕೋಟಿ ರು. ವೆಚ್ಚದಲ್ಲಿ ಕಟ್ಟಲಿದ್ದಾರೆ.

ಹಾಲಿವುಡ್ ಚಿತ್ರದ ಕೆಲಸ ನಿಮಿತ್ತ ಇತ್ತೀಚೆಗೆ ಸ್ವದೇಶಕ್ಕ್ಕೆ ಆಗಮಿಸಿದ್ದ ಅವರು ನನ್ನ ಹಲವಾರು ಚಟುವಟಿಕೆಗಳಲ್ಲಿ ಸ್ಟುಡಿಯೋ ನಿರ್ಮಾಣ ಕೇವಲ ಒಂದು ಭಾಗವಷ್ಟೆ ಎಂದರು. ಪ್ರಸ್ತುತ ಅವರು Black Men Can Swim ಎಂಬ ಹಾಲಿವುಡ್ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಚಿತ್ರ ನಿರ್ಮಾಣದ ನಂತರದ ಕಾರ್ಯಗಳ ನಿಮಿತ್ತ ಬೆಂಗಳೂರು, ಪುಣೆ, ಮುಂಬೈ ಹಾಗೂ ಚೆನ್ನ್ನೈನಲ್ಲಿ ಓಡಾಡುತ್ತಿದ್ದಾರೆ. ಭಾರತ ಮತ್ತು ಹಾಲಿವುಡ್‌ನ್ನು ಬೆಸೆಯಬೇಕೆಂಬ ಮಹತ್ವಾಕಾಂಕ್ಷೆ ತಮ್ಮಲ್ಲಿ ಇರುವುದಾಗಿ ಅವರು ತಿಳಿಸಿದರು. Black Men Can Swim ಎಂಬುದು ಸೆಲ್ವರಾಜ್ ಅವರದ್ದೇ ಆದ ಸಂಪೂರ್ಣ ವಾಣಿಜ್ಯಮಯ ಚಿತ್ರ. ಈ ಚಿತ್ರ ಅಬ್ದುಲ್ ಎಂಬ ಕಪ್ಪು ಮುಸ್ಲಿಂ ಯುವಕನ ಕಥೆಯನ್ನು ಹೊಂದಿದೆ ಎನ್ನುತ್ತಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X