ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರಮಂಗಲ ಫೋರಂ ಮಾಲ್ ಬಳಿ ಬಾಂಬ್ ಪತ್ತೆ

By Staff
|
Google Oneindia Kannada News

The Forum Mall at Koramangalaಬೆಂಗಳೂರು, ಜು. 26: ನಗರದ ಕೋರಮಂಗಲ ಫೋರಂ ಮಾಲ್ ಸಮೀಪ ಸಜೀವ ಬಾಂಬ್ ಪತ್ತೆಯಾಗಿದ್ದು, ಅದನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ. ಶನಿವಾರ ಸುಮಾರು 11: 10ರ ಸುಮಾರಿಗೆ ಫೋರಂ ಮಾಲ್ ಬಳಿಯ ಭೀಮಾ ಜುವೆಲರ್ಸ್ ಅಂಗಡಿ ಎದುರಿನಲ್ಲಿ ಲೈವ್ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಮಗಚಿ ಹಾಕಿದ್ದ ಕಬ್ಬಿಣದ ಬಕೀಟ್‌ನಂತೆ ಕಾಣುತ್ತಿದ್ದ ಬಾಂಬ್ ಇಟ್ಟಿರುವುದು ಕಂಡುಬಂದಿತ್ತು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೆಂಪು ಟೀಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಅಲ್ಲಿ ಓಡಾಡುತ್ತಿದ್ದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ಆಗಮಿಸಿ ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾಂಬ್ ನಲ್ಲಿ ಒಂದು ಮೈಕ್ರೋಚಿಪ್, ಡಿಟೊನೇಟರ್, ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಎಲ್ಲ ಸ್ಥಳಗಳಲ್ಲಿ ಇಂತಹದೇ ಸ್ಫೋಟಕಗಳನ್ನು ಶುಕ್ರವಾರ ನಡೆದ ಸ್ಫೋಟಗಳಲ್ಲಿ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದರು. ದೆಹಲಿಯಿಂದ ಬಂದಿರುವ ಬಾಂಬ್ ನಿಷ್ಕ್ರಿಯ ತಜ್ಞರು ಸುತ್ತಮುತ್ತಲ ಪ್ರದೇಶದಲ್ಲಿ ಮತ್ತಷ್ಟು ಸುಳಿವಿಗಾಗಿ ಹುಡುಕುತ್ತಿದ್ದಾರೆ.

ಬಾಂಬ್ ಅನ್ನು ನಿಷ್ಕ್ರಿಕ ಮಾಡುವ ಸಂದರ್ಭದಲ್ಲಿಯೇ ನೂರಾರು ಜನ ಅಲ್ಲಿ ನೆರೆದು ಈ ಘಟನೆಯನ್ನು ವೀಕ್ಷಿಸುತ್ತಿದ್ದುದು ಕಂಡುಬಂದಿತು. ಉತ್ಸುಕತೆಯಿಂದ ನೋಡುತ್ತಿದ್ದ ಜನರನ್ನು ನಿಗ್ರಹಿಸುವುದೇ ಪೊಲೀಸರಿಗೆ ಕಷ್ಟವಾಗುತ್ತಿದೆ. ಬಾಂಬ್ ಅನ್ನು ಶಮನಗೊಳಿಸಲಾಗಿದ್ದು, ಜನರು ಆತಂಕಪಡುವ ಕಾರಣವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ಮತ್ತಷ್ಟು ಸುದ್ದಿಗಳು
ಬೆಂಗಳೂರು ಸರಣಿ ಸ್ಫೋಟ ಎಲ್ಲಿ,ಯಾವಾಗ??
ಸ್ಪೋಟದ ಹಿನ್ನಲೆಯಲ್ಲಿ ಸಂಜೆ ತುರ್ತು ಸಂಪುಟ ಸಭೆ
ಬೆಂಗಳೂರಿಗರಿಗೆ ಇಂದು ಕರಾಳ ಶುಕ್ರವಾರ
ಸ್ಪೋಟಗಳ ಹಿಂದೆ ಭಯೋತ್ಪಾದಕರ ಕೈವಾಡ :ಬಿದರಿ
ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X