ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗವದ್ಗೀತೆ ಪಾರಾಯಣದಿಂದ ಆತ್ಮಹತ್ಯೆ ನಿಗ್ರಹ

By Staff
|
Google Oneindia Kannada News

Suicide prevension : Helpline by Srikrishna Trustಬೆಂಗಳೂರು, ಜು. 24 : ತೀವ್ರ ಖಿನ್ನತೆಯಿಂದಲೋ, ವಿಫಲನಾಗುವ ಭಯದಿಂದಲೋ ಜೀವನದಿಂದ ವಿಮುಖರಾಗಿ ಆತ್ಮಹತ್ಯೆಗೆ ಯತ್ನಿಸುವ ವ್ಯಕ್ತಿಗಳ ಮನಸ್ಸನ್ನು ಭಗವದ್ಗೀತೆಯ ಪಾರಾಯಣ, ಪೂಜೆ ಪುನಸ್ಕಾರ ಮೊದಲಾದ ಧಾರ್ಮಿಕ ಕ್ರಿಯೆಯ ಮುಖಾಂತರ ಪರಿವರ್ತಿಸುವ ನಿಟ್ಟಿನಲ್ಲಿ ಯೋಗೀಶ್ವರ ಶ್ರೀಕೃಷ್ಣ ಸೇವಾ ಟ್ರಸ್ಟ್ ಸಹಾಯವಾಣಿ ಆರಂಭಿಸಿದೆ.

ಸಮಾಜದಲ್ಲಿ ಇಂದು ನೈತಿಕತೆ ಅಧಃಪತನಕ್ಕಿಳಿದಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಕ್ರಿಯೆ ಅನೇಕ ತಂದೆ ತಾಯಿ, ಗುರುಗಳಿಂದಲೇ ನಡೆಯುತ್ತಿಲ್ಲ. ಮೇಲ್ಮಟ್ಟದ ವರ್ಗದವರಲ್ಲಿ ಸ್ವೇಚ್ಛಾಚಾರದ ಬದುಕು ಕೂಡ ಅನೇಕ ವ್ಯಕ್ತಿಗಳನ್ನು ಆತ್ಮಹತ್ಯೆಯಂಥ ಹೀನಾಯ ಕೃತ್ಯಕ್ಕೆ ಪ್ರೇರೇಪಿಸುತ್ತಿದೆ. ಅಂಥವರಿಗೆ ಭಗವದ್ಗೀತೆಯ ಪಾರಾಯಣ, ಹಾಡುಹಸೆಯ ಮೂಲಕ ಜೀವನೋತ್ಸಾಹ, ಉತ್ತಮ ಸಂಸ್ಕಾರ ಬೆಳೆಸುವ ಕ್ರಿಯೆಯಲ್ಲಿ ಟ್ರಸ್ಟ್ ನಿರತವಾಗಿದೆ ಎಂದು ಟ್ರಸ್ಟ್‌ನ ಆನಂದ್ ದಟ್ಸ್‌ಕನ್ನಡಕ್ಕೆ ತಿಳಿಸಿದರು.

ಖ್ಯಾತ ವೈದ್ಯರು, ಇಂಜಿನಿಯರುಗಳು, ವಕೀಲರು ಮತ್ತೇನಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಸ್ವಇಚ್ಛೆಯಿಂದ ಮಾನಸಿಕವಾಗಿ ಖಿನ್ನತೆಗೊಳಗಾದವರಿಗೆ ಸಹಾಯಹಸ್ತ ನೀಡುತ್ತಿದ್ದಾರೆ. ಸಂಗೀತ ಕಾರ್ಯಕ್ರಮ, ಭಜನೆಗಳು ಕೂಡ ಅನೇಕರ ಮನಸ್ಸು ಪರಿವರ್ತಿಸಿ ಜೀವನಕ್ಕೆ ಒಳ್ಳೆಯ ಹಾದಿ ಹಾಕಿಕೊಡಲು ಸಹಾಯವಾಗಿದೆ. ಧಾರ್ಮಿಕ ಕ್ರಿಯೆಗಳಲ್ಲಿ ಅಂಥ ಶಕ್ತಿಯಿದೆ ಎಂದು ಆನಂದ್ ವಿವರಿಸಿದರು.

ಅಶಿಕ್ಷಿತರು, ಕುಡುಕರು, ಕೂಲಿ ಕಾರ್ಮಿಕರನೇಕರು ಸಹಾಯವಾಣಿಯ ಸಹಾಯಪಡೆದು ಆತ್ಮಹತ್ಯೆಯೆಂಬ ವಿಚಾರಕ್ಕೆ ತಿಲಾಂಜಲಿ ಇತ್ತಿದ್ದಾರೆ. ಇಂಥ ಕೆಳವರ್ಗದವರಲ್ಲಿಯೇ ಉತ್ತಮ ಸಂಸ್ಕಾರವಿರುವುದು ಕಂಡುಬಂದಿದೆ ಮತ್ತು ಇಂಥವರೇ ಕೌನ್ಸೆಲಿಂಗ್‌ಗೆ ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅನೇಕ ಮೇಲ್ವರ್ಗದ ದುಃಖಿಗಳು ಕೂಡ ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆನಂದ್ ತಿಳಿಸಿದರು.

ಪ್ರೇಮ ಪ್ರಕರಣದ ವೈಫಲ್ಯ, ಕೀಳರಿಮೆ, ಹತಾಶೆ, ಮಾನಸಿಕ ಕ್ಲೇಶ, ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವ ಭಯ, ಖಿನ್ನತೆ, ಜೀವನದಲ್ಲಿ ಜಿಗುಪ್ಸೆಗೊಂಡವರು, ವರದಕ್ಷಿಣೆ ಭೂತದಿಂದ ನೊಂದವರು ಹೆಚ್ಚಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದವರು ಅಥವಾ ಜೀವನದಲ್ಲಿ ಬದುಕುವ ಆಶಾಭಾವನೆ ಕಳೆದುಕೊಂಡವರು ಕೂಡ ಈ ಸಹಾಯವಾಣಿಯ ಪರಿಹಾರ ಕಂಡುಕೊಳ್ಳಬಹುದು.

ಯೋಗೀಶ್ವರ ಶ್ರೀಕೃಷ್ಣ ಸೇವಾ ಟ್ರಸ್ಟ್ ವಿಳಾಸ ಕೆಳಗಿನಂತಿದೆ

ನಂ.277, 3ನೇ ಎ ಅಡ್ಡರಸ್ತೆ
4ನೇ ಮುಖ್ಯರಸ್ತೆ
ಪುಟ್ಟನೇಹಳ್ಳಿ, ಜೆಪಿ ನಗರ 7ನೇ ಹಂತ
ಬೆಂಗಳೂರು - 560 078

ದೂರವಾಣಿ ಸಂಖ್ಯೆ : 9449001718

ಪೂರಕ ಓದಿಗೆ:

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X