ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ನಲ್ಲಿ ಪರಮಾಣು ಒಪ್ಪಂದಕ್ಕೆ ಭರ್ಜರಿ ಸಿದ್ಧತೆ

By Staff
|
Google Oneindia Kannada News

ವಾಷಿಂಗ್ ಟನ್ , ಜು. 24 : ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿಶ್ವಾಸಮತದಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಅತ್ತ ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಚಾಲನೆ ನೀಡಿದೆ. ಅಧ್ಯಕ್ಷ ಜಾರ್ಜ್ ಬುಷ್ ಆಡಳಿತ ಮತ್ತು ಕಾನೂನು ತಜ್ಞರು ಒಪ್ಪಂದಕ್ಕೆ ಬೇಕಿರುವ ಎಲ್ಲ ಸಿದ್ಧತೆಗಳಿಗೆ ತಯಾರಿ ನಡೆಸಿದ್ದಾರೆ.

ಕಳೆದ ಎರಡು ಮೂರು ವರ್ಷಗಳಿಂದ ಒಪ್ಪಂದಕ್ಕೆ ತೊಡಕಾಗಿದ್ದ ಸಮಸ್ಯೆ ನಿವಾರಣೆಯಾಗಿದೆ. ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕ ಕಾಂಗ್ರೆಸ್ ಮುಂದೆ ಈ ವಿಷಯ ಪ್ರಸ್ತಾಪವಾಗಲಿದೆ. ಅದೇ ಸಂದರ್ಭದಲ್ಲಿ ಅಮೆರಿಕ ಒಪ್ಪಂದಕ್ಕೆ ಅಧಿಕೃತ ಮುದ್ರೆ ದೊರೆಯಲಿದೆ ಎಂದು ಅಮೆರಿಕ ಆಡಳಿತದ ಮೂಲಗಳು ತಿಳಿಸಿವೆ. ಭಾರತದೊಂದಿಗಿನ ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಸೇರಿದಂತೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಈಗಾಗಲೇ ಸಹಮತ ಸೂಚಿಸಿವೆ, ಆದ್ದರಿಂದ ಒಪ್ಪಂದದ ಪ್ರಕ್ರಿಯೆಗಳು ಇನ್ನೇನು ಕೆಲವೆ ತಿಂಗಳಲ್ಲಿ ಮುಗಿಯಲಿವೆ ಎನ್ನಲಾಗಿದೆ.

ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ತನ್ನದೇ ಸ್ಥಾನ ಪಡೆದುಕೊಂಡಿದೆ. ಸಾಫ್ಟವೇರ್ ಉದ್ಯಮದಲ್ಲಿನ ಅವರ ಸೇವೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇದರ ಭಾರತದ ಕಿರೀಟಕ್ಕೆ ಇನ್ನೊಂದು ಗರಿ ಇಷ್ಟರಲ್ಲಿಯೇ ದೊರೆಯಲಿದ್ದು, ಪರಮಾಣು ಸಾಮರ್ಥ್ಯದ ಹೊಂದಿದ ರಾಷ್ಟ್ರ ಎಂಬ ಕೀರ್ತಿ ಭಾಜನವಾಗಲಿದೆ. ಈ ಮೂಲಕ ಭಾರತ ಏಷ್ಯಾದಲ್ಲಿ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ ಎಂದು ಅಮೆರಿಕ ಸಂತಸ ವ್ಯಕ್ತಪಡಿಸಿದೆ. ಪರಮಾಣು ಒಪ್ಪಂದ ಮೂಲಕ ಭಾರತದ ಜನತೆಗೆ ಅನೇಕ ಲಾಭಗಳು ಸಿಗಲಿದ್ದು, ಪ್ರಸ್ತುತ ಸಮಸ್ಯೆಯಾಗಿ ಕಾಡುತ್ತಿರುವ ವಿದ್ಯುತ್ ಆಭಾವವನ್ನು ಇದರ ಮೂಲಕ ನಿರಾಂತಕವಾಗಿ ಬಗೆಹರಿಸಬಹುದು ಎಂದು ಅಮೆರಿಕ ಕಾಂಗ್ರೆಸ್ ಪಕ್ಷದ ಮುಖಂಡ ಜೋಯಿ ವಿಲ್ಸನ್ ಅಭಿಪ್ರಾಯಪಟ್ಟಿದ್ದಾರೆ, ಈಗಾಗಲೇ ಆಸ್ಟ್ರೇಲಿಯಾ, ರಷ್ಯಾ ಹಾಗೂ ಯುನೈಟೆಡ್ ಕಿಂಗ್ ಡಂ ಪರಮಾಣು ರಾಷ್ಟ್ರಗಳಾಗಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X