ಚೂರುಪಾರು: ಬಿಹಾರದಲ್ಲಿ ರಸ್ತೆ ಅಪಘಾತ 20 ಸಾವು

ಪಾಟ್ನಾ, ಜು.15: ಮಾಗೊಪುರ್ ಬಳಿಯ ನಾಲೆಗೆ ಜೀಪ್ ಉರುಳಿ ಬಿದ್ದ ಕಾರಣ ಹತ್ತು ಮಂದಿ ಮಹಿಳೆಯರು, ಒಂಬತ್ತು ಮಕ್ಕಳು ಸೇರಿದಂದಂತೆ ಒಟ್ಟು 20 ಮಂದಿ ಸಾವನ್ನಪ್ಪಿದ ಘಟನೆ ಅಲಮಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾಧಾಪುರ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರಿ ಮಳೆ ಸುರಿಯುತ್ತಿರುವ ಕಾರಣ ಜೀಪಿನ ಚಾಲಕನಿಗೆ ರಸ್ತೆ ಗುರುತಿಸಲು ಸಾಧ್ಯವಾಗದೆ ಜೀಪನ್ನು ನಾಲೆಗೆ ಉರುಳಿಸಿದ್ದಾನೆ. ಅಪಘಾತ ಸಂಭವಿಸುತ್ತಿದ್ದಂತೆ ಜೀಪಿನ ಚಾಲಕ ಪರಾರಿಯಾಗಿದ್ದಾನೆ. ಮೃತ ದೇಹಗಳನ್ನು ಶವಪರೀಕ್ಷೆಗಾಗಿ ನಳಂದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ವರದಕ್ಷಿಣೆ ವಿವಾದ
ದಾವಣಗೆರೆ, ಜು.15: ಹೊನ್ನಾಳಿ ತಾಲೂಕಿನ ಗ್ರಾಮವೊಂದರಲ್ಲಿ ಪತ್ನಿಯನ್ನು ಕೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ. ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಗಣೇಶಪ್ಪ ವರದಕ್ಷಿಣೆ ತಾರದ ಪತ್ನಿ ವೀರಮ್ಮ(28) ಅವರನ್ನು ಕೊಂದು ಕಡೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶಾಂತಿಗಾಗಿ ಸಿಆರ್‌ಪಿಎಫ್
ಯಲಹಂಕ ಪೆರೇಡ್ ಮೈದಾನದಲ್ಲಿ ಸಿಆರ್‌ಫಿಎಫ್‌ನ 200 ತುಕಡಿಯ 875 ಸಿಬ್ಬಂದಿ ಮಂಗಳವಾರ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸೇವೆಗೆ ಹಿಂತಿರುಗಿದರು. 47 ವಾರಗಳ ಕಾಲದ ಕಠಿಣ ತರಬೇತಿಯಲ್ಲಿ ಸೈನಿಕ ಹಾಗೂ ಪೊಲೀಸ್ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿಕೊಡಲಾಯಿತು ಎಂದು ಸಿಆರ್‌ಫಿಎಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವರು, ಅತ್ಯಂತ ಕೆಟ್ಟ ಪರಿಸ್ಥಿತಿಗಳಲ್ಲೂ ಸಿಆರ್‌ಪಿಎಫ್ ಶಾಂತಿಯನ್ನು ಕಾಪಾಡಿದೆ ಎಂದರು.

ನಗರದಲ್ಲಿ 3 ದಿನ ಕಾವೇರಿ ಬರ
ಬಿಎಂಐಸಿ ಯೋಜನೆಯ ಕಾಮಗಾರಿ ನಡೆಯುತ್ತಿರುವುದರಿಂದ ಕಾವೇರಿ ನಾಲ್ಕನೇ ಹಂತದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬಿಡ್ಬ್ಲ್ಯು ಎಸ್ ಎಸ್ ಬಿಗೆ ಚನ್ನಸಂದ್ರ, ಉತ್ತರಹಳ್ಳಿ -ಕೆಂಗೇರಿ ರಸ್ತೆಯಲ್ಲಿ ನೀರಿನ ಕೊಳವೆಗಳನ್ನು ಸ್ಥಳಾಂತರಗೊಳಿಸಲು ಹೈಕೋರ್ಟ್ ಆದೇಶ ನೀಡಿದೆ. ಜು. 16 ರಿಂದ ಜು. 19 ರವರೆಗು ಬೆಂಗಳೂರಿನ ಪಶ್ಚಿಮ, ಆಗ್ನೇಯ, ದಕ್ಷಿಣ, ಕೇಂದ್ರ ಹಾಗೂ ಪೂರ್ವ ಭಾಗಗಳ ಲ್ಲಿ ಕುಡಿಯುವ ನೀರಿನ ಪೂರೈಕೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+