ಎಡಪಕ್ಷಗಳ ಗಡುವಿಗೆ ಬೆದರದೆ ಜಪಾನಿಗೆ ಪ್ರಧಾನಿ

ನವದೆಹಲಿ, ಜು.7: ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸಲು ಎಡಪಕ್ಷಗಳು ನೀಡಿದ ಗಡುವಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಪ್ರಧಾನಿ ಮನಮೋಹನ್ ಸಿಂಗ್ ಜಿ-8 ಶೃಂಗಸಭೆಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.

ರಾಜಕೀಯ ಅತಂತ್ರತೆ, ಹಣದುಬ್ಬರ ಏರಿಕೆ ಹಾಗೂ ಚುನಾವಣಾ ಸಾಧ್ಯತೆಗಳ ನಡುವೆ ಮನಮೋಹನ್ ಸಿಂಗ್ ಅವರು ಜಿ -8 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು, ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಷ್ ಅವರೊಂದಿಗೆ ನಡೆಯುವ ಮಾತುಕತೆಯ ನಂತರವಷ್ಟೇ ಅಣು ಒಪ್ಪಂದ ಬಗ್ಗೆ ಸ್ಪಷ್ಟ ನಿಲುವು ಸಿಗಲಿದೆ.

ಬುಧವಾರ ಜಪಾನಿನ ಹೊಕೈಡೊದಲ್ಲಿ ಬುಷ್ ಅವರನ್ನು ಮನಮೋಹನ್ ಸಿಂಗ್ ಭೇಟಿ ಮಾಡಲಿದ್ದಾರೆ. ವಿಯೆನ್ನಾ ಮೂಲದ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ(ಐಎಇಎ)ಜತೆಗಿನ ಸಂಬಂಧ ಕುದುರಿಸಲು ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಅಣುಶಕ್ತಿ ಬಳಕೆಗೆ ಅಣುಶಕ್ತಿ ಪೂರೈಕೆ ಸಮೂಹ(ಎನ್ ಎಸ್ ಜಿ) ಜತೆ ಒಮ್ಮತಕ್ಕೆ ಬರಲು ಬುಷ್ ಅವರ ನೆರವು ಕೇಳುವ ಸಾಧ್ಯತೆಯಿದೆ.

ಎಡಪಕ್ಷಗಳ ಸಭೆ: ನಾಲ್ಕು ಎಡಪಕ್ಷಗಳ ಸುಮಾರು 59 ಸಂಸದರು ಮಂಗಳವಾರ ನವದೆಹಲಿಯಲ್ಲಿ ಸಭೆ ಸೇರಲಿದ್ದು, ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.ಈ ನಡುವೆ ಬಿಜೆಪಿ ಯುಪಿಎಗೆ ಬಹುಮತ ಸಾಬೀತು ಪಡಿಶುವಂತೆ ಆಗ್ರಹಿಸಿದೆ. ಸಮಾಜವಾದಿ ಪಕ್ಷದ ಬೆಂಬಲ ದೊರೆತರೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅತಂಕದ ದಿನಗಳು ಇನ್ನು ದೂರವಾಗಿಲ್ಲ. ಪ್ರಧಾನಿ ಜಪಾನಿನಿಂದ ಬಂದ ನಂತರ ಎಲ್ಲಕ್ಕೂ ಪರಿಹಾರ ಸಿಗುವ ಸಾಧ್ಯತೆಯಿದೆ.

(ದಟ್ಸ್ ಕನ್ನಡವಾರ್ತೆ)

ಪೂರಕ ಓದಿಗೆ:
ಅಣು ಒಪ್ಪಂದ ದೇಶದ ಅಭಿವೃದ್ಧಿಗೆ ಪೂರಕ: ವಿಜ್ಞಾನಿ
ಬುಷ್ ಗಿಂತ ಆಡ್ವಾಣಿ ಅಪಾಯಕಾರಿ: ಅಮರ್ ಸಿಂಗ್
ಅಣು ಬಿಕ್ಕಟ್ಟಿಗೆ ಎಡ ಪಕ್ಷಗಳ ಅಂತಿಮ ಗಡುವು
ಪ್ರಧಾನಿ ವಿಶ್ವಾಸಮತ ಯಾಚಿಸಲು ಆಡ್ವಾಣಿ ಆಗ್ರಹ
ಅಣು ಒಪ್ಪಂದ: ಪ್ರಧಾನಿ ಮುಲಾಯಂ ಭೇಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+