ಸೂಕ್ಷ್ಮ ಮನಸ್ಸಿನ ಪದ್ಮಪ್ರಿಯಾ ಸಾವಿನ ಕಾರಣವೇನು?
ಬೆಂಗಳೂರು, ಜೂ.17 : ಹಲವಾರು ಊಹಾಪೋಹಗಳಿಗೆ ತುತ್ತಾಗಿರುವ ಪದ್ಮಪ್ರಿಯಾ ಅವರ ಸಾವಿನ ಪ್ರಕರಣಕ್ಕೆ ಒಪ್ಪಬಹುದಾದ ಕಾರಣವೊಂದನ್ನು ಆಪ್ತಮೂಲಗಳು ಹೊರಗೆಡವಿದೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಗಳ ಪ್ರಕಾರ ಇದು ಆತ್ಮಹತ್ಯೆ ಪ್ರಕರಣ ಎಂದು ಸಾಬೀತಾಗಿದೆ.
ಪದ್ಮಪ್ರಿಯಾ ಅವರದ್ದು ಸೂಕ್ಷ್ಮಮನಸ್ಸು, ಅವರ ಒಳ್ಳೆಯತನವೇ ಅವರಿಗೆ ಮುಳುವಾಯಿತು. ರಾಜಕೀಯ ಜಂಜಾಟ, ಕೌಟುಂಬಿಕ ಕಲಹ ಅವರಿಗೆ ಸಾಕಷ್ಟು ನೋವುಂಟು ಮಾಡಿತ್ತು. ಎಲ್ಲವನ್ನು ತೊರೆದು ಸ್ವತಂತ್ರವಾಗಿ ಜೀವನ ನಡೆಸುವ ಇಚ್ಛೆಯಿಂದ ಪತಿಯನ್ನು ತೊರೆದಿದ್ದು ನಿಜ. ಇದು ಪೂರ್ವನಿರ್ಧಾರವಾಗಿತ್ತು. ಈ ಬಗ್ಗೆ ರಘುಪತಿ ಭಟ್ಟರಲ್ಲೂ ಚರ್ಚಿಸಿದ್ದರು. ಆದರೆ ಇದರ ಮಧ್ಯೆ ಚುನಾವಣೆ ಬಂದಿದ್ದರಿಂದ ವಿಷಯ ಅಲ್ಲಿಗೆ ನಿಂತುಹೋಗಿತ್ತು.
ಪತಿಯ ಪರ ಮತಪ್ರಚಾರದಲ್ಲಿ ಭಾಗವಹಿಸಿ ತಮ್ಮ ಕರ್ತವ್ಯ ಪೂರೈಸಿದ ಪದ್ಮಪ್ರಿಯಾ, ಪೂರ್ವ ನಿರ್ಧಾರದಂತೆ ಮನೆ ತೊರೆಯಲು ನಿರ್ಧರಿಸಿದರು. ಆ ಸಮಯಕ್ಕೆ ಅವರು ನೆರವು ಬೇಡಿದ್ದು, ಕುಟುಂಬದ ಆಪ್ತನಾದ ಆತುಲ್ ರಾವ್ ಅವರನ್ನು. ಈ ಪ್ರಕರಣದಲ್ಲಿ ಅತುಲ್ ಒಬ್ಬ ಸಹಾಯಕ ಅಷ್ಟೆ.
ಅತುಲ್ ಮೇಲೆ ಸಂಶಯ, ನೊಂದ ಪದ್ಮಪ್ರಿಯಾ:
ಅಪಹರಣ ಪ್ರಕರಣ ಸೃಷ್ಟಿಸಿ, ದೆಹಲಿಗೆ ತೆರಳಿದ ಮೇಲೆ ಅಲ್ಲಿ ಕಾಲ್ ಸೆಂಟರ್ ನಲ್ಲಿ ಉದ್ಯೋಗ ಹುಡುಕಲು ನಿರತರಾಗುತ್ತಾರೆ. ಅತುಲ್ ಉಡುಪಿಗೆ ಹಿಂದುರುಗಿ, ಅಪಹರಣ ಪ್ರಕರಣದ ತನಿಖೆಯನ್ನು ಗಮನಿಸುತ್ತಾನೆ. ಆದರೆ ಈ ಮಧ್ಯೆ ಮಾಧ್ಯಮಗಳಿಗೆ ಸರಿಯಾಗಿ ಸುದ್ದಿ ಮುಟ್ಟಿಸದ ಪೊಲೀಸ್ ಇಲಾಖೆ ಹಾಗೂ ಮಾಧ್ಯಮಗಳ ಕಪೋಲ ಕಲ್ಪಿತ ಕಥೆಗಳಿಂದ ಇಡೀ ಪ್ರಕರಣದ ರುವಾರಿ ಅತುಲ್ ಎಂದು ಬಿಂಬಿತವಾಗುತ್ತದೆ.
ಆಸ್ತಿ ಆಸೆಗೆ ಅಥವಾ ಪದ್ಮಪ್ರಿಯಾ ಮೇಲಿನ ಆಸೆಗೆ ಅತುಲ್ ಅಪಹರಣ ಮಾಡಿದ್ದಾನೆಂದು ಕೆಲ ಮಾಧ್ಯಮಗಳ ರೋಚಕ ವರದಿಯನ್ನು ಕಂಡು ಹೌಹಾರಿದ ಪದ್ಮಪ್ರಿಯಾ, ನೆರವಿಗೆ ಬಂದ ಆಪ್ತ ಆತುಲ್ ಅವರು ಕಷ್ಟಕ್ಕೆ ಸಿಲುಕುತ್ತಿರುವದನ್ನು ಕಂಡು ಬೇಸರಗೊಂಡು, ಶನಿವಾರ ರಾತ್ರಿ ಕಡೆಯ ಕರೆ ಮಾಡಿದಾಗಲೂ ಈ ಆತಂಕವನ್ನು ಅತುಲ್ ಅವರೊಡನೆ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಅತುಲ್ ಬಂಧನ ಸುದ್ದಿ, ಉಡುಪಿಗೆ ಹಿಂದಿರುಗಬೇಕೆಂಬ ಒತ್ತಡವನ್ನು ಸಹಿಸದೆ ನೇಣಿಗೆ ಶರಣಾಗಿರಬಹುದು ಎಂಬುದು ಆಪ್ತ ಮೂಲಗಳ ಸ್ಪಷ್ಟ ಹೇಳಿಕೆಯಾಗಿದೆ.
(ಏಜೆನ್ಸೀಸ್)
ಪೂರಕ ಓದಿಗೆ:
ಮುಗಿದ ಪದ್ಮಪ್ರಿಯಾ ಮರಣೋತ್ತರ ಪರೀಕ್ಷೆ
ಶಾಸಕ ರಘುಪತಿ ಪತ್ನಿ ಪದ್ಮಪ್ರಿಯಾ ನಿಗೂಢ ಸಾವು
ಶಾಸಕರಘುಪತಿ ಪತ್ನಿ ಪದ್ಮಪ್ರಿಯ ಮಾಲೂರಿನಲ್ಲಿ ಪತ್ತೆ
ಇನ್ನೂ ಕಗ್ಗಂಟಾಗಿರುವ ಪದ್ಮಪ್ರಿಯಾ ನಾಪತ್ತೆ ಪ್ರಕರಣ
ಪದ್ಮಪ್ರಿಯಾ ಪತಿ ಕೆ. ರಘುಪತಿ ಭಟ್












Click it and Unblock the Notifications