ಪದ್ಮಪ್ರಿಯಾ ಪತಿ ಕೆ. ರಘುಪತಿ ಭಟ್

Udupi MLA K. Raghupathi Bhat
ಉಡುಪಿಯ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರು ಇದ್ದಕ್ಕಿದ್ದಂತೆ ಕಾಣೆಯಾಗಿರುವುದು ರಾಜಕೀಯ ವಲಯದಲ್ಲಿಯೂ ಭಾರೀ ಕುತೂಹಲ ಕೆರಳಿಸಿದೆ. ಎರಡನೇ ಬಾರಿ ಉಡುಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಭಟ್ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವುದರಿಂದ ಪತ್ನಿ ಕಣ್ಮರೆಯಾಗಿರುವ ಸುದ್ದಿ ಅವರಿಗೆ ಬರಸಿಡಿಲಿನಂತೆ ಬಂದೆರಗಿದೆ. ಅವರು ಯಾವ ಪ್ರತಿಕ್ರಿಯೆಗೂ ಸಿಗುತ್ತಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಅವರು ಉಡುಪಿಗೆ ಧಾವಿಸಿದ್ದಾರೆ.

ಜೂನ್ 10ರಂದೇ ಮಾರುತಿ ವ್ಯಾಗನ್ ಆರ್ ಕಾರಿನಲ್ಲಿ ಸ್ವತಃ ಡ್ರೈವ್ ಮಾಡಿಕೊಂಡು ತವರಿಗೆ ಹೊರಟ 32ರ ಹರೆಯದ ಪದ್ಮಪ್ರಿಯಾ ತವರಿಗೂ ಹೋಗಿಲ್ಲ, ಮರಳಿಯೂ ಬಂದಿಲ್ಲ. ನಿಗೂಢವಾಗಿ ಪದ್ಮಪ್ರಿಯಾ ಅವರು ಕಣ್ಣರೆಯಾಗಿರುವುದು ಪೊಲೀಸರಿಗೂ ಬಿಡಿಸಲಾರದ ಕಗ್ಗಂಟಾಗಿದೆ. ಅವರಾಗಿಯೇ ಕಣ್ಮರೆಯಾಗಿರಬಹುದೆ? ಅಪಹರಣವಾಗಿರಬಹುದೆ? ಎಂಬ ಜಿಜ್ಞಾಸೆಯಲ್ಲಿಯೇ ಇನ್ನೂ ಪೊಲೀಸರು ಮುಳುಗಿದ್ದಾರೆ. ಕಾರಿನಲ್ಲಿಯೇ ದೊರೆತ ಹಣ, ಬಳೆ, ಸಿಮ್ ಕಾರ್ಡ್‌ಗಳು ಪೊಲೀಸರನ್ನು ಮತ್ತಷ್ಟು ಗೊಂದಲದಲ್ಲಿ ನೂಕಿವೆ. ಶ್ವಾನದಳ, ಬೆರಳಚ್ಚು ತಜ್ಞರ ಸಮೇತ ಅವರ ಪತ್ತೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಈ ರಘುಪತಿ ಯಾರು? : ಜನಾನುರಾಗಿಯಾಗಿರುವ ರಘುಪತಿಯವರು 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿಯೂ ಆಯ್ಕೆಯಾಗಿ ಬಂದಿದ್ದರು. ಇತ್ತೀಚೆಗೆ ನಡೆದ 13ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ಅವರನ್ನು 2,479 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಯಾವಾಗಲೂ ಜನರ ನಡುವೆಯೇ ಇರಬಯಸುವ ರಘುಪತಿ ಜಿಲ್ಲೆಯಲ್ಲಿ ಸಾಕಷ್ಟು ಸುಧಾರಣೆ ಕಾರ್ಯಗಳನ್ನು ಕೈಗೊಂಡಿದ್ದಾರೆ. ಉಡುಪಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿಯೂ ಕ್ರಿಯಾತ್ಮಕವಾಗಿ ಭಾಗಿಯಾಗಿದ್ದರು.

ರಾಜಕೀಯ, ಸಾಮಾಜಿಕ ಕಾರ್ಯಗಳ ನಡುವೆ ಅಂತರ್ಜಾಲವನ್ನೂ ವಿಹರಿಸುವ ರಘುಪತಿ ತಮ್ಮದೇ ಆದ ಬ್ಲಾಗ್ ಕೂಡ ಹೊಂದಿದ್ದಾರೆ. ಬ್ಲಾಗ್‌ನಲ್ಲಿ ತಾವು ಕೈಗೊಂಡ ಕಾರ್ಯಕ್ರಮಗಳ ಆಲ್ಬಂ ಮಾಡಿದ್ದಾರೆ.

ಅವರ ಬ್ಲಾಗ್ ಹೀಗಿದೆ
ಉಡುಪಿ ಶಾಸಕ ರಘುಪತಿ ಹೆಂಡತಿ ನಾಪತ್ತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+